October 5, 2024

ಎಸ್ಸಿ ಎಸ್ಟಿಗಳಿಗೆ ಮೋಸ ಮಾಡಿ ಅಸಹ್ಯ ಎನ್ನುವಷ್ಟು ಭ್ರಸ್ಟಾಚಾರ ಮಾಡಿರುವುದು ಕಾಂಗ್ರೆಸ್ ಪಕ್ಷದ ಸರಕಾರ, ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು   ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಅಗ್ರಹಿಸಿದ್ದಾರೆ.

ಅವರು ಇಲ್ಲಿನ ಲಯನ್ಸ್ ವೃತ್ತದಲ್ಲಿ ಸೋಮವಾರ ಮುಖ್ಯಮಂತ್ರಿ ರಾಜೀನಾಮೆಗೆ ಅಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ. ಭ್ರಷ್ಟ ಕಾಂಗ್ರೇಸ್ ಗೆ ಮಾನ ಮರ್ಯಾದೆ ಇದ್ರೆ ಕೂಡಲೆ ನೀವು ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗೆ ಇದ್ದ 24000 ಕೋಟಿ ಗ್ಯಾರಂಟಿಗೆ ಬಳಸಿ ಎಸ್ಸಿ ಎಸ್ಟಿಗೆ ಮೋಸ ಮಾಡಿದ್ದೀರಿ. ವಾಲ್ಮೀಕಿ ನಿಗಮ ದುಡ್ಡು ತಿಂದಿದ್ದೀರಿ. ನೀವೆ ಕೇವಲ 87 ಕೋಟಿ ಹಗರಣ ಎಂದು ಒಪ್ಪಿಕೊಂಡಿದ್ದೀರಿ. ಮೂಡದಲ್ಲಿ 13 ಸ್ಯೆಟ್ ಪತ್ನಿ ಹೆಸರಲ್ಲಿ ಮಾಡಿಕೊಂಡಿದ್ದಿರಿ ಅಲ್ಲಿಯು ತುಳಿತಕ್ಕೊಳಗಾದವರ ಭೂಮಿ ಹೊಡೆದ್ದೀದ್ದೀರಿ. ಮೂಡದಲ್ಲಿ ಯಾಕೆ ತನಿಖೆ ಮಾಡಲಿಲ್ಲ ನಿಮ್ಮ ಭ್ರಷ್ಟಾಚಾರ ಈಗ ಹೊರಬರುತ್ತಿದೆ ನೀವು ಸಾಚಾ ಅಲ್ಲ ಎಂದು ಜನರಿಗೆ ತಿಳಿದಿದೆ… ಕೂಡಲೆ ರಾಜಿನಾಮೆ ನೀಡಿ ಎಂದರು.

ಜಿಲ್ಲಾ ಕಾರ್ಯದರ್ಶಿ ರಘು ಜೆ.ಎಸ್ ಮಾತನಾಡಿ ಮ್ಯೆಸೂರಿನ ಮೂಡದಲ್ಲಿ 180 ಕೋಟಿ ಭ್ರಷ್ಟಾಚಾರ ಮಾಡಿ ಬಡವರಿಗೆ ಸಿಗಬೇಕಾದ ನಿವೇಶನ ತನ್ಮ ಹೆಂಡತಿ ಹೆಸರಿಗೆ ಮಾಡಿಕೊಂಡು ರಾಜ್ಯದಲ್ಲೆ ಭ್ರಷ್ಟ ಸರಕಾರ ಅನಿಸಿಕೊಂಡಿದ್ದಿರಿ… ಎಂದರು.

ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ. ರಾಜ್ಯಪಾಲರ ವಿರುದ್ದ ಕಾಂಗ್ರೇಸ್ ಹೋರಾಟ ಮಾಡುತ್ತಿರುವುದು ಸಂವಿಧಾನ ವಿರೋದಿಯಾಗಿದ್ದು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೇಸ್ ಕೆಲವೆ ದಿನದಲ್ಲಿ ಪತನಗೊಳ್ಳಲಿದೆ. ಎಂದರು.

ದೀಪಕ್ ದೊಡ್ಡಯ್ಯ ಮಾತನಾಡಿ ಪ್ರಾಸಿಕೂಷನ್ ಅನುಮತಿ ಸುಮ್ಮನೆ ನೀಡಿಲ್ಲ ಎಲ್ಲ ದಾಖಲೆ ಮುಖ್ಯಮಂತ್ರಿ ವಿರುದ್ದ ಇರುವುದರಿಂದಲೆ ಅನುಮತಿ ನೀಡಿರುವುದು. ನ್ಯೆತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಿ ಎಂದರು.

ಪ್ರತಿಭಟನೆಯಲ್ಲಿ ಮೂಡಿಗೆರೆ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ. ಜಯಂತ್ ಬಿದ್ರಹಳ್ಳಿ. ಡಿಎಸ್ ಸುರೇಂದ್ರ. ಧನಿಕ್ ಕೋಡದಿಣ್ಣೆ. ಪ್ರಶಾಂತ್ ಬಿಳಗುಳ. ಪುಟ್ಟಣ್ಣ ಪಟ್ಟದೂರು. ಕಮಲಾಕ್ಷಮ್ಮ. ಗೌರಮ್ಮ. ನಯನ ತಳವಾರ. ಪಂಚಾಕ್ಷರಿ, ವಿನಯ್ ಹಳೆಕೋಟೆ. ಮನೋಜ್ ಹಳೇಕೋಟೆ, ಪ್ರಕಾಶ್, ಪರಿಕ್ಷಿತ್ ಜಾವಳಿ. ಸಂದೀಪ್ ಕೆಲ್ಲೂರು. ಸಚಿನ್ ಬಾನಳ್ಳಿ. ದಯಾಕರ್, ಪ್ರಶಾಂತ್ ಬಿದರಹಳ್ಳಿ, ರವಿ ಒಡೆಯರ್. ತಾರೇಶ್.  ರವಿ ಬಡವನದಿಣ್ಣೆ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ