October 5, 2024

ಅಡಿಕೆ ಎಲೆ ಚಿಕ್ಕಿ ರೋಗ ಮಲೆನಾಡಿನಾದ್ಯಂತ ಮತ್ತೆ ಉಲ್ಬಣವಾಗುತ್ತಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಎಲೆಚಿಕ್ಕಿ ರೋಗದಿಂದ ಅಡಿಕೆ ತೋಟಗಳು ನಾಶವಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಅಡಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡ ರೈತರು ರೋಗದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನಕ್ಕಾಗಿ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI)  ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4-30 ರಿಂದ 5-30 ರ ಅವಧಿಯಲ್ಲಿ ಅಡಿಕೆ ಎಲೆಚಿಕ್ಕಿ ರೋಗದ ಕುರಿತಾಗಿ ಈ ಕೆಳಗಿನ ಸಂಖ್ಯೆಗಳಿಗೆ ರೈತರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ  ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಡಿಕೆ ಎಲೆ ಚಿಕ್ಕಿ ರೋಗ ಕುರಿತು CPCRI ಸಹಾಯವಾಣಿ (4:30-5:30 PM – ಸೋಮವಾರದಿಂದ ಶುಕ್ರವಾರದವರೆಗೆ)

* +919447245649 ಡಾ.ವಿನಾಯಕ ಹೆಗಡೆ, ಪ್ರ. ವಿಜ್ಞಾನಿ ಮತ್ತು ಮುಖ್ಯಸ್ಥರು, ಬೆಳೆ ಸಂರಕ್ಷಣಾ ವಿಭಾಗ, ICAR-CPCRI (ಇಂಗ್ಲೀಷ್, ಹಿಂದಿ, ಕನ್ನಡ)

* +919380061104 ಡಾ.ವಿ.ಎಚ್.ಪ್ರತಿಭಾ, ಸೀನಿಯರ್ ಸೈಂಟಿಸ್ಟ್ ಇಂಗ್ಲಿಷ್, ಕನ್ನಡ

* +919448652189 ಡಾ.ತಾವ ಪ್ರಕಾಶ ಪಾಂಡಿಯನ್, ವಿಜ್ಞಾನಿ ಇಂಗ್ಲಿಷ್, ಕನ್ನಡ, ತಮಿಳು

* +919482387607 ಡಾ.ಭವಿಷ್ಯ, ವಿಜ್ಞಾನಿ ಇಂಗ್ಲಿಷ್, ಕನ್ನಡ

* +919481014573 ಡಾ. ದಲಿಯಾಮೋಳ್:, ವಿಜ್ಞಾನಿ ಇಂಗ್ಲೀಷ್, ಹಿಂದಿ, ಮಲಯಾಳಂ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ