October 5, 2024

ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಪಿ.ಪಿ.ಮಲ್ಲೇಶ್ ಅವರ ಮನೆಯಲ್ಲಿ  ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ವಿಧಾನ ಪರಿಷತ್  ಸದಸ್ಯ ಸಿ.ಟಿ.ರವಿ ವೀಕ್ಷಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ‘ಮನ್ ಕೀ ಬಾತ್ ಕೇಳುಗರು ಈ ಕಾರ್ಯಕ್ರಮದ ನಿಜವಾದ ಶಿಲ್ಪಿಗಳು. ಸಾಮಾನ್ಯವಾಗಿ ಗಾಸಿಪ್, ನಕಾರಾತ್ಮಕ ವಿಚಾರಗಳು, ಚರ್ಚೆಗಳು ಗಮನ ಸೆಳೆಯುವಷ್ಟು ಸಕಾರಾತ್ಮಕ ವಿಚಾರಗಳು ಜನರನ್ನು ಸೆಳೆಯುವುದಿಲ್ಲ. ಆದರೆ ಈ ಮನ್ ಕೀ ಬಾತ್ ಕಾರ್ಯಕ್ರಮ ಆ ಚಿಂತನೆಯನ್ನು ಸುಳ್ಳೆಂದು ಸಾಬೀತು ಪಡಿಸಿದೆ. ಜನರಿಗೆ ಸಕಾರಾತ್ಮಕ ವಿಚಾರಗಳ ಬಗ್ಗೆ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ಸಾಕ್ಷಿಯಾಗಿದೆ’ಎಂದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಮಾತನಾಡಿ  ‘ಕೇಂದ್ರ ಸರ್ಕಾರದ ಬಿಜೆಪಿ ಸರ್ಕಾರದ ಸ್ವಚ್ಚ ಭಾರತ್ ಮಿಷನ್ ದಶಕ  ಪೂರೈಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿಯವರು ಜನರನ್ನು ಉದ್ದೇಶಿಸಿ ಅನುಭವ ಹಂಚಿಕೊಂಡಿದ್ದಾರೆ.ದೇಶದ ಪ್ರತಿಯೊಂದು ಭಾಗದಲ್ಲೂ ಸ್ವಚ್ಚತೆಯ ಬಗ್ಗೆ ವಿಶೇಷ ಪ್ರಯತ್ನಗಳು ನಡೆದಿವೆ.ಭಾರತೀಯ ಇತಿಹಾಸದಲ್ಲಿ ಇದನ್ನು ಇಷ್ಟು ದೊಡ್ಡ ಆಂದೋಲನವನ್ನಾಗಿ ಮಾಡಿದವರನ್ನು ಅಭಿನಂದಿಸುವ ಕಾರ್ಯಕ್ರಮವಾಗಿದೆ’ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ,ಬಣಕಲ್ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ರತೀಶ್ ಕೂಡಹಳ್ಳಿ, ಮುಖಂಡರಾದ ಕಣಚೂರು ವಿನೋದ್,ಧನಿಕ್ ಕೋಡದಿಣ್ಣೆ,ಪರೀಕ್ಷಿತ್ ಜಾವಳಿ,ಬಡವನದಿಣ್ಣೆ ರವಿ,ಶರತ್ ಫಲ್ಗುಣಿ,ಮಲ್ಲೇಶ್,ಪ್ರಮೋದ್,ಬಿ.ಎಸ್.ಕಲ್ಲೇಶ್,ಮರ್ಕಲ್ ಲೋಕೇಶ್, ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ