October 5, 2024

ಮಾಜಿ ಸಚಿವ, ಮಾಜಿ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಮೂಡಿಗೆರೆ ಕೃಷಿಕ ಸಮಾಜ ಸಂತಾಪ ವ್ಯಕ್ತಪಡಿಸಿದೆ.

ಮೂಡಿಗೆರೆ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಮತ್ತು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿ.ಬಿ. ಚಂದ್ರೇಗೌಡರು ದಾರದಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಕೃಷಿಕ ಕಟುಂಬದಲ್ಲಿ ಜನಿಸಿ ತನ್ನ ಪ್ರತಿಭೆ, ಆತ್ಮವಿಶ್ವಾಸ, ಜ್ಞಾನ ಮತ್ತು ಸಾಮಾಜಿಕ ಕಳಕಳಿಯಿಂದ ರಾಜಕೀಯ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಬೆಳೆದಿದ್ದರು. ಅವರು ನಮ್ಮ ದಾರದಹಳ್ಳಿಯವರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇತ್ತು.

ಡಿ.ಬಿ. ಚಂದ್ರೇಗೌಡರು ಸ್ವತಃ ಒಬ್ಬ ಕಾಫಿ ಬೆಳೆಗಾರರಾಗಿದ್ದರು. ಕೃಷಿಕರ ಸಮಸ್ಯೆ ಅವರಿಗೆ ಪ್ರಾಯೋಗಿಕವಾಗಿ ಅರಿವಿತ್ತು. ಸಂದರ್ಭ ಸಿಕ್ಕಿದಾಗೆಲ್ಲಾ ಅವರು ಕೃಷಿಕರ ಪರವಾಗಿ ತಮ್ಮ ಧ್ವನಿ ಎತ್ತಿದ್ದಾರೆ. ಕಾವೇರಿ ನದಿನೀರಿನ ವಿಚಾರದಲ್ಲಿ ಕಾನೂನು ಹೋರಾಟ ರೂಪಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅನೇಕ ರೈತ ಪರ ಹೋರಾಟಗಳಲ್ಲಿ ಅವರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

ಚಂದ್ರೇಗೌಡರ ಅಗಲಿಕೆ ಅತೀವ ನೋವು ತಂದಿದೆ. ಅವರು ನಮ್ಮನ್ನಗಲಿದ್ದರೂ ಅವರ ರಾಜಕೀಯ ಹೆಜ್ಜೆಗುರುತುಗಳು ಸದಾ ಹಸಿರಾಗಿರುತ್ತವೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ