October 5, 2024

ಮೂಡಿಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಥಿ ಬ್ಯಾಂಕ್ ಕಳೆದ ಸಾಲಿನಲ್ಲಿ ಶೇ 90.55
ಸಾಲ ವಸೂಲಿ ಗುರಿ ಸಾಧಿಸಿದ್ದು, ರೂ 68 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ25% ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ಅಧ್ಯಕ್ಷ ಹೆಚ್.ಬಿ.ಶಿವಣ್ಣ  ಹಳಸೆ ತಿಳಿಸಿದರು.

ದಿನಾಂಕ 21-09-2024 ರಂದು ಶನಿವಾರ ಮೂಡಿಗೆರೆ ರೈತ ಭವನದಲ್ಲಿ ನಡೆದ ಬ್ಯಾಂಕಿನ 88ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್ 1935 ರಲ್ಲಿ ಸ್ಥಾಪಿತವಾಗಿ ಇದುವರಿಗೆ ರೈತಾಪಿ ವರ್ಗದವರಿಗೆ ಕಡಿಮೆ ಬಡ್ಡಿ ಧರದಲ್ಲಿ ಸಾಲ ನೀಡುವ ಸಹಕಾರ ಸಂಸ್ಥೆಯಾಗಿರುತ್ತದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 140 ಹಳ್ಳಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕು 2023-24 ನೇ ಸಾಲಿನಲ್ಲಿ ರೂ.68,85,210.00 ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ25% ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.

ಬ್ಯಾಂಕ್ ಒಟ್ಟು 3295 “ಎ” ತರಗತಿ ಸದಸ್ಯರಿದ್ದು ಒಟ್ಟಾರೆಯಾಗಿ ಷೇರು ಬಂಡವಾಳ ರೂ 93.88 ಲಕ್ಷ ಇರುತ್ತದೆ. ಬ್ಯಾಂಕಿನಲ್ಲಿ ದಿನಾಂಕ 31-03-2024 ಕ್ಕೆ ಆಪದ್ಥನ ನಿಧಿ ರೂ.427.70 ಲಕ್ಷ ಇರುತ್ತದೆ. ಕಟ್ಟಡ ನಿಧಿ ರೂ.102.32ಲಕ್ಷ ಹಾಗೂ ಇತರೆ ನಿಧಿಗಳು ರೂ.316.21 ಲಕ್ಷಗಳಿದ್ದು ಒಟ್ಟಾರೆಯಾಗಿ ರೂ.846.23 ಲಕ್ಷ ನಿಧಿಗಳಿರುತ್ತದೆ. ಬ್ಯಾಂಕಿನ ಷೇರು ಬಂಡವಾಳ ಮತ್ತು ಇತರೆ ನಿಧಿಗಳನ್ನು ರಾಜ್ಯ ಬ್ಯಾಂಕಿನಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಠೇವಣಿಸಿದ್ದು ಇದು ದಿನಾಂಕ 31-03-2024 ಕ್ಕೆ ರೂ. 1058.01 ಲಕ್ಷಗಳಾಗಿರುತ್ತದೆ.

ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಥಿ ಬ್ಯಾಂಕಿನಿಂದ ವಿವಿಧ ಯೋಜನೆಗಳಲ್ಲಿ ಸಾಲಪಡೆದಿದ್ದು, ಇದು ದಿನಾಂಕ 31-03-2024ಕ್ಕೆ ಒಟ್ಟು ರೂ.774.46 ಲಕ್ಷ ಇರುತ್ತದೆ. ಬ್ಯಾಂಕ್ ಸದಸ್ಯರುಗಳಿಂದ ವಿವಿಧ ಠೇವಣಿಗಳನ್ನು ಸ್ವೀಕರಿಸುತ್ತಿದ್ದು ದಿನಾಂಕ 31-03-2024 ಕ್ಕೆ ಒಟ್ಟು ರೂ.119.73 ಲಕ್ಷಗಳಾಗಿರುತ್ತದೆ.
2023-24 ನೇ ಸಾಲಿನಲ್ಲಿ ಸದಸ್ಯರಿಂದ ಸುಸ್ತಿ ಹಾಗೂ ಚಾಲ್ತಿ ಕಂತು ಸೇರಿ ರೂ.579.76 ಲಕ್ಷ ವಸೂಲಿ ಮಾಡಬೇಕಾಗಿದ್ದು, ಇದರಲ್ಲಿ ರೂ.524.99 ಲಕ್ಷ ವಸೂಲಾಗಿದ್ದು ಇದು ಶೇಕಡವಾರು 90.55 ಗಳಾಗಿರುತ್ತದೆ. ಇದು ಈ ಬ್ಯಾಂಕಿನ ಇತಿಹಾಸದಲ್ಲಿಯೇ ವಸೂಲಿ ಪ್ರಗತಿ ಸಾಧಿಸಲು ಸಾದ್ಯವಾಗಿರುತ್ತದೆೆ. ಇದಕ್ಕೆ ಸಹಕರಿಸಿದ ಎಲ್ಲಾ ರೈತಾಪಿವರ್ಗದವರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ. ಅಲ್ಲದೆ ಮುಂದೆಯು ಸಹ ಇದೇರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ. ವರದಿ ಸಾಲಿನಲ್ಲಿ ರೈತರಿಗೆ ವಿವಿದ ಯೋಜನೆಗಳಲ್ಲಿ ಸುಮಾರು 7 ಕೋಟಿ ಸಾಲ ನೀಡುವ ಗುರಿಯನ್ನು ಹೊಂದಿದ್ದು ಹಾಲಿ ಸಾಲ ನೀಡುವ ಕೆಲಸ ಪ್ರಗತಿಯಲ್ಲಿರುತ್ತದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಬ್ಯಾಂಕಿನ ಮಾಜಿ ಅಧ್ಯಕ್ಷ ಓ.ಎಸ್.ಗೋಪಾಲಗೌಡ ದಂಪತಿಗಳನ್ನು ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ.ಯಲ್ಲಿ ಉನ್ನತ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಓ.ಜಿ.ರವಿ, ನಿರ್ದೇಶಕರಾದ ಜಿ.ಕೆ.ದಿವಾಕರ್ ಗೌಡಹಳ್ಳಿ,  ಶ್ರೀಮತಿ ಮಮತ ಟಿ.ಎಂ. ಹಳೆಕೋಟೆ,  ಅಶ್ವಥ್ ಎಂ.ಬಿ. ಹಳೆಮೂಡಿಗೆರೆ, ಶ್ರೀಮತಿ ವಿಮಲ ಬಿ.ಪಿ. ಚಕ್ಕೊಡಿಗೆ, ಭರತ್ ಕುಮಾರ್ ಹೆಚ್.ಕೆ, ಕನ್ನೇಹಳ್ಳಿ, ವಿಕ್ರಂ ಬಿ.ಎಸ್. ಬಣಕಲ್,  ಗಣಪತಿ ಆಚಾರ್ ಜೆ.ಆರ್. ಜಾವಳಿ,  ಸತೀಶ್ ಕೆ.ಟಿ. ತಲಗೂರು, ಪ್ರಕಾಶ ಹೆಗ್ಡೆ ಡಿ.ಪಿ. ಹೊರನಾಡು ಉಪಸ್ಥಿತರಿದ್ದರು.

ಬ್ಯಾಂಕಿನ ವ್ಯವಸ್ಥಾಪಕ ಕಾರ್ತಿಕ್ ಸಿ ಎಂ ವಾರ್ಷಿಕ ವರದಿ ಮಂಡಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ