October 5, 2024

ಅನಾದಿಕಾಲದಿಂದಲೂ ಕಾಫಿ ತೋಟದ ಕೂಲಿ ಲೈನ್‍ಗಳಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತ ಕುಟುಂಬಗಳಿಗೆ ಕೂಡಲೇ ನಿವೇಶನ ಒದಗಿಸಬೇಕು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.

ಅವರು ಬುಧವಾರ ಮೂಡಿಗೆರೆ ಸಮೀಪದ ಹಳೇಮೂಡಿಗೆರೆ ಗ್ರಾ.ಪಂ.ಕಾರ್ಯಾಲಯದ ಎದುರು ವಸತಿ ಮತ್ತು ನಿವೇಶನ ರಹಿತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ 2018ರಲ್ಲಿಸ.ನಂ.7ರಲ್ಲಿ ನಿವೇಶನಕ್ಕೆಂದು ಕಾಯ್ದಿರಿಸಿದ್ದ ಜಾಗದಲ್ಲಿ ಗುಡಿಸಲು ನಿರ್ಮಿಸಿ 1 ತಿಂಗಳು ನಿರಂತರವಾಗಿ ಹೋರಾಟ ನಡೆಸಿದ್ದರ ಫಲವಾಗಿ ತಾಲೂಕು ಆಡಳಿತ ನಿವೇಶನ ರಹಿತರಿಗೆ 7.30 ಎಕರೆ ಜಾಗ ಮಂಜೂರು ಮಾಡಿದೆ. ಇದರಲ್ಲಿ ತಲಾ ಒಂದು ಎಕರೆ ಅಂಬೇಡ್ಕರ್ ಭವನಕ್ಕೆ, ಹಾಸ್ಟೆಲ್ ಕಟ್ಟಡಕ್ಕೆ, ಮತ್ತು ಪೋಲಿಸ್ ವಸತಿ ಗೃಹಕ್ಕೆ ಹೀಗೆ ಒಟ್ಟು 3 ಎಕರೆ ಜಾಗ ಮೀಸಲಿರಿಸಲಾಗಿತ್ತು. ಉಳಿದ 4.30 ಎಕರೆ ಜಾಗವನ್ನು ನಿವೇಶನರಹಿತರ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ಒಟ್ಟು 32ಕುಟುಂಬಗಳು 6 ವರ್ಷದಿಂದ ಗುಡಿಸಲು ಕಟ್ಟಿ ವಾಸಿಸುತ್ತಿದ್ದಾರೆ. ಪೂರ್ತಿ ಜಾಗ ಸಮತಟ್ಟು ಮಾಡಲಾಗಿದೆ. ಮತ್ತು ಬಡಾವಣೆಗೆ ಗ್ರಾ.ಪಂ.ನಿಂದ ಕುಡಿಯುವ ನೀರಿನ ವ್ಯವಸ್ತೆ ಮಾಡಲಾಗಿದೆ. ಆದರೆ ಇದುವರೆಗೂ ಫಲಾನುಭವಿಗಳ ಪಟ್ಟಿ ತಯಾರಿಸಿ ನಿವೇಶನ ಹಂಚಿಕೆ ಮಾಡಿಲ್ಲ.

ಕಳೆದ 15 ವರ್ಷದಿಂದ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ ಅದೇ ಸ್ಥಳದಲ್ಲಿ ಟೆಂಟ್ ನಿರ್ಮಿಸಿ ವಾಸಮಾಡುತ್ತಿರುವವರನ್ನು ಕಡೆಗಣಿಸಿ ಈಗ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಳೇಮೂಡಿಗೆರೆ ಗ್ರಾ.ಪಂ. ಆಡಳಿತ ಹೊರಟಿದೆ. ಇದರಿಂದ ನೈಜ ಫಲಾನುಭವಿಗಳೆಗೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ದೂರಿದ ಅವರು ಲಾಟರಿ ಮೂಲಕ ಆಯ್ಕೆ ಮಾಡುವ ನಿರ್ಧಾರವನ್ನು ಗ್ರಾ.ಪಂ. ಕೈಬಿಡಬೇಕು. ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಬೇಕು. ಒಂದು ವಾರದೊಳಗೆ ನೈಜ ಫಲಾನುಭವಿಗಳಿಗೆ ನಿವೇಶನ ನೀಡದಿದ್ದಲ್ಲಿ ಆಗಸ್ಟ್ 30ರಂದು ನಡೆಯುವ ಹಳೇಮೂಡಿಗೆರೆ ಗ್ರಾ.ಪಂ.ನ ಗ್ರಾಮಸಭೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ತಾಲೂಕಿನ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೂಲಿ ಲೈನ್ ನಲ್ಲಿ ವಾಸಿಸುವ ವಸತಿ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರಿಗೆ ನಿವೇಶನ ಒದಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಡೀಮ್ಡ್ ಫಾರೆಸ್ಟ್ ಜಾಗವನ್ನು ಜಂಟಿ ಸರ್ವೆ ನಡೆಸಿ ಸುಪ್ರೀಮ್ ಕೋರ್ಟಿಗೆ 2017ರಲ್ಲಿ ಅಫಿಡವಿತ್ ಸಲ್ಲಿಸಲಾಗಿತ್ತು. ಆ ಜಾಗ ಈಗ ಕಂದಾಯ ಇಲಾಖೆಗೆ ಬಂದಿದೆ. ಡೀಮ್ಡ್ ಜಾಗವನ್ನು ನಿವೇಶನ ಮಾಡಿ ಎಲ್ಲಾ ಗ್ರಾ.ಪಂ.ವ್ಯಾಪ್ತಿಯ ವಸತಿರಹಿತರಿಗೆ ನಿವೇಶನ ಒದಗಿಸಬೇಕು. ಇದರಲ್ಲಿ ಅಧಿಕಾರಿಗಳು ತಾರತಮ್ಯ ಮಾಡಬಾರದು ಎಂದು ತಾಕೀತು ನೀಡಿದರು.

ಪ್ರತಿಭಟನೆಯಲ್ಲಿ ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಲಕ್ಷ್ಮಿ, ಜಾನಕಿ, ಶಾರದಾ,ಲಲಿತ, ಮಹಮ್ಮದ್ ಜುಬೇರ್, ರಾಮು, ಯಶೋಧ, ಶೇಖರ್, ಮಂಜುಳಾ, ವಿಠಲ, ಗೋಪಿ, ವನಜಾ,ಹರೀಶ್, ಭಾಷಾ, ಜೋಹರ್, ಧರಣಪ್ಪ ಹಸೈನಾರ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ