October 5, 2024

ಜೇಸಿಐ ಮೂಡಿಗೆರೆ ವತಿಯಿಂದ ಸೆಪ್ಟಂಬರ್ 9 ರಿಂದ 15ರವರೆಗೆ ಪಟ್ಟಣದಲ್ಲಿ ಒಂದು ವಾರ ಕಾಲ ಪ್ರೇರಣ ಜೇಸಿ ಸಪ್ತಾಹವನ್ನು ಏರ್ಪಡಿಸಿದ್ದು, ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಪ್ರೀತ್ ಕಾರಬೈಲ್ ತಿಳಿಸಿದ್ದಾರೆ.

ಅವರು ಸೋಮವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು. ಸೆಪ್ಟಂಬರ್ 9ರಂದು ಬೆಳಿಗ್ಗೆ 10-30ಕ್ಕೆ ಜೇಸಿ ಭವನದಲ್ಲಿ ಸಪ್ತಾಹದ ಉದ್ಘಾಟನೆಯನ್ನು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ನೆರವೇರಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಹಿರಿಯ ಜೇಸಿ ಸದಸ್ಯರಿಗೆ ಮತ್ತು ಹಿರಿಯ ನಾಗರೀಕರಿಗೆ ಗೌರವ ಸಮರ್ಪಣೆ ನೆರವೇರಿಲಿದೆ. ಸಂಜೆ ಲೇಡಿ ಜೇಸಿ ದಿನವಾಗಿ ಆಚರಿಸಲಿದ್ದು ಶಾಸಕಿ ನಯನಾ ಮೋಟಮ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿಲಿದ್ದಾರೆ, ಸಭಾ ಕಾರ್ಯಕ್ರಮದ ನಂತರ ಜೇಸಿ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆಪ್ಟಂಬರ್ 10 ರಂದು ಮಂಗಳವಾರ ಬೆಳಿಗ್ಗೆ ಜೇಸಿ ಭವನದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಸಂಜೆ ಸಭಾ ಕಾರ್ಯಕ್ರಮದ ನಂತರ ಎಲ್.ಕೆ.ಜಿ.ಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ.

ಸೆಪ್ಟಂಬರ್ 11 ರಂದು ಬುಧವಾರ ಬಿದರಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಗಿಡನೆಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ಸಭಾ ಕಾರ್ಯಕ್ರಮದ ನಂತರ ಯುರೋಕಿಡ್ಸ್ ವುಡ್‌ಬ್ರಿಡ್ಜ್ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಸೆಪ್ಟಂಬರ್ 12ರಂದು ಗುರುವಾರ ಬೆಳಿಗ್ಗೆ 10-30ಕ್ಕೆ ಜೇಸಿ ಭವನದಲ್ಲಿ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ ಸಭಾ ಕಾರ್ಯಕ್ರಮದ ನಂತರ ನಳಂದಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸೆಪ್ಟಂಬರ್ 13ರಂದು ಶುಕ್ರವಾರ ಬೆಳಿಗ್ಗೆ 10-30ಕ್ಕೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಸ್ವ ಉದ್ಯೋಗ ಮಾಹಿತಿ ಹಾಗೂ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ಸಂಜೆ ಸಭಾ ಕಾರ್ಯಕ್ರಮದ ನಂತರ ಎಂ.ಇ.ಎಸ್. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.

ಸೆಪ್ಟಂಬರ್ 14ರಂದು ಶನಿವಾರ ಬೆಳಿಗ್ಗೆ ಜೇಸಿ ಭವನದಲ್ಲಿ ಮಹಿಳಾ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಏರ್ಪಡಿಸಿದ್ದು, ಸಂಜೆ ಸಭಾ ಕಾರ್ಯಕ್ರಮದ ನಂತರ ತಾಲ್ಲೂಕು ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.

ಸೆಪ್ಟಂಬರ್ 15ರಂದು ಭಾನುವಾರ ಸಪ್ತಾಹದ ಕೊನೆಯ ದಿನ ಸಂಜೆ 6-30ರಿಂದ ಸಮಾರೋಪ ಸಮಾರಂಭದಲ್ಲಿ ಜೇಸಿ ಕಮಲಪತ್ರ ಪ್ರಧಾನ, ತಾಲ್ಲೂಕಿನ ಸಾಧಕರಿಗೆ, ಯುವ ಪ್ರತಿಭೆಗಳಿಗೆ ಸನ್ಮಾನ, ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೇಸಿ ಪೂರ್ವಾಧ್ಯಕ್ಷ ವಿಜಯಕುಮಾರ್, ಸಪ್ತಾಹದ ನಿರ್ದೇಶಕ ಸುದೀಪ್ ತ್ರಿಪುರ, ಉಪಾಧ್ಯಕ್ಷ ಪಿ. ವಿಶ್ವಕುಮಾರ್, ಪಿ.ಕೆ. ಹಮೀದ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ