October 5, 2024

ಅಕ್ಟೋಬರ್ 31ರಂದು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಸರ್ವಪಕ್ಷ ಹಾಗೂ ಎಲ್ಲಾ ಸಂಘಟನೆ ಮುಖಂಡರನ್ನೊಳಗೊಂಡ ಸಭೆ ನಡೆಸಿ, ಉದ್ದೇಶಿತ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಮುಂದಿನ ಕಾರ್ಯಕ್ರಮಗಳ ನೀಲಿನಕ್ಷೆ ತಯಾರಿಸಿ ಈ ಭಾಗಗಳ ಅನೇಕ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುವ ನಿಟ್ಟಿನಲ್ಲಿ ಮುಂದಡಿ ಇಡಲಾಯಿತು.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿರುವ ಜನರ, ರೈತಾಪಿ ವರ್ಗದವರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಪಕ್ಷಾತೀತವಾದ ಸಂಘಟನೆ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿ ಮಲೆನಾಡು ಜನಪರ ಒಕ್ಕೂಟ ಹುಟ್ಟುಹಾಕಲಾಗಿದೆ. ಈ ಹಿಂದೆ ಮಲೆನಾಡು ಜನಪರ ಒಕ್ಕೂಟ ಸ್ಥಾಪನೆ ಮಾಡಿ ಅದರಿಂದ ಜನರ ಸಮಸ್ಯೆಗಳ ನಿವಾರಣೆಗೆ ಅನೇಕ ಹೋರಾಟ ನಡೆಸಲಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡುವ ದೃಷ್ಟಿಯಿಂದ ಮಂಗಳೂರು ಹೆದ್ದಾರಿ ಬಲಭಾಗ ಕರಾವಳಿ, ಎಡಭಾಗ ಸಹ್ಯಾದ್ರಿ ಶ್ರೇಣಿ ಮಲೆನಾಡು ಪ್ರದೇಶವಾಗಿರುವ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಸನ, ಕೊಡಗು ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಕರಾವಳಿ ಮಲೆನಾಡು ಜನಪರ ಒಕ್ಕೂಟ ಹುಟ್ಟುಹಾಕಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಸನ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ಒದಗಿಸಲು, ರೈತರ ಸಮಸ್ಯೆ, ಕರಾವಳಿ ಭಾಗದ ಮೀನುಗಾರರ ಸಮಸ್ಯೆ, ಸಾರಿಗೆ ವಾಹನ ಚಾಲಕರ, ಕೂಲಿ ಕಾರ್ಮಿಕರ ಸಮಸ್ಯೆ ಬಹಳಷ್ಟಿವೆ. ಧಾರವಾಡ, ಕುಲ್ಬರ್ಗಿಯಲ್ಲಿ ಹೈಕೋರ್ಟ್ ಪೀಠವಿದ್ದು, ಮಲೆನಾಡು ಕರಾವಳಿ ಭಾಗದಲ್ಲೂ ಹೈಕೋರ್ಟ್ ಪೀಠ ಅವಶ್ಯಕತೆಯಿದೆ. ಜನರ ಬದುಕು, ಭಾವನೆ ಪ್ರಶ್ನೆ ಬಂದಾಗ, ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಒಕ್ಕೂಟವು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮ ಮತ್ತು ಹೋರಾಟಗಳನ್ನು ರೂಪಿಸಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಸಭೆಯಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ಮಾಜಿ ಸಚಿವರುಗಳು, ಮಾಜಿ ಮತ್ತು ಹಾಲಿ ಶಾಸಕರುಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಜವಾಬ್ದಾರಿ ಹುದ್ದೆಗಳನ್ನು ಹೊಂದಿರುವ ಪ್ರಮುಖರು, ಜನಪರ ಚಿಂತಕರು, ಹೋರಾಟಗಾರರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ