October 5, 2024

ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಮಹಿಳೆಯೊಬ್ಬರಿಗೆ ಟರ್ಕಿ ಮೂಲದ ವ್ಯಕ್ತಿಯೋರ್ವ ಚಿನ್ನದ ಉಡುಗೊರೆಗಳ ಆಮಿಷವೊಡ್ಡಿ 1.3 ಕೋಟಿ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮ್ಯಾಟ್ರಿಮೊನಿಯಲ್ ಆಪ್ ಒಂದರ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಮಹಿಳೆಗೆ ವಂಚನೆ ಮಾಡಿದ್ದು, ತಾನು ಟರ್ಕಿಯಲ್ಲಿರುವ ಭಾರತೀಯ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.

ಉಡುಗೊರೆಯಾಗಿ ಬಹಳಷ್ಟು ಚಿನ್ನವನ್ನು ತಂದ್ದಿದ್ದು, ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದಿದ್ದಾರೆ ಎಂದು ವ್ಯಕ್ತಿ ಮಹಿಳೆಗೆ ಹೇಳಿದ್ದಾರೆ. ತಾನು ಹೇಳಿದ್ದು ನಿಜ ಎಂದು ನಂಬಿಸುವುದಕ್ಕಾಗಿ ಕುನಾಲ್ (ಹೆಸರು ಬದಲಾವಣೆ ಮಾಡಲಾಗಿದೆ) ಎಂಬಾತ ವಿಮಾನ ಪ್ರಯಾಣದ ನಕಲಿ ಟಿಕೆಟ್ ಗಳನ್ನು ಕಳಿಸಿದ್ದಾನೆ, ಅಷ್ಟೇ ಅಲ್ಲದೇ ವಿಮಾನ ನಿಲ್ದಾಣದ ಅಧಿಕಾರಿ ಎಂಬಂತೆ ಬಿಂಬಿಸಿ ಮಹಿಳೆಯೊಬ್ಬರ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದಾನೆ. ಕುನಾಲ್ ಮತ್ತು ಆತನೊಂದಿಗೆ ಇದ್ದ ಮತ್ತೋರ್ವ ಮಹಿಳೆ, ಸಂತ್ರಸ್ತ ಮಹಿಳೆಗೆ 35-40 ದಿನಗಳ ಕಾಲ ವಂಚನೆ ಮಾಡಿದ್ದು 1.30 ಕೋಟಿ ರೂಪಾಯಿ ದೋಚಿದ್ದಾರೆ.

ಮೋಸಹೋಗಿರುವ ಮಹಿಳೆ ಮತ್ತು ಕುನಾಲ್ ಮ್ಯಾಟ್ರಿಮೋನಿ ಅಪ್ಲಿಕೇಶನ್ ಮೂಲಕ ಸಂಪರ್ಕ ಸಾಧಿಸಿದ್ದರು ಕುನಾಲ್ ಆಕೆಯನ್ನು ಮದುವೆಯಾಗಲು ಬಯಸಿದ್ದು, ಬೆಂಗಳೂರಿನಲ್ಲಿ ಅವಳನ್ನು ಭೇಟಿಯಾಗಲು ಟರ್ಕಿಯಿಂದ ಪ್ರಯಾಣಿಸುವುದಾಗಿ ಹೇಳಿದ್ದ.

ಚಿನ್ನ ತಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆಗಿದ್ದೇನೆ ಎಂದು ಕುನಾಲ್ ನೀಡಿದ್ದ ವಿವರಗಳನ್ನು ನಂಬಿದ ಸಂತ್ರಸ್ತೆ ಈ ಚಿನ್ನವನ್ನು ಬಿಡಿಸಲು ಹಲವು ವಹಿವಾಟುಗಳಲ್ಲಿ ಒಟ್ಟು 1.3 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹಣ ಸಿಗುತ್ತಿದ್ದಂತೆಯೇ ಆತ ಮ್ಯಾಟ್ರಿಮೊನಿಯಲ್ ಪ್ರೊಫೈಲ್ ನ್ನು ಡಿಲೀಟ್ ಮಾಡಿದ್ದಾರೆ.

ಒಂದು ವಾರದಿಂದ ಕುನಾಲ್ ಅವರನ್ನು ತಲುಪಲು ಸಾಧ್ಯವಾಗದಿದ್ದಾಗ ಮಹಿಳೆ ಇದು ಸೈಬರ್ ವಂಚನೆ ಎಂದು ಅರಿತು ದೂರು ನೀಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ