October 5, 2024

ನಾಡಿನೆಲ್ಲೆಡೆ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಗುತ್ತಿದೆ.

ಗಣೇಶೋತ್ಸವವನ್ನು ಬಹುತೇಕ ಕಡೆ ಜಾತಿಧರ್ಮದ ಕಟ್ಟುಪಾಡುಗಳಿಲ್ಲದೇ ಸೌಹಾರ್ಧತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹುದೇ ಒಂದು ಸೌಹಾರ್ಧತೆಗೆ ಮೂಡಿಗೆರೆ ಪಟ್ಟಣದ ಹ್ಯಾಂಡ್ ಪೋಸ್ಟ್ ನಲ್ಲಿ ಇದೇ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಗಣೇಶೋತ್ಸವ ಸಾಕ್ಷಿಯಾಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಜನರನ್ನು ಒಂದೆಡೆ ಸೇರಿಸಲು, ಜನರಲ್ಲಿ ಒಗ್ಗಟ್ಟು ಮೂಡಿಸಲು ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವವನ್ನು ಇಂದಿಗೂ ತನ್ನ ಛಾಪನ್ನು ಮುಂದುವರಿಸಿಕೊಂಡು ಬಂದಿದೆ.

ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ಥಳೀಯ ವ್ಯಾಪರೋದ್ಯಮಿಗಳು, ಯುವಕರು ಸೇರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಶ್ರೀ ಬಾಲಗಣಪತಿ ಸೇವಾ ಸಮಿತಿ ಗೆಳೆಯರ ಬಳಗ ಎಂಬ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ಶ್ರೀ ವಿನಾಯಕ ಟ್ರೇಡರ್ಸ್ ನ ಮಾಲೀಕ ಕೆ.ಆರ್. ಸುಂದ್ರೇಶ್ ಕೆಸವಳಲು ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಗಣೇಶ ಪ್ರತಿಷ್ಟಾಪನೆ ನೆರವೇರಿಸಿದ್ದಾರೆ. ಗಣೇಶ ವಿಗ್ರಹವನ್ನು ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಸುಧಾ ಯೋಗೇಶ್ ಅವರ ಕುಟುಂಬದವರು ನೀಡಿದ್ದಾರೆ.

ವಿಶೇಷ ಎಂದರೆ ಇಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸ್ಥಳಾವಕಾಶವನ್ನು ನೀಡಿರುವವರು ಸ್ಥಳೀಯ ಮುಸ್ಲೀಂ ಸಮುದಾಯದ ವ್ಯಕ್ತಿ. ಹ್ಯಾಂಡ್ ಪೋಸ್ಟ್ ನ ಉದ್ಯಮಿ ಮತ್ತು ಕೃಷಿಕ ಜಿಯಾವುಲ್ಲಾ(ಜಿಯಾಸಾಬ್ರು) ಎಂಬುವವರು ತಮ್ಮ ಜಾಗದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟು ಸೌಹಾರ್ಧತಾ ಭಾವನೆ ಮೆರೆದಿದ್ದಾರೆ. ಜೊತೆಗೆ ಹ್ಯಾಂಡ್ ಪೋಸ್ಟ್ ನ ಸರ್ವಧರ್ಮದ ಉದ್ಯಮಿಗಳು ಉತ್ಸವಕ್ಕೆ ದೇಣಿಗೆ ನೀಡಿದ್ದಾರೆ.

ಇಂತಹ ಸೌಹಾರ್ಧ ಭಾವನೆ ಎಲ್ಲೆಡೆ ಮೂಡಿದಾಗ ನಮ್ಮ ಹಿರಿಯರ ಉದಾತ್ತ ಉದ್ದೇಶದ ಕನಸು ನನಸಾಗುತ್ತದೆ. ಸಮಾಜದಲ್ಲಿ ಸ್ನೇಹಪೂರ್ವಕ ವಾತಾವರಣಕ್ಕೆ ಕಾರಣವಾಗುತ್ತದೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ