October 5, 2024

ವನ್ಯಜೀವಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದ ರಿಂದ ಸಂಘರ್ಷ ಕಡಿಮೆ ಮಾಡಿ ಸಮನ್ವಯತೆಯಿಂದ ಸುಸ್ಥಿರತೆ ಸಾಧ್ಯ ಎಂದು ಅರಣ್ಯ ಇಲಾಖೆ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ನುಡಿದರು.

ಚಿಕ್ಕಮಗಳೂರು ನಗರದ ಎಂಎಲ್‍ವಿ ರೋಟರಿಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿಕ್ಲಬ್ ಮತ್ತು ಒನ್ ಅರ್ಥ್‍ಟ್ರಸ್ಟ್-ಅರಣ್ಯಇಲಾಖೆ ಸಹಯೋಗದೊಂದಿಗೆ ನಿನ್ನೆ ಸಂಜೆ ಆಯೋಜಿಸಿದ್ದ ‘ಸಮನ್ವಯತೆಯಿಂದ ಸುಸ್ಥಿರತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಶತ ಶತಮಾನಗಳಿಂದ ಇದ್ದೇ ಇದೆ. ಆನೆ ಸೇರಿದಂತೆ ಹಲವು ವನ್ಯಜೀವಿಗಳು ಮನುಷ್ಯನ ಉದ್ದೇಶಗಳನ್ನು ಕೆಲಮಟ್ಟಿಗೆ ಅರ್ಥಮಾಡಿಕೊಂಡು ವರ್ತಿಸುವುದನ್ನು ಅಭ್ಯಾ¸ Àಮಾಡಿಕೊಂಡಿವೆ. ಆದರೆ ಮಾನವಮಾತ್ರ ವನ್ಯಜೀವಿಗಳ ಜೀವನ ಕ್ರಮವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಜನವಸತಿಯ ಕಡೆಗೆ ಬರುವ ವನ್ಯಜೀವಿಗಳನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗಿದೆ ಎಂದರು.
ಸಂಘರ್ಷ ಕಡಿಮೆ ಮಾಡಲು ಜನರ ಸಹಕಾರ ಅತಿಮುಖ್ಯ. ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಸರ್ಕಾರ ವನ್ಯಜೀವಿಗಳಿಂದ ಹಾನಿ ನಡೆದ ಸಂದರ್ಭಗಳಲ್ಲಿ ಪರಿಹಾರವನ್ನು ನೀಡುತ್ತಾ ಬಂದಿವೆ. ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಬೆಳೆಹಾನಿ ಮತ್ತಿತರ ಸಂದರ್ಭಗಳಲ್ಲಿ ದಯಾತ್ಮಕ ಧನವನ್ನು ನೀಡುತ್ತಿದೆ. ಕಾಲಕಾಲಕ್ಕೆ ಮೊತ್ತವನ್ನು ಹೆಚ್ಚಿಸುತ್ತಾ ಬಂದಿದೆ. ಇದು ಒಂದು ಪರಿಹಾರದ ಮಾರ್ಗವಷ್ಟೇ ಎಂದರು.
ವಾಸಸ್ಥಾನದಿಂದ ವಿವಿಧ ಕಾರಣಗಳಿಗಾಗಿ ಹೊರಬರುವ ವನ್ಯಜೀವಿಗಳಿಗೆ ತೊಂದರೆಯಾಗದಂತೆ ವರ್ತಿಸುವುದು ಮುಖ್ಯ. ವನ್ಯಜೀವಿಗಳು, ಕಾಡು, ಸರ್ಕಾರ ಎಲ್ಲವೂ ಜನರಿಗೇ ಸೇರಿದ್ದು. ಇವುಗಳ ಸಂರಕ್ಷಣೆಯ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು ಎಂದ ಸಿಸಿಎಫ್ ಯು.ಪಿ.ಸಿಂಗ್, ಜನವಸತಿಯತ್ತ ವನ್ಯಪ್ರಾಣಿ ಬಂದಾಗ ತಕ್ಷಣ ಅರಣ್ಯಇಲಾಖೆಗೆ ತಿಳಿಸಿದರೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಥವಾ ವಾಸಸ್ಥಾನಕ್ಕೆ ಓಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.

ಕಾಡಿನಿಂದ ಹೊರಬರದಂತೆ ವನ್ಯಜೀವಿಗಳನ್ನು ನಿರ್ಭಂಧಿಸಲು ಅನೇಕ ಕ್ರಮಗಳನ್ನು ಸರ್ಕಾರದ ಅನುಮೋದನೆಯೊಂದಿಗೆ ಅರಣ್ಯ ಇಲಾಖೆ ಕೈಗೊಂಡಿದೆ. ದೇಶದ ಎಲ್ಲಕಡೆಯೂ ಈ ರೀತಿಯ ಸಂಘರ್ಷ ಇಲ್ಲ. ಅರಣ್ಯದ ಸಮೀಪವಿರುವ ಸ್ಥಳಗಳಲ್ಲಿ ಒತ್ತುವರಿ ಸೇರಿದಂತೆ ವಿವಿಧ ಕಾರಣಗಳಿಗೆ ಜೀವಿಗಳು ಆಹಾರ, ನೀರು, ಬಯಸಿ ಹೊರಬರುತ್ತವೆ. ಕೆಲವೊಮ್ಮೆ ಸಂಚಾರ ಅವುಗಳ ಅಭ್ಯಾಸವಾಗಿರುತ್ತದೆ ಎಂದ ಯು.ಪಿ.ಸಿಂಗ್, ರೈಲ್ವೆ ಬ್ಯಾರಿಗೇಟ್ ವನ್ಯಜೀವಿ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿ. ಆದರೆ ಇದಕ್ಕಾಗಿ ಪ್ರತಿ ಕಿ.ಮೀ.ಗೆ 1.5ಕೋಟಿರೂ.ವೆಚ್ಚ ತಗಲುತ್ತಿದ್ದು ಎಲ್ಲೆಡೆಯೂ ರೈಲ್ವೆ ಬ್ಯಾರಿಗೇಟ್ ಸಾಧ್ಯವಾಗದು ಎಂದು ಉತ್ತರಿಸಿದರು.

ಕರ್ನಾಟಕರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆ.ಟಿ.ಬೋರಯ್ಯ ಮಾತನಾಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೆಲ ಅರಣ್ಯಪ್ರದೇಶದಲ್ಲಿ ಕೈಗಾರಿಕೆಯ ಕಚ್ಛಾವಸ್ತುಗಳನ್ನು ಪೂರೈಸಲು ನೀಲಗಿರಿ-ಅಕೇಶಿಯಾದಂತಹ ಏಕಜಾತಿಯ ಮರಗಳನ್ನು ಬೆಳೆಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅದನ್ನು ಬಿಟ್ಟು ಹಣ್ಣು, ಕಾಯಿ ಸೇರಿದಂತೆ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಲು ನಿರ್ಧರಿಸಲಾಗಿದೆ ಎಂದು ಉತ್ತರಿಸಿದರು.
ಭದ್ರವನ್ಯಜೀವಿ ವಿಭಾಗದ ಕ್ಷೇತ್ರನಿರ್ದೇಶಕ ಯಶಪಾಲ ಕ್ಷೀರಸಾಗರ ಮಾತನಾಡಿ ವನ್ಯಜೀವಿಗಳು ದೇಶದ ಸಂಪತ್ತು ಅವುಗಳಿಗೆ ಮೂಲಭೂತ ಸೌಕರ್ಯವನ್ನು ಕಾಡಿನೊಳಗೆ ಕಲ್ಪಿಸಿ ಅವು ಹೊರಬಂದು ಜನರಿಗೆ ತೊಂದರೆ ಮಾಡದಂತೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.

ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶಬಾಬು ಮಾತನಾಡಿ ಜಿಲ್ಲೆಯ ಮೂರುಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಶೇ.42ರಷ್ಟು ಅರಣ್ಯ ಇದೆ. ಭದ್ರ ಅಭ್ಯಾರಣ್ಯ 50,000ಹೆಕ್ಟೇರಗಳಿಷ್ಟಿದೆ. ಒಟ್ಟಾರೆ 400-450ಆನೆಗಳಿವೆ. ಅದರಲ್ಲಿ ಆವಾಸಸ್ಥಾನ ಬಿಟ್ಟು ಸುಮಾರು 50ಆನೆಗಳು ಮಾತ್ರ ಮುಕ್ತಸಂಚಾರ ಮಾಡುತ್ತಿವೆ. ಕಾಡಿನೊಳಗೆ ಅವಕ್ಕೆ ಆಹಾರ, ವಂಶಾಭಿವೃದ್ಧಿಗೆ ಸೂಕ್ತ ವಾತಾವರಣ ಇರುವುದರಿಂದ ಹೆಚ್ಚಿನ ಆನೆಗಳು ಆವಾಸದಲ್ಲೆ ಇವೆ. ಕಾಡಿನ ಅಂಚಿನಲ್ಲಿರುವ ಕಾಫಿತೋಟಗಳನ್ನು ಹಲಸು ಮತ್ತು ಬೈನೆ ಸೇರಿದಂತೆ ಉತ್ತಮ ಜಾತಿಯ ಹಣ್ಣಿನಮರಗಳು ಇದ್ದು ಅದರ ರುಚಿಕಂಡ ಆನೆ ಮತ್ತಿತರ ವನ್ಯಜೀವಿಗಳು ಧಾಳಿ ನಡೆಸುತ್ತಿವೆ.

ವಾಸಸ್ಥಳ ವಿಸ್ತರಿಸುವ ಪ್ರವೃತ್ತಿಯೂ ಸಂಘರ್ಷಕ್ಕೆ ಕಾರಣ. ಪ್ರತಿಪ್ರಾಣಿಗೂ ಅಸ್ಥಿತ್ವ ಇದೆ. ಅದನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಅವುಗಳ ಮನೋಭಾವದ ಅರಿವು ಉತ್ತಮವಾದರೆ ಸಹಜಜೀವನ ನಡೆಸಬಹುದು. ವನ್ಯಜೀವಿಗಳ ಜೀವನಕ್ರಮ ಆರ್ಗನೈಜ್‍ಆಗಿದ್ದು ಸಣ್ಣಪುಟ್ಟ ಘಟನೆಗಳನ್ನು ವೈಭವೀಕರಿಸುವುದು ಬೇಡ ಎಂದು ರಮೇಶ್‍ಬಾಬು ಮನವಿ ಮಾಡಿದರು.

ಹಿರಿಯ ಸಂಶೋಧನಾಧಿಕಾರಿ ದಿಲೀಪಕುಮಾರ್ ಆನೆಗಳ ಜೀವನಕ್ರಮದ ವಿಡೀಯೋ ಪ್ರದರ್ಶಿಸಿ ದೇಶದಲ್ಲಿ 29,000ಆನೆಗಳಿವೆ. ರಾಜ್ಯದಲ್ಲಿ 6390ಆನೆಗಳಿವೆ ಎಂದು ಸಮೀಕ್ಷಾ ವರದಿ ಹೇಳಿದೆ. ಬಂಡೀಪುರದಲ್ಲಿ ಅತಿಹೆಚ್ಚು, ದಾಂಡೇಲಿ ಕಾಡಿನಲ್ಲಿ ಅತಿಕಡಿಮೆ ಆನೆಗಳಿವೆ. ಇವು ಬುದ್ಧಿವಂತ ಸಸ್ಯಹಾರಿ, ಸದಾಸಂಚಾರಿ. ಆನೆ ರಾಷ್ಟ್ರೀಯ ಸಂಪತ್ತ ಎಂದರು.

ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಒನ್‍ಅರ್ಥ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸಿ.ವಿ.ಭರತ್ ಪ್ರಾಸ್ತಾವಿಕವಾಗಿ ಮಾತನಾಡಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ 12ನೆಯ ಶತಮಾನದ ದೇವರಮನೆಯ ಹೊಯ್ಸಳರ ಕಾಲದ ದೇವಸ್ಥಾನದ ಶಿಲ್ಪ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಆನೆ, ಕಾಟೇ, ಹುಲಿ, ಚಿರತೆ, ಸಾಂಬಾರ, ತೋಳ, ಕಾಡುನಾಯಿ, ಜಿಂಕೆ, ಕಾಡುಹಂದಿ ಸೇರಿದಂತೆ ಹಲವು ವನ್ಯಜೀವಿಗಳಿವೆ. ಕಳೆದ ಕೆಲವು ವರ್ಷಗಳ ಅಂಕಿಅಂಶದಂತೆ 13ಮಾನವಜೀವಹಾನಿ, 412ಜಾನುವಾರು ಜೀವಹಾನಿ, 188ಪ್ರಕರಣಗಳಲ್ಲಿ ಆಸ್ತಿಹಾನಿ, 7,623ಬೆಳೆಹಾನಿ ಪ್ರಕರಣಗಳು ವರದಿಯಾಗಿವೆ. ಆದರೆ ರಸ್ತೆ ಅಪಘಾತಕ್ಕೆ ಹೋಲಿಸಿದರೆ ಹತ್ತುಪಟ್ಟು ಇವು ಕಡಿಮೆ ಎಂದು ವಿವರಿಸಿದರು.

ಕಾಫಿಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್, ಕೊಪ್ಪ ಉಪಸರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಟ್ರಸ್ಟಿ ಬಿ.ಡಿ.ಚೈತ್ರಾ ಮತ್ತಿತರರು ವೇದಿಕೆಯಲ್ಲಿದ್ದರು. ಟ್ರಸ್ಟ್‍ಅಧ್ಯಕ್ಷ ಫಣಿಂದ್ರ, ಮಾಡ್ಲಪ್ರಕಾಶ, ಹಳ್ಳಿಹಿತ್ಲು ಮಹೇಶಗೌಡ, ಕೆಂಜಿಗೆ ಪ್ರದೀಪ್, ಮೂಗ್ತಿಹಳ್ಳಿ ಮಧು, ಚಂದ್ರಮೌಳಿ, ವಿಜಯಕುಮಾರ, ರಘು ಮತ್ತಿತರರು ವನ್ಯಜೀವಿ ತೊಂದರೆಯ ಬಗ್ಗೆ ಅಧಿಕಾರಿಗಳ ಗಮನಸೆಳೆದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ