October 5, 2024

ಯಾವುದೇ ಸಂಸ್ಥೆಗಳಾದರೂ ಮೊದಲು ರೈತರಿಗೆ ಲಾಭ ತಂದುಕೊಡುವ ಕೆಲಸ ಮಾಡಬೇಕು. ಆಗ ರೈತ ಉದ್ಧಾರವಾಗುವ ಜೊತೆಗೆ ಸಂಸ್ಥೆಗಳೂ ಬೆಳವಣಿಗೆಯಾಗುತ್ತವೆ. ಯಾವುದೇ ಬೆಳೆಯಾಗಲಿ ರೈತರು ಆ ಬೆಳೆಗಳಿಗೆ ಬರುವ ರೋಗಗಳ ನಿರ್ವಹಣೆ ಮಾಡುವ ಕಲೆ ತಿಳಿದುಕೊಂಡಿರಬೇಕು. ಆಗ ಮಾತ್ರ ಉತ್ತಮ ಫಸಲು ಪಡೆದು ಲಾಭ ಗಳಿಸಲು ಸಾಧ್ಯ ಎಂದು  ಬೆಂಗಳೂರಿನ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿ.ಎನ್.ಪ್ರಸಾದ್ ಸಲಹೆ ನೀಡಿದರು.

ಚಿಕ್ಕಮಗಳೂರು  ನಗರದ ಹೊರವಲಯದ ಬೈನರಿ ಎಕ್ಸೋಟಿಕ ರೆಸಾರ್ಟ್ನಲ್ಲಿ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಹಾಗೂ ಸೊಲ್ಲಾಪುರದ ದಾಳಿಂಬೆ ಸಂಶೋಧನಾ ಕೇಂದ್ರದಿಂದ ಬುಧವಾರ ಆಯೋಜಿಸಲಾಗಿದ್ದ ದಾಳಿಂಬೆ ತಾಂತ್ರಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,  ರೈತರನ್ನು ಸದೃಢಗೊಳಿಸುವುದೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕೆಲಸ. ಆದರೆ ಕೆಲವೊಮ್ಮೆ ಇದು ಇಲಾಖೆಗಳಿಂದ ಸಾಧ್ಯವಾಗದಿದ್ದಾಗ ರೈತರ ಪರವಾಗಿರುವ ಬೆಳೆಗಾರರ ರೈತೋತ್ಪಾದಕ ಸಂಸ್ಥೆಗಳಿಗೆ ಸಹಕಾರವನ್ನು ನೀಡುತ್ತೇವೆ. ಒಟ್ಟಾರೆ ರೈತರು ಅಭಿವೃದ್ಧಿಯಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಮನುಷ್ಯರಲ್ಲಿ ಕೆಲವರಲ್ಲಿ ಒಳ್ಳೆಯತನವಿರುತ್ತದೆ. ಇನ್ನು ಕೆಲವರಲ್ಲಿ ಕೆಟ್ಟತನವಿರುತ್ತದೆ. ಹೀಗಿರುವಾಗ ಯಾರಿಗಾದರೂ ಒಳ್ಳೆಯದನ್ನು ಮಾಡಲು ಹೋದಾಗ ಟೀಕಿಸಿ ಮಾತನಾಡುವವರು ಇರುತ್ತದೆ. ಅಂಥವರನ್ನು ನಿರ್ಲಕ್ಷ್ಯ ಮಾಡಬೇಕು. ಸಣ್ಣತನವನ್ನು ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ಎಲ್ಲೂ ಒಂದಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಆರ್‌ಪಿಜಿ ಅಧ್ಯಕ್ಷ ಡಾ.ಎಚ್.ಆರ್.ಯೋಗೀಶ್ವರ್ ಮಾತನಾಡಿ, ನಮ್ಮ ರೈತೋತ್ಪಾದಕ ಸಂಸ್ಥೆಯ ಉದ್ದೇಶ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಪರಿಕರ ಸಿಗಬೇಕು, ಮಾರುಕಟ್ಟೆ ಸಿಗಬೇಕು ಹಾಗೂ ತಾಂತ್ರಿಕ ಸಲಹೆ ಸಿಗಬೇಕು ಎನ್ನುವುದಾಗಿದೆ. ಈಗಾಗಲೇ ರೈತರಿಗೆ ಎಲ್ಲ ರೀತಿಯ ಸಲಹೆ ನೀಡಿ ಅವರ ಅಭ್ಯುದಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂಸ್ಥೆ ಆರಂಭಗೊಂಡ ಎರಡೂವರೆ ವರ್ಷದಲ್ಲಿಯೇ ದಾಳಿಂಬೆ ಬೆಳೆಗಾರರಿಗೆ ತಾಂತ್ರಿಕ ಸಲಹೆ ನೀಡುವ ಮೂಲಕ ಅವರ ಬೆಳೆಗಳಲ್ಲಿ ಅದನ್ನು ಅಳವಡಿಸಿಕೊಳ್ಳಲು ಕ್ರಮಗೊಳ್ಳಲಾಗಿದೆ. ಸಂಸ್ಥೆ ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು, ಮುಂದಿನ ವರ್ಷದಿಂದ ಸದಸ್ಯರಿಗೆ ಡಿವಿಡೆಂಟ್ ನೀಡಲು ತೀರ್ಮಾನಿಸಿದ್ದೇವೆ. ರೈತರ ಬೆಳೆಗಳನ್ನು ಸಂಗ್ರಹಿಸಲು ಸಂಸ್ಕರಣಾ ಘಟಕವನ್ನೂ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೊಲ್ಲಾಪುರ ದಾಳಿಂಬೆ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರದ ಹಿರಿಯ ವಿಜ್ಞಾನಿ ಡಾ.ಎನ್.ಮಂಜುನಾಥ್, ತಳಿಶಾಸ್ತ್ರ ಮತ್ತು ಸಸ್ಯ ಸಂತಾನೋತ್ಪತ್ತಿ ವಿಭಾಗದ ವಿಜ್ಞಾನಿ ಡಾ.ಶಿಲ್ಪಾ ಪರಶುರಾಮ್, ಹಿರಿಯ ವಿಜ್ಞಾನಿ ಡಾ.ಸೋಮನಾಥ್ ಸುರೇಶ್ ಪೊಕರೆ, ಹಾಸನದ ಜಂಟಿ ಕೃಷಿ ನಿರ್ದೇಶಕರ ರಾಜು ಸುಲೋಚನಾ, ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತಾ, ನಿರ್ದೇಶಕರುಗಳಾದ ಮಂಜುನಾಥ್, ಮಹಾಬಲೇಶ್, ಯತೀಶ್, ದಿನೇಶ್ ಟಿ.ಬಿ ಕಾವಲು, ಯತೀಶ್ ಎಸ್ ಸೇರಿದಂತೆ ದಾಳಿಂಬೆ ಬೆಳೆಗಾರರು ಪಾಲ್ಗೊಂಡಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ