October 5, 2024

ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ಕಸ್ತೂರಿ ರಂಗನ್ ವರದಿ ಆರನೇ ಅಧಿಸೂಚನೆಗೆ ಆಕ್ಷೇಪಗಳನ್ನು ಸಲ್ಲಿಸಲಾಗಿದೆ.

ಕರಾವಳಿ ಜನಪರ ಒಕ್ಕೂಟದ ಸುಧೀರ್ ಕುಮಾರ್ ಮುರೋಳ್ಳಿ ಮತ್ತು ಅನಿಲ್ ಹೊಸಕೊಪ್ಪ ಇವರುಗಳ ನೇತೃತ್ವದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಯರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ.

ಸುಧೀರ್ ಕುಮಾರ್ ಮುರೋಳ್ಳಿ

ಒಕ್ಕೂಟವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹಲವು ಆಕ್ಷೇಪಗಳನ್ನು ಸಲ್ಲಿಸಿದೆ.

ಮುಖ್ಯವಾಗಿ ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆದಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಸದರಿ ಸಮಿತಿಯು ಈ ಭಾಗಕ್ಕೆ ಭೇಟಿ ನೀಡದೇ ವಾಸ್ತವವನ್ನು ಅರಿಯದೇ ನೀಡಿದ ವರದಿಯಾಗಿದೆ.

ಈ ಭಾಗದ ಗ್ರಾಮಗಳ ಶೇ. 20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿದ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಇದು ಅವೈಜ್ಞಾನಿಕವಾಗಿದೆ.

ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿರುವುದಿಲ್ಲ.
ಪಶ್ಚಿಮ ಘಟ್ಟ ಪ್ರದೇಶವನ್ನು ಸಂರಕ್ಷಿಸಲು ಪ್ರಸ್ತುತ ಜಾರಿಯಲ್ಲಿರುವ ಕಾನೂನು ನೀತಿ ನಿಯಮ ಇರುವುದರಿಂದ ಹೊಸ ಮಾನದಂಡಗಳ ಅವಶ್ಯಕತೆ ಇರುವುದಿಲ್ಲ.

ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದರಿಂದ ಸ್ಥಳೀಯ ಗ್ರಾಮಸ್ಥರು ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆಯ ಮೇಲೆ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ಗಂಭೀರ ಪರಿಣಾಮ ಆಗುವುದನ್ನು ವರದಿಯಲ್ಲಿ ಅವಲೋಕನಕ್ಕೆ ತೆಗೆದುಕೊಂಡಿಲ್ಲ.

ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಪಶ್ಚಿಮಘಟ್ಟದ ಸೆರಗಿನಲ್ಲಿ ಬೆಳೆಯುವ ಅಡಿಕೆ, ಕಾಫಿ, ರಬ್ಬರ್, ತೆಂಗಿನ ತೋಟ ಮುಂತಾದ ಪ್ರದೇಶಗಳು ಹಚ್ಚ ಹಸಿರಿನಿಂದ ಘೋಚರಿಸುತ್ತವೆ. ಇಂತಹ ಪ್ರದೇಶಗಳನ್ನು ಸಹ ಅರಣ್ಯ ಪ್ರದೇಶವೆಂದು ಘೋಷಿಸಿರುವುದು ನೈಸರ್ಗಿಕ ವಿರೋಧಿ ಕ್ರಮ.

ಘೋಷಿಸಲ್ಪಟ್ಟ ಸೂಕ್ಷ್ಮ ಪ್ರದೇಶದಲ್ಲಿ ಹಸಿರೀಕರಣ ಪ್ರದೇಶದಿಂದ ಖಾಸಗಿ ಮತ್ತು ಅರಣ್ಯ ವಾಸಿಗಳ ತೋಟಗಾರಿಕೆ ಕೃಷಿ ಚಟುವಟಿಕೆ ಹಸಿರಿಕರಣ ಪ್ರದೇಶವನ್ನು ಭೌತಿಕ ಸರ್ವೇ ಮೂಲಕ ನೈಸರ್ಗಿಕ ಅರಣ್ಯ ಗಡಿ ಗುರುತಿಸಿರುವುದಿಲ್ಲ.

ಘೋಷಿಸಿದ ಗ್ರಾಮದ ನಿರ್ದಿಷ್ಟ ಸರ್ವೇ ನಂಬರ್ ಪ್ರದೇಶ ವ್ಯಾಖ್ಯಾನಿಸದೇ ಇರುವುದು ಅವೈಜ್ಞಾನಿಕ

ಘೋಷಿಸಿದ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವ ಮೂಲಸೌಕರ್ಯದಿಂದ ಮೂಲಭೂತ ಹಕ್ಕುಗಳಾದ ನೀರು, ರಸ್ತೆ ಅಭಿವೃದ್ಧಿ ಮುಂತಾದ ಹಲವಾರು ಪಾರಂಪರಿಕ ನಾಗರೀಕತೆಯ ಸೌಕರ್ಯ ಅವನತಿಗೆ ಕಾರ್ಯನಿರ್ಬಂಧದಿಂದ ಮಾನವ ಹಕ್ಕುಗಳ ಜೀವನ ಹಕ್ಕು ಉಲ್ಲಂಘನೆಯಾಗುತ್ತದೆ.

ವರದಿಯು ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮಗಳ ಅಸ್ತಿತ್ವವನ್ನು ನಿರ್ಲಕ್ಷಿಸಿದೆ.

ಈ ಹಿಂದಿನ ಅಧಿಸೂಚನೆಗೆ ರಾಜ್ಯಗಳು ಸಲ್ಲಿಸಿದ ತಕರಾರು ಮತ್ತು ಸಲಹೆಗಳ ಬಗ್ಗೆ ಪುನರ್ ಪರಿಶೀಲಿಸಲು ನಿವೃತ್ತ ಐ.ಎ.ಎಸ್. ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಸಮಿತಿಯು ಈ ಭಾಗದ ಯಾವುದೇ ಹಳ್ಳಿ ಪ್ರದೇಶಗಳಿಗೆ ಬೇಟಿಕೊಟ್ಟು ವಾಸ್ತವಿಕತೆಯನ್ನು ಅರಿತಿರುವುದಿಲ್ಲ.

ಈ ಎಲ್ಲಾ ಕಾರಣಗಳಿಂದ ಸ್ಥಳೀಯ ಪ್ರತಿನಿಧಿಗಳ್ನು ಒಳಗೊಂಡ ಹೊಸ ಪರಿಣಿತ ತಂಡವನ್ನು ನೇಮಿಸಿ ವರದಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಪೂರ್ವಗ್ರಹ ಕರಡು ವರದಿಯನ್ನು ತಿರಸ್ಕರಿಸಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟ ತನ್ನ ಮನವಿ ಪತ್ರದಲ್ಲಿ ಆಗ್ರಹಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ