October 5, 2024

ಮೂಡಿಗೆರೆ ತಾಲೂಕಿನ ಸತ್ತಿಗನಹಳ್ಳಿ, ಹೊಸಕೆರೆ, ಊರುಬಗೆ ಭಾಗದಲ್ಲಿ ಕಳೆದ 1 ವಾರದಿಂದ 2 ಕಾಡಾನೆಗಳು ತೋಟಗಳಿಗೆ ಲಗ್ಗೆ ಹಾಕಿ ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಬೆಳೆಗಳನ್ನು ನಾಶಪಡಿಸಿವೆ.

ಈ ಕಾಡಾನೆಗಳು ಕಳೆದ 1 ತಿಂಗಳಿಂದ ಸತ್ತಿಗನಹಳ್ಳಿ, ಹೊಸಕೆರೆ, ಊರುಬಗೆ ಭಾಗದಲ್ಲಿ ತಿರುಗಾಡುತ್ತಿವೆ. ಕಾಫಿ ಅಡಕೆ, ಕಾಳುಮೆಣಸು ಬೆಳೆ ನಾಶಪಡಿಸುತ್ತಿವೆ.

ಮಂಗಳವಾರ ಸತ್ತಿಗನಹಳ್ಳಿಯ ವಾಸುದೇವ್ ಎಂಬುವರ ಮನೆ ಸಮೀಪಕ್ಕೆ ಆಗಮಿಸಿ ಅಲ್ಲಿದ್ದ ಬಗನೆ ಮರವನ್ನು ನೆಲಕ್ಕುರುಳಿಸಿದ್ದು, ಮರ ಮನೆ ಮೇಲೆ ಬಿದ್ದು ಹೆಂಚುಗಳು ತುಂಡಾಗಿವೆ.

ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನ ಹೊರಬರಲು ಭಯಬೀತರಾಗಿದ್ದು, ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಇಲ್ಲಿರುವ 2 ಕಾಡಾನೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ