October 5, 2024

ಕರ್ನಾಟಕದ ಕ್ರಿಕೆಟಿಗ ಕೆ.ಸಿ ಕಾರ್ಯಪ್ಪ ತನ್ನ ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವತಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ಯುವತಿ ಮಾಡಿರುವ ಕೆಲವು ಗಂಭೀರ ಆರೋಪಗಳಿಂದ ಕ್ರಿಕೆಟಿಗ ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿರುವ ಪ್ರಸಂಗ ನಡೆದಿದೆ.

ಕಾರಿಯಪ್ಪ ದೂರಿನಲ್ಲಿ ತನ್ನ ಮಾಜಿ ಪ್ರೇಯಸಿಯು ತನಗೆ ಹಾಗೂ ಕುಟುಂಬ ಸದಸ್ಯರಿಗೆ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕಾರ್ಯಪ್ಪ ಬೆಂಗಳೂರಿನ ಆರ್​.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್ ನಿವಾಸಿಯಾಗಿರುವ 29 ವರ್ಷದ ಕೆ.ಸಿ ಕಾರ್ಯಪ್ಪ ಕೊಡಗಿನ 24 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದರು  ಎನ್ನಲಾಗಿದೆ. ಆದರೆ ಆಂತರಿಕ ಕಲಹದಿಂದಾಗಿ ಈ ಜೋಡಿ ಹೆಚ್ಚು ಕಾಲ ಮುಂದುವರೆದಿರಲಿಲ್ಲ. ಡ್ರಗ್ ವ್ಯಸನಿ, ಕುಡಿತದ ಚಟ ಮತ್ತು ಅನೈತಿಕ ಸಂಬಂಧ ಹೊಂದಿದ್ದ ಕಾರಣ ನಾನು ಆಕೆಯಿಂದ ದೂರವಾಗಿದ್ದೆ ಎಂದು ಕೆ.ಸಿ ಕಾರ್ಯಪ್ಪ ತಿಳಿಸಿದ್ದಾರೆ.

ಆದರೆ ಈ ಬ್ರೇಕ್ ಅಪ್ ಬೆನ್ನಲ್ಲೇ ವರ್ಷದ ಹಿಂದೆಯೇ ಅಂದರೆ ಡಿಸೆಂಬರ್ 31, 2022 ರಂದು ಯುವತಿ ಕೆ.ಸಿ ಕಾರ್ಯಪ್ಪ ವಿರುದ್ಧ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ಪ   ತನಗೆ ಬಲವಂತವಾಗಿ ಗರ್ಭಪಾತ ಮಾತ್ರೆಗಳನ್ನು ತಿನ್ನಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರು ದಾಖಲಾಗಿ ಇದೀಗ ಒಂದು ವರ್ಷದ ಬಳಿಕ ಕೆ.ಸಿ ಕಾರ್ಯಪ್ಪ ಗಂಭೀರ ಆರೋಪದೊಂದಿಗೆ ಯುವತಿ ವಿರುದ್ಧ ಆರ್​.ಟಿ ನಗರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಯುವತಿಯ ಆರೋಪವೇನು
ಈ ಬಗ್ಗೆ ಮಾತನಾಡಿರುವ ಯುವತಿ, ಕಾರ್ಯಪ್ಪ ತನ್ನನ್ನು ಮದುವೆಯಾಗುವುದಾಗಿ ಹೇಳಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಮನವೊಲಿಸಲು ಮುಂದಾಗಿದ್ದರು. ಅವರ ಕ್ರಿಕೆಟ್ ವೃತ್ತಿಜೀವನವನ್ನು ಪರಿಗಣಿಸಿ ನಾನು ಪೊಲೀಸರಿಗೆ ಯಾವುದೇ ಸಾಕ್ಷ್ಯವನ್ನು ನೀಡಲಿಲ್ಲ. ಇದೀಗ ನಾನು ಯಾವುದೇ ಸಾಕ್ಷ್ಯವನ್ನು ನೀಡದ ಕಾರಣ, ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಕಾರ್ಯಪ್ಪ ನೀಡಿದ ದೂರಿನ ಆಧಾರದ ಮೇಲೆ ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ವಿರುದ್ಧದ ದೂರಿನ ಬಗ್ಗೆ ತನಗೆ ಇನ್ನೂ ತಿಳಿದಿಲ್ಲ. ಆದರೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ಯುವತಿ ತಿಳಿಸಿದ್ದಾರೆ.

ಇದೀಗ ಯುವತಿ ಕಾರಿಯಪ್ಪ ವಿರುದ್ಧ ನೀಡಿರುವ ದೂರಿನಲ್ಲಿ ಕಾರಿಯಪ್ಪ ಮಾದಕ ವಸ್ತು ವ್ಯಸನಿಯಾಗಿದ್ದರು, ಕ್ರಿಕೆಟ್ ಆಟ ಮುಗಿಸಿ ಕೊಠಡಿಗೆ ಬಂದ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿತ್ತಿದ್ದರು ಎಂದು ಹೇಳಿಕೆ ನೀಡಿರುವುದು ಹಾಗೂ ಇದಕ್ಕೆ ಪೂರಕವಾಗಿ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಇದೀಗ ಕಾರಿಯಪ್ಪಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಯುವತಿ ವಿರುದ್ಧ ಕಾರಿಯಪ್ಪ ಆರೋಪ
ನಾನು ಮದ್ಯಪಾನ ಮತ್ತು ಮಾದಕ ವ್ಯಸನ ತ್ಯಜಿಸುವಂತೆ ಆಕೆಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದೆ. ಆದರೆ ಆಕೆ ತನ್ನ ಮಾತಿಗೆ ಕಿವಿಗೊಡದ ಕಾರಣ ಬೇರ್ಪಡಲು ನಿರ್ಧರಿಸಿದ್ದಾಗಿ ಕಾರ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಹೆಸರನ್ನು ಬರೆದು ಆತ್ಮಹತ್ಯೆ ಪತ್ರವನ್ನು ಹಾಕಿದ್ದಾಳೆ ಎಂದು ಕಾರ್ಯಪ್ಪ ಆರೋಪಿಸಿದ್ದಾರೆ. ಈ ಯುವತಿಯಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಎಂದು ಆರೋಪಿಸಿದ್ದಾರೆ.

ಯಾರಿವರು ಕಾರಿಯಪ್ಪ ?

ಕೊಡಗು ಮೂಲದ ಕಾರಿಯಪ್ಪ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಕರ್ನಾಟಕ ಅಂಡರ್ 19 ತಂಡದಲ್ಲಿ ಆಗಿದ್ದು, ಕೆ.ಪಿ.ಎಲ್.ನಲ್ಲಿ ಬಿಜಾಪುರ ಬುಲ್ಸ್ ಪರ ಆಡಿದ್ದಾರೆ. ಕರ್ನಾಟಕದ ರಣಜಿ ಸಂಭಾವನೀಯರ ತಂಡಕ್ಕೆ ಆಯ್ಕೆಯಾಗಿದ್ದು, ಅಂತಿಮ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಕೆ.ಪಿ.ಎಲ್. ನ ಸಾಧನೆಯಿಂದ ಐ.ಪಿ.ಎಲ್. ಪ್ರಾಂಚೈಸಿಗಳ ಗಮನ ಸೆಳೆದು ಕೊಲ್ಕತ್ತಾ ನೈಟ್ ರೈಡರ್ಸ್​, ಪಂಜಾಬ್ ಕಿಂಗ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದಾರೆ. ಒಟ್ಟು 11 ಐ.ಪಿ.ಎಲ್. ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕಾರ್ಯಪ್ಪ 8 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇದೇ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅವರು ಅನ್​ ಸೋಲ್ಡ್ ಆಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ