October 5, 2024

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಿ.ಹೊಸಳ್ಳಿ, ಫಲ್ಗುಣಿ ಕಳೆದ ಸಾಲಿನಲ್ಲಿ ರೂ. 28.46 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ರಕ್ಷಿತ್ ಬಡವನದಿಣ್ಣೆ ಹೇಳಿದರು.

ಇತ್ತೀಚೆಗೆ ನಡೆದ ಸಂಘದ ಸರ್ವ ಸದ್ಯಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ; 1976ರಲ್ಲಿ ಪ್ರಾರಂಭವಾದ ಸಂಘವು ಪ್ರಸ್ತುತ ಬಿ.ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಫಲ್ಗುಣಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘವು 10 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 2899 ಸದಸ್ಯರನ್ನು ಹೊಂದಿದೆ. ಸಂಘವು ವರದಿ ಸಾಲಿನಲ್ಲಿ 779 ಸದಸ್ಯರಿಗೆ ರೂ. 1539.82 ಲಕ್ಷ ಕೃಷಿ ಸಾಲವನ್ನು ವಿತರಿಸಿದೆ. ಸ್ವಂತ ಬಂಡವಾಳ ಕೆಸಿಸಿ ಸಾಲವಾಗಿ 68 ಸದಸ್ಯರಿಗೆ ರೂ. 245.63 ಲಕ್ಷ ವಿತರಿಸಲಾಗಿದೆ. ಸಂಘದ ವತಿಯಿಂದ ಸದಸ್ಯರಿಗೆ ಗೊಬ್ಬರ ಖರೀದಿ ಸಾಲ, ವ್ಯಾಪಾರ ಸಾಲ, ವಾಹನ ಖರೀದಿ ಸಾಲ, ಸ್ವಸಹಾಯ ಸಂಘಗಳ ಸಾಲ ಸೇರಿದಂತೆ ವಿವಿಧ ರೀತಿಯ ಸಾಲವನ್ನು ಒದಗಿಸಿದೆ ಎಂದರು.

ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಇನ್ನಷ್ಟು ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸಲು ಮತ್ತು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಟಿ.ಪ್ರಸನ್ನ, ನಿರ್ದೇಶಕರಾದ ಬಿ.ಎಂ. ರಮೇಶ್, ಓ.ಜಿ. ರವಿ, ಕೆ.ಬಿ.ಗೋಪಾಲಗೌಡ, ಹೆಚ್.ಎಂ. ಅರ್ಜುನ್, ಹೆಚ್.ಎ. ಅಮೋಘ್, ಶ್ರೀಮತಿ ರಚನಾ ಅರುಣ್, ಶ್ರೀಮತಿ ಸಾವಿತ್ರಿ ಉಮೇಶ್, ಟಿ.ಎ. ಶೇಖರ್ ಪೂಜಾರಿ, ಬಿ.ಎಂ.ರಮೇಸ್, ಎಸ್. ಸುಂದರ, ವೃತ್ತಿಪರ ನಿರ್ದೇಶಕರಾದ ಬಿ.ಎಂ. ಉಪೇಂದ್ರ, ಹೆಚ್.ಎ. ದ್ಯಾವಣ್ಣಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಯಾಗ್ ಉಪಸ್ಥಿತರಿದ್ದರು.

ಸಂಘದ ಸಿಇಓ ಮೋಹನ್ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ