October 5, 2024

ಚಿಕ್ಕಮಗಳೂರು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಶ್ರೀಮತಿ ಕಲ್ಪನಾ ಪ್ರದೀಪ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ನಿರ್ಗಮಿತ ಅಧ್ಯಕ್ಷೆ ಸವಿತಾ ರಮೇಶ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ ; ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘವನ್ನು ಹಲವರು ಪರಿಶ್ರಮದೊಂದಿಗೆ ಕಟ್ಟಿದ್ದು ಇಂದು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಇನ್ನ? ಸಮಾಜಮುಖಿ ಕಾರ್ಯಗಳೊಂದಿಗೆ ಅತ್ಯುತ್ತಮ ಸಂಘವನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು  ತಿಳಿಸಿದರು.

ಇಂದು ಸಂತಸ ಒಂದೆಡೆಯಾದರೆ ಅಧಿಕಾರ ಹಸ್ತಾಂತರ ಮಾಡುವ ದಿನ ಇನ್ನೊಂದೆಡೆ ಆಗಿದೆ ಈ ನಿಟ್ಟಿನಲ್ಲಿ ಸಂಘದೊಂದಿಗೆ ಅವಿನಾಭಾವ ಸಂಬಂಧ ಇನ್ನೂ ಹೆಚ್ಚಾಗಿದೆ. ಕುರ್ಚಿಗಾಗಿ ಹೋರಾಡುತ್ತೇವೆ ಅದು ಹೂವಿನ ಕುರ್ಚಿ ಆಗಿರಲಿಲ್ಲ. ಆಯ್ಕೆಯಾದವರು ಮುಳ್ಳಿನ ಮೇಲೆ ಕುಳಿತ ಅನುಭವ ನನಗಾಗಿದೆ ಎಂದರು.

ಆಯ್ಕೆಯಾದವರ ಒಳ್ಳೆಯತನಕ್ಕಿಂತ ಬೇರೆಯವರಿಗೆ ತಪ್ಪುಗಳು ಹೆಚ್ಚು ಕಾಣಿಸುತ್ತವೆ. ಈ ಹಿನ್ನೆಲೆಯಲ್ಲಿ ತುಂಬಾ ಎಚ್ಚರಿಕೆಯಿಂದ ಸೇವೆ ಸಲ್ಲಿಸಬೇಕಾಗಿದೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಂಘವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ತಿಳಿಸಿದರು.

ಸಮಾಜಮುಖಿ ಕಾರ್ಯಾಗಳಲ್ಲಿ ತೊಡಗಿದಾಗ ಅಪವಾದ, ಟೀಕೆ-ಟಿಪ್ಪಣಿಗಳು ಬರುತ್ತವೆ ಇವುಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು ಸಮಸ್ಯೆಗಳು ಎದುರಾದಾಗ ಮಾತೃ ಸಂಘದ ಮಾರ್ಗದರ್ಶನ ಸಲಹೆಗಳನ್ನು ಪಡೆದು ಮುನ್ನುಗ್ಗಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದ ಪ್ರತಿಷ್ಠಿತ ಸಂಘವಾಗಿದ್ದು ಈ ನಿಟ್ಟಿನಲ್ಲಿ ಬಡವರು, ಶೋಷಿತರ ಪರವಾಗಿ ಕೆಲಸ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮಹಿಳಾ ಸಂಘದ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು ಕೆಲಸ ಮಾಡಿ ಎಂದು ಶುಭ ಹಾರೈಸಿದರು.

ನಿಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಮಾತ್ರ ಸಂಘದ ಸಹಕಾರ ಸದಾ ಇರುತ್ತದೆ ಇಂದು ಆಯ್ಕೆಯಾಗಿರುವ 15 ಜನರ ತಂಡ ಸಮಾಜ ಸೇವೆಯಲ್ಲಿ ಉತ್ತಮವಾದ ಅನುಭವ ಇರುವ ತಂಡವಾಗಿದೆ ಇವರೆಲ್ಲರ ಸಲಹೆ ಸಹಕಾರವನ್ನು ಅಧ್ಯಕ್ಷರು ಪಡೆದು ಪ್ರೀತಿ ವಿಶ್ವಾಸ ಗಳಿಸಿ ಮುಂದೆ ರಾಜ್ಯದಲ್ಲಿ ಒಳ್ಳೆಯ ಹೆಸರು ಪಡೆಯುವಂತಾಗಲಿ ಎಂದು ಹೇಳಿದರು.

ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳ ಹಾಗೂ ಶೋಷಿತ ವರ್ಗದ ಜನರ ಅಭಿವೃದ್ಧಿಗೆ ರೈತರ ನೆರವಿಗೆ ಈ ಸಂಘ ಶ್ರಮ ವಹಿಸಲಿ. ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಮ್ಮೆಲ್ಲರ ಅಭಿಲಾಷೆಯಾಗಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷೆ ಎಂ.ಎಸ್ ಕಲ್ಪನಾಪ್ರದೀಪ್ ಮಾತನಾಡಿ ಎಲ್ಲರ ವಿಶ್ವಾಸದೊಂದಿಗೆ ಸಂಘವನ್ನು ಕ್ರಿಯಾಶೀಲವಾಗಿ ನಡೆಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ಮಹಿಳಾ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಸ್ಮಿತಾಸುರೇಶ್, ಪ್ರಧಾನ ಕಾರ್ಯದರ್ಶಿ ಜಾಹ್ನವಿಜಯರಾಮ್, ಸಹ ಕಾರ್ಯದರ್ಶಿ ಶಿಲ್ಪಾವಿಜಯ್, ಸಂಘದ ನೂತನ ಉಪಾಧ್ಯಕ್ಷರಾದ ಎ.ಆರ್.ಕಾವ್ಯ, ಕಾರ್ಯದರ್ಶಿ ಹೆಚ್.ಸಿ.ಅಮಿತವಿಜೇಂದ್ರ, ಸಹ ಕಾರ್ಯದರ್ಶಿ ಹೆಚ್.ಎ.ಕೋಮಲಾ, ನಿರ್ದೇಶಕರುಗಳಾದ ಮಂಜುಳಹರೀಶ್, ಸಿ.ಜೆ.ವೇದಾವತಿ, ಕೆ.ಎಸ್.ರಾಗಿಣಿ, ಡಿ.ಚಂಪ, ಎಂ.ಡಿ.ಅನುಪಮಾ, ಹೆಚ್.ಡಿ.ವಿನುತಪ್ರಸಾದ್, ಎ.ಆರ್.ರಾಜೇಶ್ವರಿ, ಕೀರ್ತಿಕೌಶಿಕ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ