October 5, 2024

ಮಹಿಳೆಯರ ಆರ್ಥಿಕ ಸ್ವಾಲಂಬನೆಗೆ ಸಾಲ ಅನಿವಾರ್ಯ. ಸದುದ್ದೇಶದ ಸಾಲ ಸಾರ್ಥಕ ಎಂದು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷೆ ಸುಜಾತಾಶಿವಕುಮಾರ್ ನುಡಿದರು.

ಚಿಕ್ಕಮಗಳೂರು ಕೋಟೆ ಬಡಾವಣೆ ಆಗ್ರಹಾರ ರಸ್ತೆಯ ಚಿಕ್ಕಮಗಳೂರು ತಾಲ್ಲೂಕು ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ 27ನೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸವೂರ್ ಸಭಾಂಗಣದಲ್ಲಿ ಉದ್ಘಾಟಿಸಿದ ಅವರು ಸನ್ಮಾನ ಸ್ವೀಕರಿಸಿ ನಿನ್ನೆ ಮಾತನಾಡಿದರು.

ಸಾಮಾನ್ಯ ಜನರು ಏನಾದರೂ ಅಭಿವೃದ್ಧಿ ಆಗಬೇಕಾದರೆ ಆರ್ಥಿಕವಾದ ಬೆಂಬಲ ಬೇಕಾಗುತ್ತದೆ. ಸಾಲ ಪಡೆಯುವುದು ತಪ್ಪಲ್ಲ. ದೇಶವೇ ಇಂದು ಸಾಲ ಮಾಡಿದೆ. ಸಾಲ ಮಾಡದವರು ಇಂದು ಯಾರೂ ಇಲ್ಲ. ಆದರೆ ಸಕಾಲಕ್ಕೆ ಮರು ಪಾವತಿಸುವುದರ ಜೊತೆಗೆ ಉದ್ದೇಶಿತ ಕಾರಣಕ್ಕೆ ಸಾಲ ಬಳಕೆಯಾದರೆ ಅಭಿವೃದ್ಧಿ ಸಾಧ್ಯ ಎಂದು ಸುಜಾತಾ ನುಡಿದರು.

ಮಹಿಳಾ ವಿವಿದೋದ್ಧೇಶ ಸಂಘವು ಹೆಣ್ಣುಮಕ್ಕಳ ಆರ್ಥಿಕ ಸಬಲತೆಗಾಗಿಯೆ ಶ್ರಮಿಸಿಕೊಂಡು ಬಂದಿದೆ. ಇದರ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಕೈಜೋಡಿಸಬೇಕು. ಇಲ್ಲಿ ನಿರ್ದೇಶಕಿಯಾಗಿ ಸಾರ್ವಜನಿಕ ಜೀವನದ ಅನುಭವ ಗಳಿಸಿದ ತಾವು ಇಂದು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವಂತಾಗಿದೆ. ಆಡಳಿತಮಂಡಳಿ ಹಾಗೂ ಸದಸ್ಯರೆಲ್ಲರ ಬೆಂಬಲ, ಪ್ರೋತ್ಸಾಹ, ಹಾರೈಕೆಯಿಂದ ಪ್ರಥಮಪ್ರಜೆಯಾಗಿದ್ದು ಮುಂದೆಯೂ ಹೀಗೆ ಮುಂದುವರೆಯಲೆಂದು ಆಶಿಸಿದರು.

ಚಿಕ್ಕಮಗಳೂರು ನಗರಸಭೆಯ ಉನ್ನತೀಕರಣಕ್ಕೆ ಶ್ರಮಿಸುವ ಆಶಯವಿದ್ದು, ಸದಸ್ಯರ ಸಹಕಾರ ಅಗತ್ಯ. ಊರಿನ ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿವಹಿಸಿ. ಘಂಟೆಗಾಡಿಗಳಿಗೆ ವಿಂಗಡಿಸಿದ ಕಸ ಹಾಕಬೇಕು. ಜೊತೆಗೆ ಆಗಾಗ ವಾರ್ಡ್‍ವ್ಯಾಪ್ತಿಯಲ್ಲಿ ಮಹಿಳೆಯರು ಅಲ್ಲಿಯ ನಗರಸಭಾ ಸದಸ್ಯ-ಸಂಘ-ಸಂಸ್ಥೆಗಳೊಂದಿಗೆ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಇದರಿಂದ ನಿಮ್ಮೆಲ್ಲರ ಪ್ರತಿನಿಧಿಯಾದ ನನಗೂ ಒಳ್ಳೆಯ ಹೆಸರೂ ಬರುತ್ತದೆ. ಸ್ವಚ್ಛನಗರವೆಂಬ ಮಾನ್ಯತೆಯೂ ಸಿಗುತ್ತದೆ ಎಂದರು.

ನಗರಸಭೆಯಿಂದ ಮಹಿಳೆಯರ ಕೆಲಸ-ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಮಹಿಳೆಯರ ಗುಂಪುಗಳಿಗೆ ನಗರಸಭೆ ವತಿಯಿಂದ ಲಕ್ಷರೂ. ವರೆಗೆ ಸಾಲ ನೀಡಲಾಗುತ್ತಿದೆ ಎಂದ ಸುಜಾತಾ, ಪ್ರತಿಭಾವಂತರಿಗೆ, ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಆರ್ಥಿಕ ಪ್ರೋತ್ಸಾಹಧನವನ್ನು ನೀಡುತ್ತಿದ್ದು ಅರ್ಹರು ಸದ್ಭಳಕೆ ಮಾಡಿಕೊಳ್ಳಬೇಕೆಂದ ಅಧ್ಯಕ್ಷೆ ಸುಜಾತಾ, ಮಹಿಳಾಸೊಸೈಟಿ ನೀಡಿರುವ ಸನ್ಮಾನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷೆ ಶೈಲಾಚಲುವಯ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಹೆಣ್ಣುಮಕ್ಕಳ ಆರ್ಥಿಕ ಸ್ವಾಲಂಬನೆಗೆ ನೆರವು ನೀಡಲಾಗುತ್ತಿದೆ. 26ವರ್ಷಗಳನ್ನು ಪೂರ್ಣಗೊಳಿಸಿದ್ದು ಮುಂಬರುವ ದಿನಗಳಲ್ಲಿ ಚಟುವಟಿಕೆಗಳನ್ನು ವಿಸ್ತøತಗೊಳಿಸಲು ಅವಕಾಶವಿದೆ ಎಂದರು.

ಸಿಡಿಸಿಸಿಬ್ಯಾಂಕ್ 50,000ರೂ.ಗಳ ಅನುದಾನ ನೀಡಿದ್ದು, ಉತ್ತಮ ಸಹಕಾರ ಸಂಘವೆಂಬ ಪ್ರಶಂಸೆಗೆ ಪಾತ್ರವಾಗಿರುವುದು ಅಭಿಮಾನದ ಸಂಗತಿ. 1.8ಲಕ್ಷರೂ. ಖಾಯಂ ಠೇವಣಿ, 2ಲಕ್ಷರೂ. ಆರ್.ಡಿ., 6.5ಲಕ್ಷರೂ. ಷೇರುಬಂಡವಾಳ ಹೊಂದಿರುವ ಸೊಸೈಟಿ, 5ಲಕ್ಷರೂ. ಸದಸ್ಯರಿಗೆ ಸಾಲ ನೀಡಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ ನೀಡಿದ್ದು, ಸಕಾಲದಲ್ಲಿ ಮರುಪಾವತಿ ಮಾಡಿದರೆ ಹೆಚ್ಚಿನ ಸದಸ್ಯರಿಗೆ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದರು.

ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಲು ಷೇರುದಾರರು ಮುಂದಾಗಬೇಕು. ಕುಟುಂಬಕ್ಕೆ 5ಲಕ್ಷರೂವರೆಗೆ ಆರೋಗ್ಯವೆಚ್ಚವನ್ನು ಇದರಿಂದ ಭರಿಸಬಹುದು. ಆಡಿಟ್‍ನಲ್ಲಿ ಬಿ-ಶ್ರೇಣಿಯ ಸೊಸೈಟಿಯಾಗಿದ್ದು, ಅಲ್ಲಿಯ ಸಲಹೆ ಮೇರೆಗೆ ಲಾಭಾಂಶವನ್ನು ವಿವಿಧ ನಿಧಿಗಳಿಗೆ ವರ್ಗಾಯಿಸಲಾಗಿದೆ ಎಂದ ಶೈಲಾಚಲುವಯ್ಯ 10ವರ್ಷಗಳ ಆಡಳಿತಾವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಷೇರುದಾರರ ಪ್ರತಿಭಾವಂತ ಮಕ್ಕಳಾದ ಅಮೃತಾ ಮತ್ತು ಪ್ರೀತಿ ಅವರಿಗೆ ಪ್ರೋತ್ಸಾಹಧನ ನೀಡಲಾಯಿತು. ನಿರ್ದೇಶರಕರುಗಳಾದ ಗೀತಾಸುಂದರೇಶ್ ಸ್ವಾಗತಿಸಿ, ಮೋಹನಕುಮಾರಿ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪವಿತ್ರಾಅರಸ್ ವಾರ್ಷಿಕ ವರದಿ ಮಂಡಿಸಿದರು. ಯಶೋಧಶಿವಪ್ಪ ಪ್ರಾರ್ಥಿಸಿದರು. ಆಡಳಿತಮಂಡಳಿ ಸದಸ್ಯರುಗಳಾದ ಲಕ್ಷ್ಮೀನಂಜಯ್ಯ, ಕೆ.ಟಿ.ಜಯಶೀಲ, ಹೇಮಾ, ಸುಲೋಚನಾ, ಪದ್ಮಾಮಹಂತೇಶ್, ಗೀತಾಗಿರೀಶ್ ಮತ್ತಿತರರು ವೇದಿಕೆಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ