October 5, 2024

ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೈಟ್ ಅನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಇಬ್ಬರನ್ನು ಕೊಪ್ಪ ಪೊಲೀಸರು ಅಭಿನಂದಿಸಿ ಗೌರವಿಸಿದ್ದಾರೆ.

ಕೊಪ್ಪ ಪಟ್ಟಣದಲ್ಲಿ   ಪ್ರಕಾಶ್ ಎಂಬುವವರು ಆಕಸ್ಮಿಕವಾಗಿ ತಮ್ಮ ಕೈಗೆ ಧರಿಸಿದ್ದ ಸುಮಾರು ಒಂದು ಲಕ್ಷ ಮೌಲ್ಯದ ಬ್ರೇಸ್ ಲೈಟ್ ಅನ್ನು ಕಳೆದುಕೊಂಡಿದ್ದರು. ಇದು ಕೊಪ್ಪದ ರೂಪೇಶ್ ಮತ್ತು  ರಾಜೇಶ್ ಎನ್ ಎಂಬವವರಿಗೆ ಸಿಕ್ಕಿತ್ತು. ಕೂಡಲೇ ಅದನ್ನು ಕೊಪ್ಪ ಪೊಲೀಸ್ ಠಾಣೆಗೆ ತಲುಪಿಸಿದ್ದರು.

ನಂತರ ಪೊಲೀಸರು ವಿಚಾರಣೆ ನಡೆಸಿ ಚಿನ್ನ ಕಳೆದುಕೊಂಡಿದ್ದ ಪ್ರಕಾಶ್ ಅವರಿಗೆ ಅದನ್ನು ಹಿಂತಿರುಗಿಸುವ ವ್ಯವಸ್ಥೆ ಮಾಡಿದ್ದರು. ಸಿಕ್ಕಿದ ಚಿನ್ನವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರೂಪೇಶ್ ಮತ್ತು ರಾಜೇಶ್ ಅವರನ್ನು ಕೊಪ್ಪ ಠಾಣೆಗೆ ಕರೆಸಿ ಸನ್ಮಾನಿಸಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ  ಪಿ.ಎಸ್.ಐ. ಕೊಪ್ಪ ಪೊಲೀಸ್ ಠಾಣೆ ಇವರ ಸಮ್ಮುಖದಲ್ಲಿ  ಪ್ರಕಾಶ್ ರವರಿಗೆ ಬ್ರೇಸ್ ಲೈಟ್ ಅನ್ನು ಹಸ್ತಾಂತರಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ