October 5, 2024

ಮೂಡಿಗೆರೆ ತಾಲ್ಲೂಕು ಮಲಯಾಳಂ ಸಂಘದ ಅಧ್ಯಕ್ಷರಾದ ಸಿ.ವಿ. ಮಹೇಶ್ ಜನ್ನಾಪುರ ಇವರ ಮನೆಯಲ್ಲಿ   ಕುಟುಂಬ ಸಮೇತರು ಓಣಂ ಆಚರಿಸಿ ಸಂಭ್ರಮಿಸಿದರು.

ಜಿಲ್ಲೆಯ ವಿವಿದೆಡೆ ಮಲೆಯಾಳಿ ಭಾಷಿಕರು ಭಾನುವಾರ  ತಿರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.  ಬೆಳಿಗ್ಗೆ ಮನೆಯಂಗಳದಲ್ಲಿ ಸುಂದರವಾದ ರಂಗೋಲಿ ಚಿತ್ತಾರ ಬಿಡಿಸಿ ವಿವಿಧ ರೀತಿಯಲ್ಲಿ ಪೂಜೆ ಪುರಸ್ಕಾರ ನೆರವೇರಿಸಿ ಹೊಸ ವಸ್ತ್ರ ಧರಿಸಿ ಸಂಭ್ರಮಿಸಿದರು.

ಓಣಂ   ಹಬ್ಬವನ್ನು ತಿರು ಓಣಂ ಹಬ್ಬ ಎಂದು ಕರೆಯಲಾಗುತ್ತದೆ. ಓಣಂ ಹಬ್ಬಕ್ಕೆ ಇತಿಹಾಸ ಪ್ರಸಿದ್ದ ಚರಿತ್ರೆಯಿದೆ. ಹಿರಣ್ಯ ಕಷ್ಯಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಕೇರಳ ರಾಜ್ಯವನ್ನು ಆಳುತ್ತಿದ್ದಾಗ. ಮೋಸ, ವಂಚನೆಗೆ ಅವಕಾಶ ನೀಡುತ್ತಿರಲಿಲ್ಲ. ಬಲಿ ಚಕ್ರವರ್ತಿ ಆಳ್ವಿಕೆ ಭೂಮಂಡಲದಲ್ಲಿ ಮಾತ್ರವಲ್ಲದೆ ಮೂರು ಲೋಕದಲ್ಲಿ ಪ್ರಶಂಸೆಗೂಳಗಾಗಿತ್ತು. ಅವರ ಆಡಳಿತದ ವೈಖರಿಯಿಂದ ದೇವತೆಗಳೂ ಅಸೂಯೆ ಪಟ್ಟಿದ್ದರು. ಪ್ರಜೆಗಳು ರಾಜನನ್ನು ಆರಾಧಿಸುವ ಪರಿಯಿಂದ ದೇವತೆಗಳಿಗು ಸಹಿಸಲಾಗಲಿಲ್ಲ. ಬಲಿಚಕ್ರವರ್ತಿಯನ್ನು ಜನ ಆರಾಧಿಸುತ್ತಿದ್ದರೆ ನಮಗೂ ಉಳಿಗಾಲವಿಲ್ಲ. ಎಂಬ ಭಯದಲ್ಲಿ ದೇವಾನುದೇವತೆಗಳು ಒಟ್ಟಾಗಿ ಬಲಿ ಮಹಾರಾಜನನ್ನು ಮಟ್ಟ ಹಾಕಲು ತೀರ್ಮಾನಿಸಿದರು.

ಅದಕ್ಕೊಂದು ಉಪಾಯ ಸೂಚಿಸುವಂತೆ ದೇವತೆಗಳ ರಾಜನಾದ ವಿಷ್ಣುವಿನ ಮೊರೆ ಹೋಗಬೇಕಾಯಿತು. ಆಗ ವಿಷ್ಣುದೇವ, ದೇವತೆಗಳ ಆಗ್ರಹಕ್ಕೆ ಮಣಿದು ಬಲಿಯ ಆಡಳಿತದ ಅಂತ್ಯಕ್ಕೆ ತಂತ್ರ ರೂಪಿಸಿ ವಾಮನನ್ನು ಓರ್ವ ಕುಬ್ಜಭ್ರಾಹ್ಮಣ ರೂಪದಲ್ಲಿ ಚಕ್ರವರ್ತಿಯ ಬಳಿಗೆ ಕಳುಹಿಸಿಕೊಟ್ಟನು. ಮಹಾವಿಷ್ಣುವಿನ ಆದೇಶದಂತೆ ವಾಮನ ಬಲಿಚಕ್ರವರ್ತಿ ಬಳಿ ಬಂದು ವರವನ್ನು ಕೇಳುತ್ತಾನೆ. ಪ್ರಜೆಗಳ ಸರ್ವ ಬೇಡಿಕೆ ಈಡೇರಿಸುತ್ತಿದ್ದ ಚಕ್ರವರ್ತಿ ವಾಮನನಲ್ಲಿ ಏನು ಬೇಕೆಂದು ಕೇಳಿದಾಗ ನನಗೆ 3 ಅಡಿ ಜಾಗ ಕೊಡಿ ಎಂದು ಕೇಳುತ್ತಾನೆ.

ಆಗಲಿ ಕೊಡುತ್ತೇನೆ ಎಂದು ಮಹಾರಾಜ ಹೇಳುತ್ತಿದ್ದಂತೆ ಕುಬ್ಜನ ರೂಪದಲ್ಲಿದ್ದ ವಾಮನ ಬೃದಾಕಾರವಾಗಿ ಬೆಳೆದು ಒಂದು ಅಡಿ ಜಾಗವೆಂಬಂತೆ ಮೊದಲ ಹೆಜ್ಜೆಯಿಟ್ಟು ಇಡೀ ಭೂಮಂಡಲವನ್ನೇ ಆವರಿಸಿದ, 2ನೇ ಅಡಿಯಲ್ಲಿ ಇನ್ನೊಂದು ಹೆಜ್ಜೆಯಿಟ್ಟು ಸಾಗರೋಪಾದಿಯಾಗಿ ಎಲ್ಲವನ್ನೂ ಆಕ್ರಮಿಸಿಕೊಳ್ಳುವಷ್ಟರಲ್ಲಿ ಬಲಿ ಚಕ್ರವರ್ತಿಗೆ ಷಡ್ಯಂತ್ರ ಅರಿವಿಗೆ ಬಂತು. 3ನೇ ಹೆಜ್ಜೆ ಎಲ್ಲಿಡಲಿ ಎಂದು ಚಕ್ರವರ್ತಿ ಬಳಿ ಕೇಳಿದಾಗ ಬಲಿಚಕ್ರವರ್ತಿ ತನ್ನ ಶಿರವನ್ನು ತೋರಿಸಿ ಬೇಡಿಕೆಯೊಂದನ್ನು ಇಡುತ್ತಾನೆ. ವರ್ಷಕ್ಕೊಮ್ಮೆ ನನ್ನ ಪ್ರಜೆಗಳನ್ನು ಬೇಟಿಮಾಡುವ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಾನೆ. ವಿಷ್ಣುವಿನ ಒಪ್ಪಿಗೆಯಂತೆ ವಾಮನ ಬಲಿ ಚಕ್ರವರ್ತಿಯ ಬೇಡಿಕೆಗೆ ಅವಕಾಶ ನೀಡುತ್ತಾನೆ. ಬಲಿಚಕ್ರವರ್ತಿ ಭೂಮಿಗೆ ಬರುವ 10ದಿನ ನಡೆಯುವ ಓಣಂ ಹಬ್ಬದಲ್ಲಿ ಕೇರಳಿಗರು ಬಲಿಚಕ್ರವರ್ತಿಗೆ ತೋರಿಸಲೆಂದೇ ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ ಎಂಬ ಪ್ರತೀತಿಯಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ