October 5, 2024

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ ಎತ್ತು ಹಾಗೂ ಎಮ್ಮೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 3,80,000/- ರೂ ನಗದು ವಶ ಪಡಿಸಿಕೊಂಡಿದ್ದಾರೆ .

ಶಿವನಿ ಹೋಬಳಿ ದಂದೂರು ಗ್ರಾಮದ ಕಿರಣ್ ರವರ 160000/- ರೂ ಮೌಲ್ಯದ ಎತ್ತುಗಳು ಕಳ್ಳತನವಾಗಿದ್ದು ಪ್ರಕರಣ ದಾಖಲಿಸಲಾಗಿತ್ತು. ಅಜ್ಜಂಪುರ ಪಟ್ಟಣದ ನವೀನ್ ಕುಮಾರ್ ರವರ ಸುಮಾರು 1,45,000/- ರೂ ಬೆಲೆಯ9 ಎಮ್ಮೆಗಳು ಕಳ್ಳತನ ವಾಗಿತ್ತು.  ವೀರಾಪುರ ಹೊಸೂರು ಗ್ರಾಮದ ಜಗದೀಶ ರವರ 1,00,000/- ರೂ ಬೆಲೆ ಬಾಳುವ ಒಂದು ಜೊತೆ ಬೇಸಾಯ ಮಾಡುವ ಎತ್ತುಗಳು ಕಳ್ಳತನವಾಗಿ ದೂರು ನೀಡಲಾಗಿತ್ತು . ನಾರಾಯಣಾಪುರ ಗ್ರಾಮದ ಅವಿನಾಶ್ ರವರುಸುಮಾರು 1,20,000/- ರೂ ಬೆಲೆ ಬಾಳುವ ಒಂದು ಎತ್ತು ಕಳವಾಗಿತ್ತು.

ಸತತವಾಗಿ ಗೋವುಗಳ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರಿಂದ ಪೊಲೀಸರಿಗೂ ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೀರೇಂದ್ರ ನೇತೃತ್ವದಲ್ಲಿ ಅಪರಾಧ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಗೋಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಜ್ಜಂಪುರದ ಪೊಲೀಸ್ ವಸತಿ ಗೃಹಬಳಿಯ ಉಮ್ಮರ್ ಫಾರೂಕ್ ,  ಅಂಜನೇಯ ಸ್ವಾಮಿ ದೇವಾಲಯ ಹತ್ತಿರದ ಉಮರ್, ಕಿರಾಳಮ್ಮ ದೇವಾಲಯದ ಹತ್ತಿರದ ಸೈಯದ್ ಮುಬಾರಕ್ , ಅಂಬೇಡ್ಕರ್ ಬಡಾವಣೆಯ ನಜೀರ್ ಹಾಗೂ ಅಜ್ಜಂಪುರ ಹುಸೇನ್ ಇವರನ್ನು ಬಂಧಿಸಲಾಗಿದೆ. ಜಾನುವಾರುಗಳ ಮಾರಾಟದಿಂದ ಬಂದ 3,80,000 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ