October 5, 2024

ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡಪರ ಸಂಘಟನೆಗಳನ್ನು ಹುಟ್ಟು ಹಾಕಿದರೆ ಸಾಲದು. ಪ್ರತಿನಿತ್ಯ ಕನ್ನಡ ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಸಲು ಸಾಧ್ಯವಿದೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಭಾನುವಾರ ಸಂಜೆ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಕಸಾಪ ಕಸಬಾ ಹೋಬಳಿ ಘಟಕದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಂಗ್ಲ ಮತ್ತು ಪರ ರಾಜ್ಯಗಳ ಭಾಷೆಗಳ ವ್ಯಾಮೋಹಗಳು ನಮ್ಮನ್ನು ಆವರಿಸಿಕೊಂಡ ಪರಿಣಾಮವಾಗಿ ಇಂದು ಕನ್ನಡ ಉಳಿಸಲು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳುವ ಜತೆಗೆ ಜಾಗೃತರಾಗಬೇಕಿದೆ ಎಂದ ಅವರು, ರಾಜ್ಯದಲ್ಲಿ ಸರಕಾರಿ ಹುದ್ದೆ ಪಡೆಯಲು ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಅವಕಾಶವಿಲ್ಲವೆಂದು ಅದೇಶ ನೀಡಿದ್ದರೆ ಅದು ನ್ಯಾಯವಾಗಿತ್ತು. ಆದರೆ ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಯೊಂದಕ್ಕೆ ಎಲ್ಲಾ ವರ್ಗದವರಿಗೆ ಅರ್ಜಿ ಹಾಕಲು ಸಾಮಾನ್ಯ ಮೀಸಲಾತಿ ಕೊಟ್ಟು, ಉರ್ದು ಭಾಷೆ ಕಡ್ಡಾಯ ಮಾಡಿರುವುದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಇದನ್ನು ಗಮನಿಸಿದರೆ ಕನ್ನಡ ಭಾಷೆ ಯಾವ ರೀತಿಯಲ್ಲಿ ಸಂಕಷ್ಟದಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬದುಕಿಗೆ ಎಲ್ಲಾ ಭಾಷೆ ಅಗತ್ಯತೆ ಇದೆ. ಆದರೆ ಪರ ಭಾಷೆಯನ್ನು ಅಗತ್ಯತೆಗೆ ಮಾತ್ರ ಬಳಸಿಕೊಂಡು ನಮ್ಮ ಮಾತೃಭಾಷೆ ಕನ್ನಡವನ್ನು ನಿರಂತರವಾಗಿ ಬಳಸಬೇಕು. ಪೋಷಕರು ತಮ್ಮ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕøತಿ, ಕುಟುಂಬದ ಸಂಬಂಧದ ಹೆಸರುಗಳು, ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ಕಾಣುವಂತಹ ಸಂಸ್ಕಾರ ಹೇಳಿಕೊಡಬೇಕು. ಮಕ್ಕಳದಲ್ಲಿ ಸಾಹಿತ್ಯ ಜತೆಗೆ ಸಂಸ್ಕøತಿ ಬೆಳೆಸುವ ಕಾರ್ಯ ಮಾಡಿದರೆ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಕಸಾಪ ಕಸಬಾ ಹೋಬಳಿ ಅಧ್ಯಕ್ಷರಾಗಿ ಕೆ.ಎ.ರವಿ ಕುನ್ನಹಳ್ಳಿ, ಗೌರವ ಕಾರ್ಯದರ್ಶಿಗಳಾಗಿ ಬಿ.ಆರ್. ನವೀನ, ಶ್ರೀಮತಿ ವಿದ್ಯಾ, ಕೋಶಾಧ್ಯಕ್ಷರಾಗಿ ಹಸೈನಾಸ್ ಬಿಳಗುಳ, ಪ್ರಧಾನ ಸಂಚಾಲಕರಾಗಿ ಮಹಮ್ಮದ್ ಜುಬೇರ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಕೆ. ಪ್ರದೀಪ್, ರಘು ಮಗ್ಗಲಮಕ್ಕಿ, ಶ್ರೀಮತಿ ಪವನ ವಿಜಯ್  ಸೇರಿದಂತೆ ವಿವಿಧ ಹುದ್ದೆಗಳ ಪದಾಧಿಕಾರಿಗಳ ಪ್ರಮಾಣವಚನದ ಮೂಲಕ ಪದಗ್ರಹಣ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಸಬಾ ಹೋಬಳಿ ನಿರ್ಗಮಿತ ಅಧ್ಯಕ್ಷ ಎಂ.ಎಸ್.ನಾಗರಾಜ್ ವಹಿಸಿದ್ದರು. ಕಸಾಪ ಕಸಬಾ ಹೋಬಳಿ ನೂತನ ಅಧ್ಯಕ್ಷ ಕುನ್ನಳ್ಳಿ ರವಿ,  ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ, ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ, ಬಿ.ಎಸ್.ಜಯರಾಂ, ಎಚ್.ಎಂ.ಶಾಂತಕುಮಾರ್, ಅನಿತಾ ಜಗದೀಪ್, ಗಣೇಶ್ ಮಗ್ಗಲಮಕ್ಕಿ, ಬಕ್ಕಿ ಮಂಜು, ಪ್ರಕಾಶ್ ಬಕ್ಕಿ, ಆರ್.ಪ್ರಕಾಶ್, ಶಿಕ್ಷಕ ನವೀನ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ