October 5, 2024

World-Cup - 12

ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು ಭಾರತ ನ್ಯೂಜಿಲೆಂಡ್ ತಂಡಗಳು ಪರಸ್ಪರ ಎದುರಾಗುತ್ತಿವೆ. ವಿಶ್ವದ ಗಮನ ಸೆಳೆದಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಗೆದ್ದುಬರಲಿ ಎಂದು ಕೋಟಿ ಕೋಟಿ ಭಾರತೀಯರು, ವಿಶ್ವದಾದ್ಯಂತ ಇರುವ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆ ಒಂದು ಗೆಲುವಿಗಾಗಿ ಖಾತರದಿಂದ ಕಾಯುತ್ತಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮುಗಿದು ಈಗ ನಾಕೌಟ್ ಹಂತಕ್ಕೆ ತಲುಪಿದ್ದು, ಭಾರತ, ದಕ್ಷಿಣ ಆಪ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಮೊದಲ ಸೆಮಿಫೈನಲ್ ನಲ್ಲಿ ಇಂದು ಭಾರತಕ್ಕೆ ನ್ಯೂಜಿಲೆಂಡ್ ಎದರಾಳಿಯಾಗಿದ್ದು, ನಾಳಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

ಮುಂಬೈನ ವಾಂಖೇಡೆ ಸ್ಟೇಡಿಯಂ ನಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಪಂದ್ಯ ಅತ್ಯಂತ ಕುತೂಹಲ ಕೆರಳಿಸಿದೆ.

ಲೀಗ್ ಹಂತದಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಹಾಗೂ ಲೀಗ್ ಹಂತದ 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲುಗಳೊಂದಿಗೆ ಪ್ರಯಾಸದಿಂದ ಸೆಮಿಫೈನಲ್ ತಲುಪಿರುವ ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿವೆ.

ಒಟ್ಟಾರೆ ಏಕದಿನ ಪಂದ್ಯಾವಳಿಯನ್ನು ಗಮನಿಸುವುದಾದರೆ ಭಾರತ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದೆ.  ಭಾರತ ನ್ಯೂಜಿಲೆಂಡ್ ಇದುವರೆಗೂ 117 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 59 ಪಂದ್ಯಗಳಲ್ಲಿ, ನ್ಯೂಜಿಲೆಂಡ್ 50 ಪಂದ್ಯಗಳಲ್ಲಿ ಗೆಲುವು ಪಡೆದಿವೆ. 7 ಪಂದ್ಯಗಳು ಏಳು ಪಂದ್ಯಗಳು ಫಲಿತಾಂಶ ರಹಿತವಾಗಿದ್ದ, ಒಂದು ಪಂದ್ಯ ಟೈ ಆಗಿದೆ.

ಐಸಿಸಿ ಟೂರ್ನಮೆಂಟ್ ಗಳ ಇತಿಹಾಸ ಗಮನಿಸುವುದಾದರೆ ನ್ಯೂಜಿಲೆಂಡ್ ಒಟ್ಟಾರೆ ಮೇಲುಗೈ ಕಂಡಿದ್ದು, ವಿಶ್ವ ವೇದಿಕೆಯಲ್ಲಿ (ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ, ಟಿ-20 ವಿಶ್ವಕಪ್) ಈ ಎರಡು ತಂಡಗಳು ಇದುವರೆಗೂ 14 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ನ್ಯೂಜಿಲೆಂಡ್ 9 ಬಾರಿ, ಭಾರತ 5 ಬಾರಿ ಗೆಲುವು ಪಡೆದಿವೆ. ನಾಕೌಟ್ ಹಂತದ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಇದುವರೆಗೂ ಸೋತಿಲ್ಲ. ಕಳೆದ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿಯೂ ಕೂಡ ಭಾರತ ತಂಡವನ್ನು ರೋಚಕ ಪಂದ್ಯದಲ್ಲಿ ಸೋಲಿಸಿ ನ್ಯೂಜಿಲೆಂಡ್ ಫೈನಗೇರಿತ್ತು.

ಇದೀಗ ಆ ಪಂದ್ಯದ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿ ನಿಂತಿದೆ. ಸದ್ಯದ ಮಟ್ಟಿಗೆ ಭಾರತ ತಂಡ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತನ್ನ ಪಾರಮ್ಯ ತೋರುತ್ತಿದೆ. ಹಾಗಾಗಿ ಈ ಹಿಂದಿನ ಐಸಿಸಿ ಪಂದ್ಯಾವಳಿಗಳ ಇತಿಹಾಸ ಏನೇ ಇರಲಿ ಇಂದಿನ ಪಂದ್ಯದಲ್ಲಿ ಭಾರತ ಗೆದ್ದುಬರುವುದೆಂತು ಬಹುತೇಕ ಶತಸಿದ್ಧ. ಭಾರತ ಗೆದ್ದು ಬರಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ