October 5, 2024

ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ. 11.52 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ವಿ.ಕೆ. ಶಿವೇಗೌಡ ತಿಳಿಸಿದರು.

ಬುಧವಾರ ಮೂಡಿಗೆರೆ ರೈತ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇನ್ನು ಈ ವರ್ಷ  ರೈತ ಭವನದಲ್ಲಿ ಹಲವಾರು ಅಭಿವೃದ್ಧಿ  ಕಾಮಗಾರಿ ನಡೆದಿದೆ. ದಾನಿಗಳ ನೆರವಿನಿಂದ ರೈತಭವನಕ್ಕೆ ಫಾಲ್ಸ್ ಸೀಲಿಂಗ್ ನಿರ್ಮಿಸಲಾಗಿದೆ. ವಧುವರರ ಕೊಠಡಿ ಸುಸಜ್ಜಿತವಾದ ಕೊಠಡಿ, ಶೌಚಾಲಯ, ಕಾರ್ಮಿಕರಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿರುತ್ತದೆ. ಎಲ್ಲಾ ನಿರ್ದೇಶಕರುಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಟಿ.ಎ.ಪಿ.ಸಿ.ಎಂ.ಎಸ್. ಅಡಿ ಅನೇಕ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ ಎಂದರು.

ಹಾಲಿ ಆಡಳಿತ ಕಛೇರಿಯ ಕಟ್ಟಡವು ಶಿಥಿಲಗೊಂಡಿದ್ದು ಹಾಗೂ  ಕಟ್ಟಡವು ಪಟ್ಟಣದ ಹೃದಯಭಾಗದಲ್ಲಿದ್ದು, ಈ ಕಟ್ಟಡದ ವಿಸ್ತೀರ್ಣ  6120 ಚ. ಅಡಿ ಇದ್ದು, ಸುಂದರವಾದ ವ್ಯಾಪಾರ ಮಳಿಗೆ ಹಾಗೂ ಆಡಳಿತ ಕಛೇರಿ ನಿರ್ಮಿಸಲು ಬಂಡವಾಳ ಕಡಿಮೆಯಿದ್ದು, ಸಂಘದಲ್ಲಿ ಹಣಕಾಸಿನ ಕೊರತೆ ಇರುವುದರಿಂದ ಮಳಿಗೆ ಮತ್ತು ಆಡಳಿತ ಕಛೇರಿ ಕಟ್ಟಲು ನೀಲಿ ನಕ್ಷೆ ತಯಾರಿಸಿ, ಕಟ್ಟಡದ ವಿನ್ಯಾಸವನ್ನು ಸಂಘದ ಮುಂಭಾಗದಲ್ಲಿ ಜಾಹೀರಾತು ಪ್ರಕಟಿಸಿ, ಮಳಿಗೆ ಪಡೆದುಕೊಳ್ಳಲು ಆಸಕ್ತಿವುಳ್ಳವರು ಸಂಘದಿಂದ ನಿಗಧಿ ಪಡಿಸುವ, ಮುಂಗಡ ಹಣವನ್ನು, ಹಣವನ್ನು ಪಾವತಿಸಿದರೆ ಈ ಹಣದಿಂದಲೇ ವ್ಯಾಪಾರ, ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನಿಗಧಿ ಪಡಿಸಿ ಬಾಡಿಗೆ ನೀಡಿದರೆ ಸಂಘಕ್ಕೂ ಲಾಭವಾಗುತ್ತದೆ. ಆದ್ದರಿಂದ ಮಾನ್ಯ ಸದಸ್ಯರುಗಳು ಹೊಸ ಕಟ್ಟಡ ನಿರ್ಮಾಣ, ಮಾಡುವುದಕ್ಕೆ ಮುಂಗಡ ಹಣ ಪಡೆದುಕೊಳ್ಳಲು ಹಾಗೂ ಕಟ್ಟಡವನ್ನ, ತೆರೆವುಗೊಳಿಸಲು ಅನುವು ಮಾಡಿಕೊಡಬೇಕೆಂದು  ಕೋರಿಕೊಂಡರು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರುಗಳು ಅಧ್ಯಕ್ಷರ ಕೋರಿಕೆಯನ್ನು ಸರ್ವಾನುಮತದಿಂದ ಅನುಮೋದಿಸಿದರು.

ಇನ್ನು ಈ ಹಿಂದೆ  ರೈತ ಭವನದಲ್ಲಿ ನಡೆದಿರುವ ಕಾಮಗಾರಿ ಯಲ್ಲಿ  ಲೋಪವಾಗಿರುವ ಬಗ್ಗೆ  ತನಿಖಾ ವರದಿ ಮಂಡನೆ ವಿಳಂಬವಾಗಿರುವ ಬಗ್ಗೆ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.   ಈ ಹಿಂದೆ  64 ಬಿ ಪ್ರಕಾರ ತನಿಖೆಗೆ ನೀಡಲಾಗಿದೆ. ಇದರಿಂದ ಸಂಘದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ತನಿಖಾ ವರದಿ ಬಗ್ಗೆ  ಮುಂದೆ ಏನು ಎನ್ನುವ ಬಗ್ಗೆ  ಎಲ್ಲಾ ಹಿರಿಯ ಸಹಕರಿಗಳು ಮತ್ತು ಎಲ್ಲಾ ನಿರ್ದೇಶಕರು ಒಟ್ಟಿಗೆ  ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ಅಧ್ಯಕ್ಷರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ರತ್ನ ಪ್ರಶಸ್ತಿ ವಿಜೇತ  ಓ ಎಸ್ ಗೋಪಾಲ ಗೌಡ  ದಂಪತಿಗಳು, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ಅಜಿತ್ ಕುಮಾರ್, ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ ಸೇರಿದಂತೆ, ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ಸದಸ್ಯರುಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಉಪಾಧ್ಯಕ್ಷ ಹೆಚ್.ಜಿ. ಉತ್ತಮ ಕುಮಾರ್, ನಿರ್ದೇಶಕರುಗಳು, ವ್ಯವಸ್ಥಾಪಕ ನಿರ್ದೇಶಕರು, ಮಾಜಿ ಅಧ್ಯಕ್ಷರುಗಳು, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು,  ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ