October 5, 2024

ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ಮತ್ತು ಆಲ್ಟ್ರಾಟೆಕ್ ಸಿಮೆಂಟ್ಸ್ ಇವರ ವತಿಯಿಂದ
2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 13 ರಂದು ಮಂಗಳೂರಿನ ಮಿಲಾಗ್ರಿಸ್ ಹಾಲ್ ನಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡಗಳು, ವಿನ್ಯಾಸಗಳನ್ನು ಗುರುತಿಸಿ ಬಹುಮಾನ ವಿತರಿಸಲಾಯಿತು.

ಅತ್ಯುತ್ತಮ ರೆಸಿಡೆನ್ಸಿಯಲ್ ವಿಲ್ಲಾ (Well Built Residential Villa) ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದ ಕೆ.ಆರ್. ಕೇಶವ್ ಅವರ ಪೂಲ್ ವಿಲ್ಲಾ (Pool Villa at Kenjige)  ನಿವಾಸ ಪ್ರಥಮ ಬಹುಮಾನ ಗಳಿಸಿಕೊಂಡಿದೆ.

 

ಕಾಫಿ ಮತ್ತು ಕಾಳುಮೆಣಸು ಕೃಷಿಕರಾಗಿ ಹೆಸರು ಮಾಡಿರುವ ಮತ್ತು ಬ್ಲಾಕ್ ಗೋಲ್ಡ್ ಲೀಗ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಕೆ.ಆರ್. ಕೇಶವ್ ಅವರು ಕೆಂಜಿಗೆಯ ತಮ್ಮ ಕಾಫಿ ಎಸ್ಟೇಟ್ ನಲ್ಲಿ  “ಪೂಲ್ ವಿಲ್ಲಾ” ಹೆಸರಿನಲ್ಲಿ ಆಕರ್ಷಕವಾದ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಕಾಫಿ ಎಸ್ಟೇಟ್ ಒಳಗೆ ಸುತ್ತಲೂ ಹಚ್ಚಹಸುರಿನ ಸುಂದರ ಪರಿಸರದ ನಡುವೆ ಈ ವಿಲ್ಲಾ ನಿರ್ಮಾಣವಾಗಿದೆ.

ಸ್ವಿಮಿಂಗ್ ಪೂಲ್ ಸೇರಿದಂತೆ ಅತ್ಯುತ್ತಮ ಮತ್ತು ಆಕರ್ಷಕ ವಿನ್ಯಾಸದಲ್ಲಿ ರೂಪುಗೊಂಡಿರುವ ಈ ಮನೆಯೂ ನೋಡುಗರ ಗಮನ ಸೆಳೆಯುತ್ತದೆ. ಮಲೆನಾಡಿನ ಕಾಫಿ ಎಸ್ಟೇಟ್ ಮನೆಗಳ ಸಾಲಿನಲ್ಲಿ ಈ ಮನೆ ವೈಶಿಷ್ಟಪೂರ್ಣವಾಗಿದೆ. ಸಾಂಪ್ರದಾಯಿಕ ಮಲೆನಾಡಿನ ಶೈಲಿ ಮತ್ತು ಆಧುನಿಕ ತಂತ್ರಜ್ಞಾನಗಳ ಸಮ್ಮಿಶ್ರಣವಾಗಿ ಈ ವಿಲ್ಲಾವನ್ನು ವಿನ್ಯಾಸಗೊಳಿಸಿದ್ದು, ಮನಸಿಗೆ ಮುದನೀಡುವಂತಿದೆ.

ಅರ್ಕಿಟೆಕ್ ಪ್ರಮೋದ್ ಕೆಂಜಿಗೆ ಅವರ ವಿನ್ಯಾಸ ಮತ್ತು ಮಾರ್ಗದರ್ಶನದಲ್ಲಿ ನಿರ್ಮಾಣವಾಗಿದ್ದ ಈ ಮನೆಯ ಇಂಜಿನಿಯರ್ ಸುಹೈಲ್ ಬಾಷಾ ಮತ್ತು ಗುತ್ತಿಗೆದಾರರಾಗಿ ಹಸೈನ್ ಬಾಷಾ ಕಾರ್ಯನಿರ್ವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ