October 5, 2024

ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಕೋಟೆ ಮಾರಿಯಮ್ಮ ದೇವಸ್ಥಾನ ಬಾಗಿಲು ಮುರಿದು ಹುಂಡಿ ಒಡೆದು 2.5 ಲಕ್ಷ ರೂ ನಗದು ಮತ್ತು ಚಿನ್ನಾಭರಣಗಳನ್ನ ದೋಚಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಅರೆಸ್ಟ್​ ಮಾಡಲಾಗಿದೆ.

ಆಗಸ್ಟ್​ 16 ರಂದು ಮಡಿಕೇರಿ ನಗರದ ಕೋಟೆ ಮಾರಿಯಮ್ಮ ದೇವಸ್ಥಾನ ಬಾಗಿಲು ಮುರಿದು ಹುಂಡಿ ಒಡೆದು 2.5 ಲಕ್ಷ ರೂ ನಗದು ಮತ್ತು ಚಿನ್ನಾಭರಣಗಳನ್ನ ದೋಚಲಾಗಿತ್ತು.  ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಅಲ್ತಾಬ್ ಅಲಿ ಹಾಗೂ ಮೀರ್ ಹುಸೇನ್ ಬಂಧಿತ ಆರೋಪಿಗಳು.

ದುಷ್ಕರ್ಮಿಗಳು ದೇವಸ್ಥಾನದ ಸಿಸಿಟಿವಿಯನ್ನ ಬೇರೆಡೆ ತಿರುಗಿಸಿ ಕೃತ್ಯವೆಸಗಿದ್ದರು. ಪ್ರಕರಣದ ಬೆನ್ನು ಬಿದ್ದ ಮಡಿಕೇರಿ ನಗರ ಪೊಲೀಸರು ನಗರದ ಎಲ್ಲಾ ಆಯಾ ಕಟ್ಟಿನ ಸಿಸಿಟಿವಿಗಳನ್ನ ಪರಿಶೀಲಿಸಿ ತನಿಖೆ ನಡೆಸಿದ್ದರು. ಈ ಸಂದರ್ಭ ಇಬ್ಬರು ವ್ಯಕ್ತಿಗಳ ಮೇಲೆ ಶಂಕೆ ಬಂದ ಹಿನ್ನೆಲೆಯಲ್ಲಿ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಅಸ್ಸಾಂ ಮೂಲದ ಅಲ್ತಾಬ್ ಅಲಿ ಹಾಗೂ ಮೀರ್ ಹುಸೇನ್ ಎಂಬ ಇಬ್ಬರು ಕಳ್ಳತನ ನಡೆಸಿದ್ದಾರೆ. ಬಂಧಿತರಿಂದ ಮೂರು ಗ್ರಾಮ್ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ 95 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ.

ಅಲ್ತಾಬ್ ಮೂರ್ನಾಡು ಸಮೀಪದ ಎಸ್ಟೇಟ್​ ಒಂದರಲ್ಲಿ ಕಾರ್ಮಿಕನಾಗಿದ್ದರೆ, ಮೀರ್ ಹುಸೇನ್ ಕಳ್ಳತನ ಮಾಡಲೆಂದೇ ಅಸ್ಸಾಂನಿಂದ ಇಲ್ಲಿಗೆ ಬಂದಿದ್ದ. ಇವರು ಕಳ್ಳತನಕ್ಕೆಂದೇ ಗ್ಯಾಂಗ್ ಕಟ್ಟಿಕೊಂಡು ಕಾಫಿ ತೋಟಗಳಲ್ಲಿ ಆಶ್ರಯ ಪಡೆದು ದರೋಡೆ ಮಾಡಿದ ನಂತರ ಅಸ್ಸಾಂಗೆ ವಾಪಾಸಾಗಿ ಮತ್ತೆ ಕೆಲಸ ಸಮಯದ ನಂತರ ಬರುತ್ತಿದ್ದು, ಇಂತಹ ಅನೇಕ ಕೃತ್ಯಗಳು ಇತ್ತೀಚೆಗೆ ಚಿಕ್ಕಮಗಳೂರು, ಕೊಡಗು ಹಾಸನ ಭಾಗದಲ್ಲಿ ಮರುಕಳಿಸುತ್ತಿವೆ.

ಆಶ್ರಯ ನೀಡಿದ ಮಾಲೀಕರ ಮೇಲೂ ಕೇಸ್ ; ಪೊಲೀಸರ ಎಚ್ಚರಿಕೆ

ಅಸ್ಸಾಂ ನಿಂದ ಬರುವ ಕಾರ್ಮಿಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಈ ತರಹ ಅಪರಾಧಿ ಕೃತ್ಯಗಳಲ್ಲಿ ಕಾರ್ಮಿಕರು ಸಿಲುಕಿಕೊಂಡರೆ ಅಂತಹ ಎಸ್ಟೇಟ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೆಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ. ಆದುದರಿಂದ ತೋಟದ ಮಾಲೀಕರು ತಮ್ಮ ತೋಟಕ್ಕೆ ಬರುವ ಹೊರರಾಜ್ಯದ ಕಾರ್ಮಿಕರ ಬಗ್ಗೆ ಸೂಕ್ತ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ