October 5, 2024

ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದ ಹಿರಿಯ ಕಾಫಿ ಬೆಳೆಗಾರ ಮತ್ತು ಸಮಾಜ ಸೇವಕ ಪೂವಯ್ಯ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಅವರು ಬಣಕಲ್ ಸಮೀಪದ ಚೇಗು ಗ್ರಾಮದ ತಮ್ಮ ಎಸ್ಟೇಟ್ ಮನೆಯಲ್ಲಿ ಬುಧವಾರ ರಾತ್ರಿ 9-30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಪೂವಯ್ಯ ಅವರ ಇಚ್ಚೆಯಂತೆ ಅವರು ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುತ್ತಿದೆ. ಇಂದು ಗುರುವಾರ ಬೆಳಿಗ್ಗೆ 10-30 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಆ ನಂತರ ಹಾಸನ ಮೆಡಿಕಲ್ ಕಾಲೇಜಿಗೆ ದೇಹವನ್ನು ಕೊಂಡೊಯ್ದು ದೇಹದಾನದ ವಿಧಿವಿಧಾನ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪೂವಯ್ಯ ಅವರು ಮೂಲತಃ ಕೊಡಗು ಜಿಲ್ಲೆ ಮೂರ್ನಾಡು ಚೆಟ್ಟಿಮಾಡ ಕುಟುಂಬದವರು, ಕೆಲ ಕಾಲ ವಕೀಲಿ ವೃತ್ತಿ ಮಾಡಿದ್ದರು. ಅವರು ವಿವಾಹ ನಂತರ ಬಣಕಲ್ ಗೆ ಬಂದು ನೆಲಸಿ ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡರು.

ಬಣಕಲ್ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ರಾಜಕೀಯವಾಗಿ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ವಿದ್ಯಾಭಾರತಿ ವಿದ್ಯಾಸಂಸ್ಥೆಯ ಮಾಜಿ ಪದಾಧಿಕಾರಿಯಾಗಿದ್ದರು. ಬಣಕಲ್ ಶ್ರೀ ಮಹಾಮಾಹಿ ದುರ್ಗಪರಮೇಶ್ವರಿ ದೇವಸ್ಥಾನ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿದ್ದರು. ಬಣಕಲ್ ಕಾಲೇಜು ಸಮಿತಿ, ಬಣಕಲ್ ಸಹಕಾರ ಸಂಘದ ಆಡಳಿತ ಮಂಡಳಿ, ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯಾಗಿದ್ದರು.

ಪೂವಯ್ಯ ಅವರು ಪತ್ನಿ ಯಶೋಧಮ್ಮ, ಮಕ್ಕಳಾದ ಪ್ರಸಾದ್ ಮತ್ತು ಕಿರಣ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಿತಭಾಷಿ, ಸ್ನೇಹಮಹಿ ಮತ್ತು ಶಿಸ್ತಿನ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು. ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಮೂಡಿಗೆರೆ ಬೆಳೆಗಾರರ ಸಂಘ ಮತ್ತು ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ