October 5, 2024

ಕಸ್ತೂರಿ ರಂಗನ್ ವರದಿ ಬಗ್ಗೆ ಸುಮಾರು ವರ್ಷಗಳಿಂದಲು ಚರ್ಚೆ ನಡೆಯುತ್ತಾ ಇದೆ ಈ ವರದಿ ವಿಚಾರದಲ್ಲಿ ಶಾಶ್ವತ ಪರಿಹಾರ ಕಂಡುಹಿಡಿಯಲು 2 ರಾಷ್ಟ್ರೀಯ ಪಕ್ಷಗಳಾದ ಬಿ ಜೆ ಪಿ ಕಾಂಗ್ರೇಸ್ ಸರ್ಕಾರಗಳು ಪ್ರಯತ್ನ ನಡೆಸಿಲ್ಲ ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡು ಪ್ರದೇಶದ ಜನರು ನೂರಾರು ವರ್ಷಗಳಿಂದ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಕಸ್ತೂರಿ ರಂಗನ್ ವರದಿ ಬಗ್ಗೆ ರೈತರಲ್ಲಿ ಇರುವ ಅನುಮಾನಗಳನ್ನು ನಿವಾರಿಸುವ ಕಾರ್ಯ ಮಾಡಬೇಕು.

ಕಸ್ತೂರಿ ರಂಗನ್ ವರದಿ ಆಗಲಿ ಮಾದವ ಗಾಡ್ಗಿಳ್ ಸಮಿತಿ ವರದಿ ಆಗಲಿ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಯಥಾಸ್ಥಿತಿ ಮುಂದುವರಿಯಲಿ ಎಂದು ಹೇಳಿದೆ ಹೊರತು ಈ ಭಾಗದಲ್ಲಿ ಕೃಷಿ ಮಾಡುವುದು ಜನರು ಜೀವನ ನಡೆಸುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ ಇಲ್ಲಿನ ರೈತರು ತೋಟಗಾರಿಕೆ ಬೆಳೆಗಳಾದ ಕಾಫಿ, ಅಡಿಕೆ ಕಾಳುಮೆಣಸು ಬೆಳೆಗಳನ್ನು ಬೆಳೆದು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದ ಆದಾಯ ತಂದು ಕೊಡುತ್ತಿದ್ದಾರೆ. ಮತ್ತು ಟೀ ಉದ್ಯಮದಿಂದ ಕಾಫಿ ಬೆಳೆಯುವ ರೈತರು ಸೇರಿದಂತೆ ಲಕ್ಷಾಂತರ ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತಿದೆ. 15-20 ವರ್ಷಗಳ ಹಿಂದೆಯೇ ಸುಪ್ರೀಕೋರ್ಟ್ ದೇಶದಲ್ಲಿ 30%ಅರಣ್ಯ ಇರಬೇಕು ಇದನ್ನು ಎಲ್ಲಾ ರಾಜ್ಯ ಸರ್ಕಾರಗಳು ಖಾತರಿ ಪಡಿಸಿಕೊಳ್ಳಬೇಕು ಎಂದು ಆದೇಶ ಮಾಡಿತ್ತು. ಬೇರೆ ರಾಜ್ಯದ ಸರ್ಕಾರಗಳು ಸುಪ್ರೀಕೋರ್ಟ್ ಗೆ ಅಫಿಡೇಟ್ ಸಲ್ಲಿಸಿದೆ ಇದರ ಪ್ರಕಾರ ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಯ ತಿಳಿಸಿದೆ ತಮ್ಮ ರಾಜ್ಯದಲ್ಲಿ ಅರಣ್ಯ ಲಾಭ್ಯವಿರುವ ಬಗ್ಗೆ ಮತ್ತು ಅಲ್ಲಿನ ಜನರು ಮತ್ತು ರೈತರು ಮತ್ತು ಕಾರ್ಮಿಕರು ಅವಲಂಬಿಸಿರುವ ಕೃಷಿ ಬಗ್ಗೆ ಸಮಗ್ರ ಮಾಹಿತಿಯನ್ನು ಸುಪ್ರಿಂಕೋರ್ಟ್ ಹಸಿರು ಪೀಠಕ್ಕೆ ಮಾಹಿತಿ ಸಲ್ಲಿಸಿದೆ. ಆದರೆ ಕರ್ನಾಟಕದಲ್ಲಿ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಓಟಿನ ರಾಜಕಾರಣ ಎಲ್ಲಾ ಸರ್ಕಾರಗಳು ಮಾಡುತ್ತಾ ಬರುತ್ತಿವೆ.

ಚುನಾವಣೆ ಹತ್ತಿರ ಬಂದಾಗ ಜನರನ್ನು ಹೆದರಿಸುವ ಕೆಲಸ ಮಾಡುತ್ತಲೇ ಇರುತ್ತಿವೆ. ಚುನಾವಣೆ ಹತ್ತಿರ ಬಂದಾಗ ಜನರನ್ನು ಹೆದರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ ಅರಣ್ಯ ಇಲಾಖೆ ಕೋರ್ಟ್ ಆದೇಶ ಎಂದು ಹೇಳಿಕೊಂಡು ರೈತರು ಹಿಂದಿನಿಂದಲು ಕೃಷಿ ಮಾಡಿರುವ ಜಮೀನು ಗಳನ್ನು ಮತ್ತು ರೆವಿನ್ಯೂ ಜಾಗ ಗೋಮಾಳ ಜಾಗಗಳನ್ನು ರಿಜರ್ವ ಫಾರೆಸ್ಟ್ ಗೆ ಸೇರುತ್ತದೆ ಎಂದು ಸುಳ್ಳು ದಾಖಲೆಗಳನ್ನು ಕೊಟ್ಟು ಮತ್ತು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವುದನ್ನು ಕರ್ನಾಟಕದಲ್ಲಿನಡೆಸುತ್ತಲೆ ಬರುತ್ತಿದ್ದಾರೆ. ಕಾಂಗ್ರೇಸ್ ಬಿ ಜೆ ಪಿ ಪಕ್ಷಗಳು ತಮ್ಮ ವಿರೋದ ಇರುವವರನ್ನು ಹೆದರಿಸಲು ಬ್ಲಾಕ್‍ಮೇಲ್ ತಂತ್ರ ಮಾಡಿಕೊಂಡು ತಮ್ಮ ಹಿತಾಸಕ್ತಿಗೆ ಬಳೆಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಭೂಮಿ ಇಲ್ಲದ ರೈತರಿಗೆ ಭೂಮಿ ಒದಗಿಸಲು 53, 57 ಅಡಿಯಲ್ಲಿ ಸರ್ಕಾರ ಗೋಮಾಳ ಒತ್ತುವರಿ ರೆವಿನ್ಯೂ ಜಾಗಗಳನ್ನು ಒತ್ತುವರಿ ಮಾಡಿರುವ ರೈತರಿಗೆ ನೆರವಾಗಲು 4.5 ಎಕರೆ ಜಾಗವನ್ನು ಮಂಜೂರು ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು ನಂತರದ ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು 53 ಅರ್ಜಿ ಸಲ್ಲಿಸಿರುವ ರೈತರಿಗೆ ಜಾಗ ಮಂಜೂರು ಮಾಡುವ ಕೆಲಸ ಮಾಡುತ್ತಿಲ್ಲ.

ಶಾಸಕರು ಒತ್ತುವರಿ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಇದನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡು ಕೆಲವು ಜನರಿಗೆ ಮಾತ್ರ ಜಾಗ ಅಕ್ರಮ ವ್ಯವಹಾರ ಮಾಡಿ ಹಣಕೊಟ್ಟವರಿಗೆ ಅಧಿಕಾರಿಗಳು ಜಾಗವನ್ನು ಮಂಜೂರು ಮಾಡುತ್ತಾ ರೈತರಿಗೆ ನ್ಯಾಯಾ ದೊರಕಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ದೇಶದಲ್ಲಿ ಭೂಮಿ ಇರುವುದು ರೈತರು ಕಾರ್ಮಿಕರು ಜೀವನ ನಡೆಸಲು ಮತ್ತು ದೇಶಕ್ಕೆ ಆದಾಯ ತರುವುದಕ್ಕೆ ಭಾರತ ದೇಶ ಜನರ ದೇಶ ಪ್ರಧಾನ ಮಂತ್ರಿ ಗೆ ಸೇರಿದ ದೇಶ ಆಗಲಿ ಮುಖ್ಯ ಮಂತ್ರಿಗೆ ಸೇರಿದ ದೇಶ ಆಗಲಿ ಅಲ್ಲ ಆದ್ದರಿಂದ ಜನರ ಜೀವನಕ್ಕೆ ಬೇಕಾದ ಉದ್ಯೋಗ ಕಲ್ಪಿಸಿ ಕೊಡುವುದು ಸರ್ಕಾರದ ಕೆಲಸ ಆಗಿರುತ್ತದೆ ದೇಶದಲ್ಲಿ ಕೇವಲ ಪ್ರಾಣಿಗಳು ಮಾತ್ರ ಬದುಕಲು ಅಲ್ಲಾ ಮನುಷ್ಯರು ಬದುಕುವಂತ ವಾತಾವರಣ ಕಲ್ಪಿಸಿಕೊಡಬೇಕು.

* ಡಿ. ಎಸ್. ರಮೇಶ್‍ಗೌಡ ದಾರದಹಳ್ಳಿ
ಹಸಿರುಸೇನಾ ಸಂಚಾಲಕರು, ಚಿಕ್ಕಮಗಳೂರು ಜಿಲ್ಲೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ