October 5, 2024

ಟ್ರಕ್ಕಿಂಗ್ ಗೆ ಎಂದು ಬಂದಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ರಾಣಿಝರಿ ಬಳಿಯಿಂದ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ.

ದುರ್ಗದಹಳ್ಳಿಯ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ ಪ್ರವಾಸಿ ತಾಣಕ್ಕೆ ಬೆಂಗಳೂರು ಮೂಲದ ಭರತ್ ಟ್ರಕ್ಕಿಂಗ್ ಬಂದಿದ್ದಾರೆ. ರಾಣಿಝರಿ ಪಾಯಿಂಟ್ ನಲ್ಲಿ ಭರತ್ ಬೈಕ್ ನಿಲ್ಲಿಸಿದ್ದಾರೆ. ಗುಡ್ಡದ ತುದಿಯಲ್ಲಿ ಟೀ ಶರ್ಟ್, ಸ್ಲಿಪ್ಪರ್ ಪತ್ತೆಯಾಗಿವೆ.

ಕಳೆದ ಎರಡು ದಿನದ ಹಿಂದೆ ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಕುಟುಂಬದವರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ.

ಭರತ್ ಬಿಇ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಭರತ್ ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ಎರಡು ದಿನದ ಹಿಂದೆ ರಾಣಿಝರಿಗೆ  ಪ್ರವಾಸಕ್ಕೆ ಬಂದಿದ್ದ  ಎನ್ನಲಾಗಿದೆ.

ಬೆಂಗಳೂರಿನಿಂದ ಭರತ್ ನನ್ನ ಹುಡುಕಿಕೊಂಡು ಪೋಷಕರು ಬಂದಿದ್ದು, ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೀಗ ಭರತ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಪೊಲೀಸ್, ಅರಣ್ಯ ಇಲಾಖೆ, ಬಣಕಲ್ ಸಮಾಜ ಸೇವಕ ಆರೀಫ್, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಡ್ರೋನ್ ಕ್ಯಾಮರ ಬಳಸಿಯೂ ಭರತ್ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ.

ಭರತ್ ಒಬ್ಬರೇ ಬಂದಿದ್ದರಾ ಅಥವಾ ಜೊತೆಗೆ ಯಾರನ್ನಾದರೂ ಕರೆತಂದಿದ್ದರಾ ? ಎಂಬುದು ಖಾತರಿಯಾಗಿಲ್ಲ. ಈ ಘಟನೆಯ ಬಗ್ಗೆ ಹಲವಾರು ಅನುಮಾನಗಳು ಮೂಡುತ್ತಿವೆ.

ಈಗ್ಗೆ ಕೆಲ ತಿಂಗಳ ಹಿಂದೆ ಇದೇ ರೀತಿ ಯುವಕನೋರ್ವ ನಾಪತ್ತೆಯಾಗಿ ನಂತರ ಬೆಳ್ತಂಗಡಿ ಭಾಗದಲ್ಲಿ ಚಾರ್ಮಾಡಿ ಘಾಟ್ ಅರಣ್ಯದಲ್ಲಿ ಪತ್ತೆಯಾಗಿದ್ದ.

ಇಂತಹ ಪ್ರಕರಣಗಳು ಪದೇ ಪದೇ ಈ ಭಾಗದಲ್ಲಿ ಮರುಕಳಿಸುತ್ತಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ