October 5, 2024
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯ ಸಮೀಪ ತಿರುವಿನಲ್ಲಿ ಕಾರೊಂದು ಪವರ್ ಲೈನಿನ ವಿದ್ಯುತ್ ಕಂಬಕ್ಕೆ ಗುದ್ದಿ ತದನಂತರ ರಸ್ತೆ ಬದಿಯ ಮನೆಯ ಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ತೀವ್ರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬಣಕಲ್  ಪೊಲೀಸ್ ಠಾಣೆಯ ಸಮೀಪದ  ತಿರುವಿನಲ್ಲಿ  ಬೆಂಗಳೂರಿನಿಂದ ಮೂಡುಬಿದಿರೆಗೆ ಹೋಗುತ್ತಿದ್ದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಪವರ್ ಲೈನ್ ಕಂಬ ಮುರಿದು ಬಿದ್ದಿದ್ದು ತದನಂತರ ಎ.ಜೆ.ಪೌಲ್ಸನ್ ಎಂಬವರ ಮನೆಗೆ ನುಗ್ಗಿ ಗೋಡೆ ಸಂಪೂರ್ಣ ಹಾನಿಯಾಗಿದ್ದು ಅದರಲ್ಲಿ ಓರ್ವ ಮಹಿಳೆ ಹಾಗೂ ಯುವಕರೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ 3.45ಕ್ಕೆ ಸಂಭವಿಸಿದೆ.
ತೀವ್ರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ  ಅಪಾಯ ತಪ್ಪಿದೆ.ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಅಪಘಾತ ಪ್ರಕರಣ;

ಬಣಕಲ್ ಸಮೀಪದ ಬಳಿಯ ತಿರುವಿನಲ್ಲಿ ಮತ್ತೊಂದು ಕಾರು ಹೇಮಾವತಿ ಕಿರುಹಳ್ಳಕ್ಕೆ ಬಿದ್ದು ಜಖಂ ಗೊಂಡಿದೆ. ಈ ತಿರುವಿನಲ್ಲಿ ಕೂಡ ತಡೆಗೋಡೆ ಇಲ್ಲದೇ ಸುಮಾರು 30 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಡೆಗೋಡೆ ನಿರ್ಮಿಸದೇ ಇರುವುದರಿಂದ ನಿತ್ಯ ಸಂಭವಿಸುವ ಅಪಘಾತಗಳಾಗಿವೆ.ಈ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಾಯದ ತಿರುವಿಗೆ ಕ್ರಾಸ್ ಬೇರಿಯರ್ ಅಳವಡಿಸುವಂತೆ ಗ್ರಾಮಸ್ಥರ ಒತ್ತಾಯ:

ಬಣಕಲ್ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಮೂಡಿಗೆರೆ ಸಾಗುವ ರಸ್ತೆಯಲ್ಲಿ ಬೃಹತ್ ತಿರುವು ಇದ್ದು ಅನೇಕ ಮನೆಗಳು ರಸ್ತೆ ಬದಿಯಲ್ಲಿವೆ.ಆದರೆ ಅಲ್ಲಿ ಯಾವುದೇ ತಡೆಗೋಡೆ ಇಲ್ಲ.ವಾಹನಗಳು ರಾಷ್ಟೀಯ ಹೆದ್ದಾರಿಯಲ್ಲಿ ವೇಗವಾಗಿ ಹೋಗುವುದರಿಂದ ರಸ್ತೆ ಬದಿಯ ಮನೆಯವರು ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಎದುರಾಗಿದೆ ಎಂದು ಹಾನಿಯಾದ ಮನೆಯ ಮಾಲೀಕ ಎ.ಜೆ.ಪೌಲ್ಸನ್ ಹೇಳಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಕ್ರಾಸ್ ಬೇರಿಯರ್(ತಡೆಗೋಡೆ) ಅಳವಡಿಸುವ ಮೂಲಕ ಅಪಘಾತ ತಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ