October 5, 2024

ತರೀಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅಂತರ್ ಜಿಲ್ಲಾ ಆರೋಪಿ ಭದ್ರಾವತಿಯ ಬೋವಿ ಕಾಲೋನಿಯ ವಸಂತರಾಜ್ ಆಲಿಯಾಸ್ ವಸಂತ ಎಂಬುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನಿಂದ ಒಟ್ಟು 16 ಗ್ರಾಂ ತೂಕದ ಚಿನ್ನದ ಆಭರಣಗಳನ್ನು, 38 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು, 21860 ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 50,000 ರೂ ಮೌಲ್ಯದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡಿದ್ದು ಇದರ ಒಟ್ಟು ಮೌಲ್ಯ 1,86,860ರೂ ಗಳಾಗಿರುತ್ತದೆ.

ಪಟ್ಟಣದ ಪಟ್ಟಣದ ಕೆಹೆಚ್.ಬಿ ಕಾಲೋನಿಯಲ್ಲಿರುವ ವಾಸದ ಮನೆಗೆ ಬೆಳಿಗ್ಗೆ 07:30 ಗಂಟೆಗೆ ಮನೆಯ ಮುಂದಿನ ಬಾಗಿಲಿಗೆ ಇಂಟರ್ ಲಾಕ್ ಹಾಕಿಕೊಂಡು ಅಡಿಕೆ ತೋಟಕ್ಕೆ ಗೊಬ್ಬರ ಹಾಕಲು ಹೋಗಿದ್ದು, ವಾಪಸ್ಸು ಬೆಳಿಗ್ಗೆ 10:30 ಗಂಟೆಗೆ ಬಂದು ನೋಡಲಾಗಿ ಮನೆಯ ಮುಂದಿನ ಭಾಗಿಲನ್ನು ಮೀಟಿರುವುದು ಕಂಡು ಬಂದಿದೆ.

ರೂಂನ ಗಾರ್ಡೇಜ್ ಬೀರುವಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ, 04 ಗ್ರಾಂ ತೂಕದ ಒಂದು ಚಿನ್ನದ ಉಂಗುರ, 38 ಗ್ರಾಂ ತೂಕದ ಬೆಳ್ಳಿಯ ಕುಂಕುಮ ಬಟ್ಟಲುಗಳನ್ನು ಹಾಗೂ 21,000 ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದು, ಈ ಬಗ್ಗೆ ಕೇಸು ದಾಖಲಿಸಲಾಗಿದೆ..

ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂದಿಸಲು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ತರೀಕೆರೆ ಡಿ.ವೈ.ಎಸ್.ಪಿ ವಿ.ಎಸ್. ಹಾಲುಮೂರ್ತಿರಾವ್, ತರೀಕೆರೆ ಪೊಲೀಸ್ ಠಾಣೆಯ ಪೊಲೀಸ್ ಪ್ರಭಾರ ನಿರೀಕ್ಷಕ ವೀರೇಂದ್ರ ರವರ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್.ಐ, ರವರಾದ ಬಸನಗೌಡ ಬಗಲಿ, ದೇವೆಂದ್ರ ರಾಥೋಡ್, ನಾಗೇಂದ್ರನಾಯ್ಕ ಪಿ.ಎಸ್.ಐ(ಕಾ&ಸು), ಆನಂದ್ ಪಾವಸ್ಕರ್ (ಸಂಚಾರ) ಹಾಗೂ ಸಿಬ್ಬಂದಿಗಳಾದ ರುದ್ರೇಶ್, ಧನಂಜಯ ಸ್ವಾಮಿ, ರಿಯಾಜ್, ರಾಮು, ಕಲ್ಲೇಶ್ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್, ರಬ್ಬಾನಿ, ಶೇಷಾದ್ರಿ, ಬಸವರಾಜ್, ಪ್ರಭು ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ತಂಡವನ್ನು ಚಿಕ್ಕಮಗಳೂರು ಎಸ್.ಪಿ ಡಾ. ವಿಕ್ರಮ್ ಅಮಟೆ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ