October 5, 2024

ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ ಬೆಳೆದ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಭತ್ತ, ಕಾಫಿ ಕಟಾವು ಮಾಡುವ ಸಮಯ. ಈ ಸಮಯದಲ್ಲಿ ಮಳೆ ಬಂದರೆ ಮಲೆನಾಡಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ.

ಕಳೆದ ಒಂದು ವಾರದಿಂದ ಮಲೆನಾಡಿನಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.

ಅರೇಬಿಕಾ ಕಾಫಿ ಬಹುತೇಕ ಹಣ್ಣಾಗಿದ್ದು, ಮಳೆಯಿಂದಾಗಿ ಅಪಾರ ಹಾನಿ ಉಂಟಾಗುತ್ತಿದೆ. ಹಾಗೆಯೇ ರೊಬಸ್ಟಾ ಕಾಫಿ ಕೂಡ ಕೆಲವು ಕಡೆ ಹಣ್ಣಾಗಿದ್ದು, ಮಳೆಯಿಂದ ಹಣ್ಣು ಒಡೆದು ನೆಲಕ್ಕೆ ಬೀಳುತ್ತಿವೆ. ಜೊತೆಗೆ ಕಾಫಿ ಅಕಾಲಿಕವಾಗಿ ಹೂವಾಗುವ ಸಂಭವವಿದ್ದು, ಇದರಿಂದ ಮುಂದಿನ ವರ್ಷದ ಫಸಲಿಗೂ ಹಾನಿಯಾಗಲಿದೆ.

ಭತ್ತದ ಕಣಜ ಎಂದೇ ಖ್ಯಾತಿ ಹೊಂದಿರುವ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ, ಚಕ್ಕೋಡಿಗೆ, ಉದುಸೆ   ಭಾಗದಲ್ಲಿ ನೆನ್ನೆ ಸಂಜೆ ಸುರಿದ ಭಾರಿ ಮಳೆಗೆ ರೈತರ ನೆಮ್ಮದಿ ಕಡಿಸಿದ್ದು ಕಟಾವು ಮಾಡಿದ ಪೈರು ಮಳೆಗೆ ಸಿಲುಕಿ ಅಕ್ಷರಶ: ನೀರುಪಾಲಾಗಿದೆ. ಮಳೆರಾಯನ ಚೆಲ್ಲಾಟದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ .

ಡಿಸೆಂಬರ್ ತಿಂಗಳಲ್ಲಿ ಬಹುತೇಕ ರೈತರು ಭತ್ತದ ಬೆಳೆಯನ್ನು ಶೇಕಡ 50 ರಷ್ಟು ಕಟಾವು ಮಾಡಿದ್ದು ಈಗ ಮೂರು ನಾಲ್ಕು ದಿನಗಳಿಂದ ಬರುತ್ತಿರುವ ಅಕಾಲಿಕ ಮಳೆಗೆ ರೈತರುಗಳು   ತತ್ತರಿಸಿದ್ದು, ಮಲೆನಾಡಿನ ರೈತ ಸಮೂಹ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಭತ್ತ ಬೆಳೆದ ರೈತರು ಸದ್ಯ ಅಕಾಲಿಕ ಮಳೆಗೆ  ಸಿಲುಕಿ ನಲುಗಿದ್ದಾನೆ. ಅಕಾಲಿಕ ಮಳೆಯಿಂದ ಮಲೆನಾಡು ಭಾಗದ ಅಪಾರ ಪ್ರಮಾಣದ ಭತ್ತ ನೀರು ಪಾಲಾಗಿದೆ.

ಕಟಾವು ಮಾಡಿದ ಭತ್ತದ ಪೈರು ನೀರಿನಲ್ಲಿ ಮುಳುಗಿ ಮೊಳಕೆಯೋಡೆಯಲು ಪ್ರಾರಂಭಿಸಿದೆ ಇದರಿಂದ ಉತ್ಪಾದನೆ ಮತ್ತು ಗುಣಮಟ್ಟಕ್ಕೆ ಕುತ್ತು ಬೀಳಲಿದೆ ಎಂಬ ಆತಂಕ ಎದುರಾಗಿದೆ. ಹಾಗೊ ಹೀಗೂ ಬತ್ತವನ್ನು ಒಣಗಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಭತ್ತಕ್ಕೆ ನಿರೀಕ್ಷಿತ ಬೆಲೆ ಕೂಡ ಸಿಗುತ್ತಿಲ್ಲ. ಭತ್ತ ಮಾರಾಟದಲ್ಲಿ ರೈತರು ಕೈ ಸುಟ್ಟು ಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಮತ್ತಷ್ಟು ರೈತರುಗಳು ಭತ್ತ ಬೆಳೆಯುವುದನ್ನು ಸ್ಥಗಿತಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

ಭತ್ತ ಬೆಳೆದ ರೈತರಿಗೆ ಸೂಕ್ತ ಪರಿಹಾರಕ್ಕೆ  ಒತ್ತಾಯ

ಬೆಳೆ ಕಟಾವು ಮಾಡಿ ಸಂಕಷ್ಟಕ್ಕೆ ಸಿಕ್ಕಿದ ರೈತರಿಗೆ ಕೂಡಲೇ ಕೃಷಿ ಇಲಾಖೆ ಸರ್ವೇ ನಡೆಸಿ, ಈಗಾಗಲೇ ಭತ್ತ ಬೆಳೆಯಲು ಒಂದು ಎಕರೆಗೆ ಕನಿಷ್ಠ 30 ರಿಂದ 35 ಸಾವಿರ ರೂಪಾಯಿಗಳು ಖರ್ಚು ತಗಲುವುದರಿಂದ ಈ ನಷ್ಟದ ಪ್ರಮಾಣವನ್ನು  ಭರಿಸಿಕೊಡಲು ಕೃಷಿ ಇಲಾಖೆ   ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಹೆಗ್ಗರವಳ್ಳಿ ಗ್ರಾಮದ ಸಂಕಷ್ಟಕ್ಕೆ ಸಿಲುಕಿ ಬೆಳೆ ಹಾನಿಗೊಳಗಾದ ರೈತ  ಹೆಚ್.ಏನ್. ಉಮೇಶ್ ಅವರು ಆಗ್ರಹಿಸಿದ್ದಾರೆ.

ವರದಿ : ಸಿ.ಎಲ್.ಪೂರ್ಣೇಶ್ ಚಕ್ಕೂಡಿಗೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ