October 5, 2024

ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಗೆಂದು ಬಂದ ಮಹಿಳೆಯರಿಬ್ಬರು ಚಿನ್ನದ ಸರ ಕದ್ದೊಯ್ದಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದ್ದು, ಪೊಲೀಸ್ ದೂರು ದಾಖಲಾಗಿದೆ.

ನಗರದ ಗುಂಚಿ ಸರ್ಕಲ್’ನಲ್ಲಿರುವ ಎಸ್‌.ಎನ್.ಡಿ ಜ್ಯೂವೆಲ್ಲರಿಯಲ್ಲಿ ಕಳವು ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಮಹಿಳೆಯರಿಬ್ಬರ ವಿರುದ್ಧ ಜ್ಯೂವೆಲ್ಲರಿ ಮಾಲಿಕ ರಾಹುಲ್ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ: ತುಮಕೂರು ನಗರದ ಗುಂಚಿ ವೃತ್ತದಲ್ಲಿರುವ ಎಸ್.ಎನ್‌.ಡಿ ಜ್ಯೂವೆಲ್ಲರಿಗೆ ಡಿಸೆಂಬರ್ 2ರಂದು ರಾತ್ರಿ 8.10 ಗಂಟೆ ಸಮಯದಲ್ಲಿ ಇಬ್ಬರು ಮಹಿಳೆಯರು ಬಂದಿದ್ದು, ಮಾಂಗಲ್ಯ ಸರ ತೋರಿಸುವಂತೆ ಕೇಳಿದ್ದಾರೆ.

ಅಂಗಡಿ ಮಾಲೀಕರು ಸರಗಳನ್ನು ತೋರಿಸಿದ್ದು, ಮಹಿಳೆಯರು ಯಾವುದೇ ಸರವನ್ನು ಖರೀದಿ ಮಾಡಿಲ್ಲ. ಬದಲಾಗಿ ಆರ್ಡರ್ ಕೊಡುತ್ತೇವೆ. ಬೇರೆ ಮಾಡಿಕೊಡಿ ಎಂದು ಹೇಳಿದ್ದು, ಹಣವನ್ನು ಎಟಿಎಂನಿಂದ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾರೆ. ಮಹಿಳೆಯರು ಹೋದ ಬಳಿಕ ಜ್ಯೂವೆಲ್ಲರಿ ಮಾಲೀಕರು ಎಲ್ಲಾ ಚಿನ್ನದ ಸರಗಳನ್ನು ತೆಗೆದಿಡುವಾಗ 32 ಗ್ರಾಂ ತೂಕದ ಒಂದು ಚಿನ್ನದ ಸರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

ಬಳಿಕ ಜ್ಯೂವೆಲ್ಲರಿ ಮಾಲೀಕರು ನಗರದ ಎಲ್ಲಾ ಎಟಿಎಂಗಳಲ್ಲಿ ಆ ಇಬ್ಬರು ಮಹಿಳೆಯರಿಗಾಗಿ ಹುಡುಕಾಡಿದ್ದಾರೆ. ಮಹಿಳೆಯರು ಎಲ್ಲಿಯೂ ಸಿಗದೇ ಇದ್ದಾಗ  ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯಲ್ಲಿ ಒಬ್ಬರು ಅಂಗಡಿ ಮಾಲೀಕರೊಂದಿಗೆ ಮಾತನಾಡುತ್ತಲೆ ಸರವನ್ನು ಎಗರಿಸಿರುವ ದೃಶ್ಯ ಕಂಡುಬಂದಿದೆ.  ಸಿಸಿ‌ ಟಿವಿ ದೃಶ್ಯಗಳೊಂದಿಗೆ ಡಿಸೆಂಬರ್ 4ರಂದು  ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿ.ಸಿ.ಟಿವಿಯಲ್ಲಿ ಸೆರೆಯಾಗಿರುವ ಮಹಿಳೆಯರಿಗಾಗಿ ತುಮಕೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ