October 5, 2024

ಅನೇಕ ವರ್ಷಗಳ ಕಾಲ ಮೈಸೂರು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ವಿ‍ಶ್ವಪ್ರಸಿದ್ಧ ಅರ್ಜುನ ಆನೆ ಕಾಡಾನೆ ದಾಳಿಯಿಂದ ಮೃತಪಟ್ಟಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪ ಕಾಡಾನೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾಡಾನೆಯೊಂದು ಅರ್ಜುನ ಆನೆಯ ಮೇಲೆ ದಾಳಿ ಮಾಡಿತ್ತು ಎನ್ನಲಾಗಿದೆ.

ಕಾಡಾನೆ ಅರ್ಜುನ ಆನೆಯ ಹೊಟ್ಟೆ ಸೇರಿದಂತೆ ಆಯಾಕಟ್ಟಿನ ಜಾಗಕ್ಕೆ ಕೊಂಬಿನಿಂದು ಬಲವಾಗಿ ಚುಚ್ಚಿತ ಪರಿಣಾಮ ತೀವ್ರ ಗಾಯದಿಂದ ನಿತ್ರಾಣಗೊಂಡು ಅರ್ಜುನ ಕೊನೆಯುಸಿರೆಳೆದಿದೆ ಎನ್ನಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರೇಹಳ್ಳಿ, ಯಸಳೂರು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳನ್ನು ಸೆರೆಹಿಡಿಯುವ ಮತ್ತು ರೆಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ಸಹ ಯಸಳೂರು ಭಾಗದಲ್ಲಿ ಇಂತಹುದೇ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಕಾಡಾನೆ ಅರ್ಜುನ ಆನೆಯ ಮೇಲೆ ದಾಳಿ ಮಾಡಿದೆ.

ಅರವತ್ತ ಮೂರು ವರ್ಷದ ಅರ್ಜುನ ಆನೆ ದಸರಾ ಮೆರವಣಿಗೆಯಲ್ಲಿ ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿ ಹೊರುವ ಗೌರವ ಪಡೆದಿತ್ತು. ತನ್ನ ರಾಜಗಾಂಭೀರ್ಯದಿಂದ ಜನಮನ ಸೂರೆಗೊಂಡಿತ್ತು. ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡ ನಂತರ ಅರ್ಜುನ ಆನೆಗೆ ವಿಶ್ರಾಂತಿ ನೀಡಲಾಗಿತ್ತು. ಕಾಡಾನೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಡಾನೆ ಪಳಗಿಸುವುದರಲ್ಲಿ ಅದು ನಿಪುಣನಾಗಿತ್ತು.

ಇದೀಗ ಅರ್ಜುನ ಆನೆಯ ಜೀವ ದುರಂತ ಅಂತ್ಯ ಕಂಡಿದೆ. ಆರ್ಜುನ ಆನೆಯ ಸಾವು ಇಡೀ ರಾಜ್ಯಕ್ಕೆ ಶೋಕದ ಸುದ್ದಿಯಾಗಿದೆ.

ಎರಡು ದಿನದ ಹಿಂದಷ್ಟೇ ಮೂಡಿಗೆರೆ ತಾಲ್ಲೂಕಿನಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ಈಗ ಮತ್ತೊಂದು ದುರಂತ ಸಂಭವಿಸಿದೆ.

ಕಾರ್ಯಾಚರಣೆ ವೇಳೆ ಕಾಡಾನೆ ಸಾವು : ಮೂಡಿಗೆರೆ ತಾಲ್ಲೂಕು ಮೇಕನಗದ್ದೆಯಲ್ಲಿ ಘಟನೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ