October 5, 2024

ಮಲೇಷಿಯದಲ್ಲಿ ಮುಂಬರುವ ಸೆಪ್ಟೆಂಬರ್16 ರಿಂದ 19 ರವರಗೆ ನಡೆಯಲಿರುವ ಏಷಿಯನ್ ಥ್ರೋ ಬಾಲ್ ಚಾಂಪಿಯನ್ ಶಿಪ್  ಪಂದ್ಯಾವಳಿಗೆ ಭಾರತದಿಂದ 9 ಜನರ ತಂಡ ಪ್ರವಾಸ ಮಾಡಲಿದ್ದು ಕರ್ನಾಟಕದಿಂದ ತಂಡದ ಏಕೈಕ ಸದಸ್ಯೆ ಹೆಚ್.ಎಸ್. ಸುಪ್ರಿತಾ ಆಯ್ಕೆಯಾಗಿದ್ದಾರೆ.

ಹೆಚ್.ಎಸ್.ಸುಪ್ರಿತಾ ಅವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಹೊಸಪುರ ಗ್ರಾಮದ ಶ್ರೀಮತಿ ಗಾಯಿತ್ರಿ ಶ್ರೀನಿವಾಸ್ ಅವರ ಪುತ್ರಿ.

ಗ್ರಾಮೀಣ ಮಟ್ಟದಿಂದ ಬಂದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಸ್ಪರ್ಧಿಸುವುದು ಸುಲಭದ ಮಾತಲ್ಲ, ಆದರೆ ಸುಪ್ರಿತಾ ಅದನ್ನು ಸುಳ್ಳಾಗಿಸಿದ್ದಾರೆ. ಹೊಸಪುರದ ಹೆಚ್ ಎಸ್ ಸುಪ್ರಿತಾ ಮೈಸೂರಿನ ಪ್ರತಿಷ್ಠಿತ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿ ಸಿ ಎಂ ಬಿ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಸುಪ್ರಿತಾ ಚಿಕ್ಕವಳಿದ್ದಾಗಲೇ ಥ್ರೋ ಬಾಲ್ ಪಂದ್ಯದಲ್ಲಿ ಆಸಕ್ತಿ ಹೊಂದಿದ್ದಳು.

ಸುಪ್ರಿತಾ ರಾಜ್ಯ ಅಲ್ಲದೆ ರಾಷ್ಟ್ರ ಮಟ್ಟದಲ್ಲೂ ಅನೇಕ ಪಂದ್ಯಾವಳಿಗಳಲ್ಲಿ ಗುರುತಿಸಿಕೊಂಡಿದ್ದಾರೆ.  ಕರ್ನಾಟಕದ ಹೆಮ್ಮೆಯ ಥ್ರೋ ಬಾಲ್ ಆಟಗಾರ್ತಿ ಸುಪ್ರಿತಾ ಪ್ರಸ್ತುತ ನೇಪಾಳದಲ್ಲಿ ನಡೆಯುತ್ತಿರುವ ಇಂಡೋ ನೇಪಾಳ್ ಚಾಂಪಿಯನ್ ಶಿಪ್ ಪಂದ್ಯಕ್ಕೆ ತೆರಳಿದ್ದಾರೆ.

ಸುಪ್ರಿತಾ ಅವರು ತಮ್ಮ ಕಲಿಕೆಯ ಜೊತೆಗೆ ಥ್ರೋ ಬಾಲ್ ಕ್ರೀಡೆಯಲ್ಲಿ ಸಾಕಷ್ಟು ಪಂದ್ಯಾಗಳನ್ನಾಡಿದ್ದು, ನ್ಯಾಷನಲ್ಸ್ ಥ್ರೋ ಬಾಲ್ ಅಸೋಸಿಯೇಷನ್ ಹಿಮಾಚಲ್ ಪ್ರದೇಶ್ ನಡೆಸಿಕೊಟ್ಟ ಜೂನಿಯರ್ ನ್ಯಾಷನಲ್ ಥ್ರೋಬಾಲ್ ಚಾಂಪಿಯನ್ ಶಿಪ್ ಮತ್ತು ಗೌರ್ನಮೆಂಟ್ ಮಾಡೆಲ್ ಸೀನಿಯರ್ ಸೆಕೆಂಡರಿ ತಾನಾಕಲ ಡಿಸ್ಟ್ರಿಕ್ಟ್ ವೂನಾ ಹಿಮಾಚಲ್ ಪ್ರದೇಶ್ ನಲ್ಲಿ ಮೇ 12 ರಿಂದ 14 ರವರಗೆ ನಡೆಸಿಕೊಟ್ಟ ಜೂನಿಯರ್ ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಸಿಲ್ವರ್ ಮೆಡಲ್ ನ್ನು ತನ್ನದಾಗಿಸಿಕೊಂಡಿದ್ದಾರೆ ಹಾಗೂ ವರ್ಲ್ಡ್ ಅಂಡ್ ಡೀಡ್ ಎಜುಕೇಶನ್ ಅಕಾಡೆಮಿ ಹೈದರಾಬಾದ್ ತೆಲಂಗಾಣದಲ್ಲಿ ನೆಡೆದ ಸೀನಿಯರ್ ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕ್ವಾಟರ್ ಫೈನಲ್ ತಲುಪಿದ ತಂಡದ ಸದಸ್ಯರಾಗಿದ್ದರು.

ಸುಪ್ರಿತಾ ಅವರು ಗ್ರಾಮೀಣ ಪ್ರದೇಶದಲ್ಲಿ ಅರಳಿದ ಪ್ರತಿಭೆಯಾಗಿದ್ದು ಸರ್ಕಾರ ಇಂತ ಪ್ರತಿಬೆಗಳನ್ನು ಗುರುತಿಸಿ ಇವರ ಕ್ರೀಡಾ ಸ್ಫೂರ್ತಿಯನ್ನು ಪ್ರೋತ್ಸಾಹಿಸುವದರ ಜೊತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಹ ನೀಡಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೆಡೆಯುವ ರಾಷ್ಟ್ರಿಯ ಹಬ್ಬಗಳಲ್ಲಿ ಸುಪ್ರಿತಾ ಅಂತ ಕ್ರೀಡಾಪಟುಗಳಿಗೆ ಗೌರವ ಸಮರ್ಪಣೆ ಅಂತ ಕೆಲಸಗಳು ಜಿಲ್ಲಾಡಳಿತದಿಂದ ಗುರುತಿಸಿ ಮುಂದಿನ ದಿನಗಳಲ್ಲಿ ಅಭಿನಂದಿಸುವ ಕೆಲಸ ಆಗಬೇಕೆಂದು ಸಾರ್ವಜನಿಕರ ಆಶಯವಾಗಿದೆ.

ವರದಿ : ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ