October 5, 2024

ಕುಂಬಾರ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ನೂತನ ಉಡುಪಿ -ಚಿಕ್ಕಮಗಳೂರು ಲೋಕ ಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಲಾಯಿತು ಎಂದು ಕುಂಬಾರ ಯಾನೆ ಕುಲಾಲ್ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಹರೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಇತ್ತೀಚಿಗೆ ಕೋಟದ ಸಂಸದರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಅವರನ್ನು ನಮ್ಮ ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಈ ವೇಳೆ ನಮ್ಮ ಕುಲಬಾಂಧವರ ಕುಂದು ಕೊರತೆಗಳನ್ನ ವಿವರವಾಗಿ ತಿಳಿಸಿ ನಮ್ಮ ಕುಂಬಾರ ಜನಾಂಗದ ಹಿನ್ನಲೆ ಮತ್ತು ನಮ್ಮ ಸಮುದಾಯ ಹಿಂದುಳಿದಿರುವ ಬಗ್ಗೆ ತಿಳಿಸಲಾಯಿತು ಅಲ್ಲದೆ ಸಂಘದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕು ತಾಲ್ಲೂಕಿನಲ್ಲಿ ನಮಗೆ ಸ್ವಂತ ನಿವೇಶನ ಇಲ್ಲದೆ ಇರುವುದರಿಂದ ಸ್ವಂತ ನಿವೇಶನಕ್ಕೆ ಜಾಗ ಒದಗಿಸಿ ಕೊಡಬೇಕು ಹಾಗೂ ನಮ್ಮ ಸಮಾಜ ಇನ್ನು ಆರ್ಥಿಕವಾಗಿ ಸಬಲರಾಗಿ ಇಲ್ಲದೆ ಇರುವುದರಿಂದ ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲು ಸಮುದಾಯ ಭವನದ ಕೊರತೆ ಇರುವುದರಿಂದ ಸಮುದಾಯ ಭವನ ಸಂಸದರ ಅನುದಾನದಲ್ಲಿ ಮಾಡಿ ಕೊಡಲು ಮನವಿ ಮಾಡಲಾಯಿತು. ಕೂಡಲೇ ಸಂಸದರು ಸಮುದಾಯ ಭವನಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು ಎಂದರು.

ಈ ಹಿಂದೆ ನಮ್ಮ ಸಮುದಾಯದ ಹಿರಿಯರು ಬದುಕು ಕಟ್ಟಿಕೊಳಲು ದುಡಿಮೆಗೆಂದು ಮೂಡಿಗೆರೆ ಸಮೀಪದ ತತ್ಕೊಳ ಕುಂದೂರು ಗ್ರಾಮದ ಸರ್ವೇ ನಂ 2 ರಲ್ಲಿ ಮಡಿಕೆ ಮಾಡಲು ಯೋಗ್ಯವಾದ ಮಣ್ಣು ದೊರೆಯುತ್ತಿತ್ತು ಅದರಂತೆ ಎಲ್ಲರೂ ಅಲ್ಲಿಂದಲೇ ಮಡಿಕೆ ಮಾಡಲು ಮಣ್ಣನ್ನು ತೆಗೆದುಕೊಂಡು ಬರುತ್ತಿದ್ದರು ಅಲ್ಲಿಂದ ತಂದ ಮಣ್ಣಿನಿಂದ ಮಡಿಕೆ ಮಾಡಿ ಹಳ್ಳಿ ಹಳ್ಳಿಗೆ ತೆರಳಿ ಮಾರಾಟ ಮಾಡಿಕೊಂಡು ಅವರ ಜೀವನ ಸಾಗಿಸುತಿದ್ದರು ಆದರೆ ಹೀಗ ಆ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗಿದೆ ಇದರಿಂದ ನಮ್ಮ ಕುಲ ಕಸುಬು  ಮಡಿಕೆ ಮಾಡುವ  ಆ ಜಾಗವನ್ನು ನಮ್ಮ ಕುಂಬಾರಿಕೆ ಕೆಲಸ ಮಾಡಲು ಒದಗಿಸಿ ಕೊಡಬೇಕು ಎಂದು ಮನವಿ ಮಾಡಲಾಯಿತು.  ಜಿಲ್ಲಾಧಿಕಾರಿಗಳೊಂದಿಗೆ ಆ ಭೂಮಿಯ ಬಗ್ಗೆ ಚರ್ಚಿಸಿ ಜಾಗವನ್ನು ಬಿಡಿಸಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಂಬಾರ ಕ್ಷೇಮ ಅಭಿವೃದ್ಧಿ ಸಂಘ ಚಿಕ್ಕಮಗಳೂರು ಅಧ್ಯಕ್ಷರಾಧ ಗಂಗಾಧರ್ ಪದಾಧಿಕಾರಿಗಳಾದ ರವೀಂದ್ರ, ಪರಮೇಶ್, ವರದಪ್ಪ ರಮೇಶ್ ಶಶಾಂಕ್ ಗುತ್ತಿ , ಸತೀಶ್, ಮಂಜು ಶೆಟ್ಟಿ, ಪೂರ್ಣೇಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ