October 5, 2024

ಭಾರತದ ಸಂಸತ್ ಭವನದಲ್ಲಿ ಬಾರೀ ಭದ್ರತಾ ವೈಪಲ್ಯ ಬಹಿರಂಗವಾಗಿದೆ. ಇಂದು ಮಧ್ಯಾಹ್ನ ಲೋಕಸಭಾ ಕಲಾಪದ ವೇಳೆ ಇಬ್ಬರು ವ್ಯಕ್ತಿಗಳು ಕಲಾಪ ಮೇಲೆ ದಾಳಿ ಮಾಡಿ ಗೊಂದಲ ಸೃಷ್ಟಿಸಿದ್ದಾರೆ.

ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಸದನ ನಡೆಯುತ್ತಿದ್ದ ಜಾಗಕ್ಕೆ ಜಿಗಿದಿದ್ದಾರೆ. ತಾವು ಡಬ್ಬವೊಂದರಲ್ಲಿ ತಂದಿದ್ದ ಬಣ್ಣದ ಅನಿಲವನ್ನು ಸದನದ ಒಳಗೆ ಹರಿಯಬಿಟ್ಟಿದ್ದಾರೆ.

ತಕ್ಷಣ ಸದನದಲ್ಲಿದ್ದ ಲೋಕಸಭಾ ಸದಸ್ಯರು ಆ ವ್ಯಕ್ತಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಆ ವ್ಯಕ್ತಿಗಳು ಸದನದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅಂತಿಮವಾಗಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯುವಲ್ಲಿ ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದಾರೆ.

ಅದೇ ಸಂದರ್ಭದದಲ್ಲಿ ಓರ್ವ ಮಹಿಳೆ ಮತ್ತು ಪುರುಷ ಸಂಸತ್ ಭವನದ ಹೊರಭಾಗದಲ್ಲಿ  ಬಣ್ಣದ ಪಟಾಕಿಯನ್ನು ಸಿಡಿಸಿ ಪ್ರತಿಭಟನೆ ನಡೆಸಿದ್ದಾರೆ. ನೀಲಂ  ಮತ್ತು ಅಮೋಲ್‌ ಶಿಂಧೆ  ಎಂದು ಗುರುತಿಸಲಾಗಿದೆ. ಅವರುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಸಂಸತ್ ಭವನದ ಒಳಭಾಗದಲ್ಲಿ ದಾಳಿ ಮಾಡಿದ ಇಬ್ಬರು ವ್ಯಕ್ತಿಗಳನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮನೋರಂಜನ್ ಎಂಬಾತ ಕರ್ನಾಟಕದ ಮೈಸೂರು ಮೂಲದವನು ಎಂದು ತಿಳಿದುಬಂದಿದೆ.

ಇವರು ಯಾವ ಕಾರಣಕ್ಕೆ ಇಂತಹ ಕೃತ್ಯ ನಡೆಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾವುದಾದರೂ ಸಂಘಟನೆಗೆ ಸೇರಿದವರ ಎಂಬುದು ಸ್ಪಷ್ಟವಾಗಿಲ್ಲ.

2001ರಲ್ಲಿ ಸಂಸತ್ ಭವನದ ಮೇಲೆ ದಾಳಿನಡೆಸಿದ 22ನೇ ವರ್ಷದ ದಿನವೇ ದುಷ್ಕರ್ಮಿಗಳು ಇಂತಹ ಕೃತ್ಯ ನಡೆಸಿರುವುದು ಹಲವಾರು ಅನುಮಾನಗಳಿಗೆ ಆಸ್ಪದ ನೀಡಿದೆ. 2001 ರ ಡಿಸೆಂಬರ್ 13ರಂದು ಭಯೋತ್ಪಾದಕರು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 9  ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. 5 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಅನೇಕ ಮಂದಿ ಗಾಯಗೊಂಡಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ