October 5, 2024

ಕಳಸ ಕೆ.ಪಿ.ಎಸ್ ಶಾಲೆಯಿಂದ ತಾಲ್ಲೂಕು ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮತ್ತು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನ ಕಳಸ ಕೆ.ಪಿ.ಎಸ್ ಫ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

18.9.2024 ಬುಧವಾದಂದು ಮೂಡಿಗೆರೆ ತಾಲ್ಲೂಕು ಚಿನ್ನಿಗ ಫ್ರೌಢಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಳಸ ಕೆ.ಪಿ.ಎಸ್ ಶಾಲೆಯಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವೀತಿಯ ಸ್ಥಾನ ಪಡೆದರು.
ಹ್ಯಾಮರ್ ಥ್ರೋನಲ್ಲಿ ರಕ್ಷಿತಾ, ಎತ್ತರ ಜಿಗಿತದಲ್ಲಿ ಸಾನಿಕಾ, ಪ್ರಥಮ ಸ್ಥಾನ ಗಳಿಸಿದರೆ, ಗುಂಡು ಎಸೆತದಲ್ಲಿ ದನ್ವಿತಾ, ಎತ್ತರ ಜಿಗಿತದಲ್ಲಿ ಶರತ್ ಎಸ್.ಜೆ. ದ್ವೀತಿಯ ಸ್ಥಾನ ಪಡೆದು ಎಲ್ಲಾ ನಾಲ್ಕು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಉದ್ದ ಜಿಗಿತದಲ್ಲಿ ಮನಮೋಹನ್, 1500 ಮೀಟರ್ ಓಟದಲ್ಲಿ ಪೂರ್ಣೇಶ್ ತೃತೀಯ ಸ್ಥಾನ ಗಳಿಸಿದರು.

ಶಾಲೆಯ ಉಪ ಪ್ರಾಂಶುಪಾಲರಾದ ಶಿವಕುಮಾರ್ H.N. ಮಾತನಾಡಿ ‘ನಮಗೆ ಸಿಕ್ಕ ಸೀಮಿತ ಅವಧಿಯ ನಡುವೆಯೂ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಸುಧೀರ್ ಅಬ್ಬುಗುಡಿಗೆ ಮಾತನಾಡಿ, ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ, ಸಹ ಶಿಕ್ಷಕ ಶೃಂಗೇಶ್ವರ್ ರವರ ವಿಶೇಷ ಪ್ರಯತ್ನ ಮತ್ತು ಇತರೆ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರ ಮಾರ್ಗದರ್ಶನದಿಂದ ವಿಧ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಲು ಸಾಧ್ಯವಾಗಿದೆ. ಕ್ರಿಯಾಶೀಲ ಮತ್ತು ಸ್ಪೂರ್ತಿಯುತ ಶಿಕ್ಷಕರ ತಂಡ ನಮ್ಮ ಕೆ.ಪಿ.ಎಸ್ ಶಾಲೆಯಲ್ಲಿರುವುದು ನಮ್ಮೆಲ್ಲರ ಭಾಗ್ಯ ಎಂದರು.

SDMC ಅಧ್ಯಕ್ಷ ರಫೀಕ್ ಮಾತನಾಡಿ ಮುಂದಿನ ದಿನಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿ, ಸಾಧನೆ ತೋರಿದ ವಿದ್ಯಾರ್ಥಿಗಳನ್ನ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ದಿನಾಂಕ 19.9.24ರಂದು ಪ್ರಭೋದಿನಿ ವಿದ್ಯಾಕೇಂದ್ರದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿ ಪತ್ರ ಮತ್ತು ಪದಕ ಗಳಿಸಿದ ವಿಧ್ಯಾರ್ಥಿಗಳನ್ನ ಹಾಗೂ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಏಳು ವಿದ್ಯಾರ್ಥಿಗಳನ್ನ ಅಭಿನಂದಿಸಲಾಯಿತು.

ಶಿಕ್ಷಕರಾದ ಲೋಕೇಶ್, ಶೃಂಗೇಶ್ವರ್, ಶಿವಪ್ಪ, ಉಮಾ ಹಾಗೂ ಎಲ್ಲಾ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ