October 5, 2024

ಜಿಲ್ಲಾಧಿಕಾರಿ ಮೀನಾ ನಾಗರಾಜ್

ಚಿಕ್ಕಮಗಳೂರು ತಾಲ್ಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮ ವ್ಯಾಪ್ತಿಯಲ್ಲಿ ಮಾಜಿ ಸಚಿವ ಸಿ.ಆರ್‌.ಸಗೀರ್ ಅಹಮದ್ ಅವರ ಪತ್ನಿ ಹೆಸರಿನಲ್ಲಿದ್ದ 31 ಎಕರೆ, 31 ಗುಂಟೆ ಜಾಗವು ಸರ್ಕಾರಿ ಜಾಗ ಎಂದು ಘೋಷಿಸಿ ಜಿಲ್ಲಾಧಿಕಾರಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಈವರೆಗೂ ಖಾಸಗಿ ಸ್ವತ್ತಿನಲ್ಲಿದೆ ಎಂದುಕೊಂಡಿದ್ದ ದಬೆದಬೆ ಜಲಪಾತ ಮತ್ತು ಅದಕ್ಕೆ ಸಾಗುವ ರಸ್ತೆ ಪ್ರದೇಶ ಕೂಡಾ ಸರ್ಕಾರದ್ದು ಎಂದೂ ಘೋಷಿಸಿದ್ದಾರೆ.

ಏನಿದು ಪ್ರಕರಣ ?

ಮೂಲತಃ ಈ ಜಾಗ ಇನಾಂ ದತ್ತಾತ್ರೇಯ ಪೀಠ, ಬಾಬಾಬುಡನ್ ದರ್ಗಾ ಧಾರ್ಮಿಕ ಸಂಸ್ಥೆಗೆ ಸೇರಿದ್ದಾಗಿತ್ತು. ಸಂಸ್ಥೆಯ ವಹಿವಾಟುದಾರರಾಗಿದ್ದ ಸಜ್ಮದ್ ಅವರು ವಾಸಿಮಲ್ ಎಂಬುವವರಿಗೆ ಗೇಣಿಗೆ ನೀಡಿದ್ದರು. 1955ರಲ್ಲಿ ಜಾರಿಗೆ ಬಂದಿದ್ದ ಕರ್ನಾಟಕ ರಿಲೀಜಿಯಸ್ ಆ್ಯಂಡ್ ಚಾರಿಟಬಲ್ ಇನಾಂ ಅಬಾಲಿಷನ್ ಕಾಯ್ದೆಯ ಪ್ರಕಾರ ಅಷ್ಟೂ ಜಾಗ ಸರ್ಕಾರಕ್ಕೆ ಸೇರ್ಪಡೆಯಾಗಿತ್ತು.

ವಾಸಿಮಲ್ ಅವರು 1966ರಲ್ಲಿ ಇ‌ಲ್ಲಿಸ್ ಖಾನ್ ಎಂಬುವರಿಗೆ ಮಾರಾಟ ಮಾಡಿದ್ದು, ಅವರಿಂದ ಮೆ.ಸಿಪಾನಿ ಆ್ಯಂಡ್ ಕಂಪನಿ ಖರೀದಿ ಮಾಡಿದೆ. 1978ರಲ್ಲಿ ಸಿ.ಆರ್. ಸಗೀರ್ ಅಹಮದ್ ಅವರ ಪತ್ನಿ ಫಾತಿಮಾಬಿ ಖರೀದಿ ಮಾಡಿ ಇನಾಂ ರದ್ದತಿ ಕಾಯ್ದೆಯಲ್ಲಿನ ಅವಕಾಶದಂತೆ ಅದಿಭೋಗದಾರಿಕೆ ಹಕ್ಕನ್ನು ಭೂನ್ಯಾಯ ಮಂಡಳಿ ಮುಂದೆ ಮಂಡಿಸಿದ್ದರು. 1994ರಲ್ಲಿ ಅದಿಭೋಗದಾರಿಕೆ ಹಕ್ಕನ್ನು ನ್ಯಾಯ ಮಂಡಳಿ ನೋಂದಾಯಿಸಿ ಆದೇಶಿಸಿದೆ.

ಇದೇ ಜಾಗದಲ್ಲಿ ಇದ್ದ ಜಲಪಾತಕ್ಕೆ ಹೋಗುವ ರಸ್ತೆಯು ಸಾರ್ವಜನಿಕ ರಸ್ತೆಯಲ್ಲ ಎಂದು ಫಾತಿಮಾಬಿ ಕೋರ್ಟ್ ಮೆಟ್ಟಿಲೇರಿದ್ದರು. ರಸ್ತೆ ಯಾರಿಗೆ ಸೇರಿದ್ದು ಎಂಬುದನ್ನು ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶಿಸಿತ್ತು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ‘1993ರ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ರದ್ದುಗೊಳಿಸಿದ ಇನಾಂ ಜಮೀನು ಮರಳಿ ನೀಡುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಭೂನ್ಯಾಯ ಮಂಡಳಿ ನೀಡಿರುವ ಮಂಜೂರಾತಿ ಅಸಿಂಧು ಎಂದು ತೀರ್ಮಾನಿಸಲಾಗಿದೆ ಎಂದು ಆದೇಶಿಸಿದ್ದಾರೆ. ಐದೂ ಸರ್ವೆ ನಂಬರ್‌ಗಳಲ್ಲಿರುವ ಅಷ್ಟೂ ಜಾಗ ಸರ್ಕಾರಕ್ಕೆ ಸೇರಿದೆ. ಕಾಲುದಾರಿ, ಬಂಡಿದಾರಿ, ರಸ್ತೆಗಳ ಮೇಲೂ ಅವರಿಗೆ ಹಕ್ಕುದಾರಿಕೆ ಇಲ್ಲ. ‘ಸರ್ಕಾರಿ ಜಾಗ’ ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ತಹಶೀಲ್ದಾರ್‌ ಅವರು ಸೂಚನೆ ನೀಡಿ ಸೆಪ್ಟಂಬರ್  3ರಂದು ಆದೇಶ ಹೊರಡಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ