October 5, 2024

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನವೆಂಬರ್ 20 ರಿಂದ ನವೆಂಬರ 26 ರವರೆಗೆ ಜ್ಞಾನದ ಅನಾವರಣ ಎಂಬ ವೈವಿದ್ಯಮಯ ವಸ್ತು ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ ರಮೇಶ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನವೆಂಬರ್ 20 ರಿಂದ ನವೆಂಬರ್ 26 ರವರೆಗೆ ವಸ್ತು ಪ್ರದರ್ಶನ ನಡೆಯಲಿದ್ದು ಬೆಳಿಗ್ಗೆ 9-30 ರಿಂದ ಸಂಜೆ 6ರವರೆಗೆ ಪ್ರದರ್ಶನವಿರಲಿದೆ. ಪ್ರದರ್ಶನದಲ್ಲಿ ಕೀಟ ಪ್ರಪಂಚ, ಸಾವಿರಾರು ಪುಸ್ತಕಗಳು, ಪ್ರಾಚೀನ ನಾಣ್ಯಗಳು, ಪುರಾತನ ವಸ್ತುಗಳು, ಅಂಚಿಚೀಟಿ ಲಕೋಟೆಗಳು, ಕಲಾಕೃತಿಗಳು ಇರಲಿವೆ.

ವಸ್ತು ಪ್ರದರ್ಶನಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ  ಪ್ರವೇಶ ಸಂಪೂರ್ಣ ಉಚಿತವಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ನೂರಕ್ಕೂ ಹೆಚ್ಚು ಕೀಟಗಳು, ಚಿಟ್ಟೆ, ಮಿಡತೆ, ತಿಗಣೆ ಮುಂತಾದ ಕೀಟ ಪ್ರಭೇದಗಳು, 2000ಕ್ಕೂ ಹೆಚ್ಚು ನಾಣ್ಯಗಳು, ಭಾರತದ ಮೊಟ್ಟಮೊದಲ ನಾಣ್ಯದಿಂದ ಇಲ್ಲಿನವರೆಗಿನ ನಾಣ್ಯಗಳು, ಸತು, ತಾಮ್ರ, ಕಂಚು, ಬೆಳ್ಳಿ, ಚಿನ್ನದ ನಾಣ್ಯಗಳು, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪುಸ್ತಕಗಳು ಪ್ರದರ್ಶನದಲ್ಲಿವೆ ಎಂದು ತಿಳಿಸಿದ್ದಾರೆ.

ಮಲೆನಾಡು ಭಾಗದ ಹಿಂದೆ ಬಳಕೆಯಲ್ಲಿದ್ದ ಈಗ ಕಣ್ಮರೆಯಾಗಿರುವ ವಸ್ತುಗಳು, ಅಂದಿನ ಜನಜೀವನವನ್ನು ಕಟ್ಟಿಕೊಡುವ ದಿನಬಳಕೆ ವಸ್ತುಗಳು, ಭಾರತದ ಇತಿಹಾಸ, ಸಂಸ್ಕೃತಿ, ಕಲೆ, ಮಹಾನ್ ವ್ಯಕ್ತಿಗಳ, ವಿಜ್ಞಾನ, ವಾಸ್ತುಶಿಲ್ಪ ಕುರಿತ ಅಂಚೆ ಚೀಟಿಗಳು, ರಾಜ್ಯದ ವಿವಿಧ ಕಲಾವಿದರ ಕಲಾಕೃತಿಗಳು, ಮೈಸೂರು ಶೈಲಿಯ, ತಾಂಜಾವೂರು ಶೈಲಿಯ ಕಲಾಕೃತಿಗಳು, ಒರಿಸ್ಸಾ ಶೈಲಿಯ ಪಟ್ಟ ಚಿತ್ರಗಳು, ನೂರಾರು ಹಿತ್ತಾಳೆ, ತಾಮ್ರದ ವಸ್ತುಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ವಸ್ತು ಪ್ರದರ್ಶನದ ಬಗ್ಗೆ ಹೆಚ್ಚಿನ ಮಾಹಿತಿಗೆ 9663098873, 08263200012 ಸಂಖ್ಯೆಗೆ ಸಂರ್ಪಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ