October 5, 2024

ಚಿಕ್ಕಮಗಳೂರು ಜಿಲ್ಲೆಯ ಛಾಯಾಗ್ರಾಹಕರು ತಮ್ಮ ಪತ್ರಿಕಾವೃತ್ತಿ ಜತೆಗೆ ಹವ್ಯಾಸಿ ಛಾಯಗ್ರಾಹಕರಾಗಿಯೂ ಜಿಲ್ಲೆಯ ಸೌಂದರ್ಯ ಮತ್ತು ಪ್ರಾಣಿ, ಪಕ್ಷಿಸಂಕುಲವನ್ನು ಜಗತ್ತಿಗೆ ಪರಿಚಯಿಸುವಂತಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ನಗರದ ಶ್ರೀ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ತಾಲೂಕು ಛಾಯಗ್ರಾಹಕರ ಸಂಘದಿಂದ ಇಂದು ಏರ್ಪಡಿಸಿದ್ದ 185ನೇ ವಿಶ್ವ ಛಾಯಾಗ್ರಾಹಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಾಗ್ರಹಣ ಎನ್ನುವುದು ವಾಸ್ತವಿಕತೆಯನ್ನು ಜಗತ್ತಿಗೆ ತೆರೆದಿಡುತ್ತದೆ. ಓದುವುದಕ್ಕಿಂತಲೂ ನೋಡುವುದನ್ನು ಜನ ಹೆಚ್ಚು ನಂಬುತ್ತಾರೆ. ಜಿಲ್ಲೆಯಲ್ಲಿ ಸುದ್ದಿಗಾಗಿ ಅಲ್ಲದೆ ಹವ್ಯಾಸಕ್ಕಾಗಿ ಫೋಟೋಗ್ರಫಿ ಮಾಡುವವರಿದ್ದಾರೆ. ಈ ಜಿಲ್ಲೆಯಲ್ಲಿ ವನ್ಯಜೀವಿ ಫೋಟೋಗ್ರಫಿ ಮಾಡಲು ವಿಫುಲ ಅವಕಾಶಗಳಿವೆ. ಅದಕ್ಕೆ ಹೆಚ್ಚು ಮಹತ್ವ ಕೂಡ ಇದೆ. ಛಾಯಾಗ್ರಾಹಕರು ತಮ್ಮ ವೃತ್ತಿ ಜೀವನದ ಜತೆಗೆ ಹವ್ಯಾಸಿ ಛಾಯಾಗ್ರಹಣವನ್ನು ಮೈಗೂಡಿಸಿಕೊಂಡು ಜಿಲ್ಲೆಯ ಸೌಂದರ್ಯವನ್ನು ಪ್ರಪಂಚಕ್ಕೆ ಪರಿಸಯಿಸಬೇಕು ಎಂದು ತಿಳಿಸಿದರು.

ಸಿಡಿಎ ಅಧ್ಯಕ್ಷರ ಸಹಕಾರದೊಂದಿಗೆ ಮುಂಬರುವ ದಿನದಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಿ ಆ ಕಟ್ಟಡದಲ್ಲೇ ನಿಮ್ಮ ಛಾಯಾಚಿತ್ರಗಳು ಪ್ರದರ್ಶನಗೊಳ್ಳುವ ಹಾಗೆ ಮುಂಬರಲಿರುವ ಡಿಸಿ, ಎಸ್ಪಿಗಳು ನಾವೂ ನೋಡುವಂತಾಗಲಿ. ಸಿಡಿಎ ಅಧ್ಯಕ್ಷರ ಸಹಕಾರದಲ್ಲಿ ಸಿಎ ನಿವೇಶನ ಒದಗಿಸಿಕೊಟ್ಟರೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು.

ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್ ಮಾತನಾಡಿ, ಛಾಯಾಗ್ರಾಹಕರಿಗೆ ಒಂದು ನಿರ್ದಿಷ್ಟ ಜಾಗ ಇಲ್ಲ ಎಂಬುದನ್ನು ಈಗ ಅರಿತಿದ್ದೇನೆ. ಮುಂದೆ ಜಿಲ್ಲಾ ಉಸ್ತುವಾರಿ, ಸಚಿವರು ಹಾಗೂ ಶಾಸಕರ ಮನವೊಲಿಸಿ ನಿವೇಶನ, ಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗುವುದು. ಛಾಯಾಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಕಾರ್ಮಿಕ ಸಚಿವ ಸಂತೋಷ್‌ಲಾಡ್ ಸೇರಿಸಿರುವುದು ಸಂತೋಷದಾಯಕ ಎಂದರು.

ನಗರಸಭೆ ಆಯುಕ್ತ ಬಸವರಾಜು ಮಾತನಾಡಿ, ಛಾಯಾಚಿತ್ರಗಳು ಮನುಷ್ಯನ ಭಾವನಾತ್ಮಕ ಸಂಬಂಧವನ್ನು ಬೆಸೆಯುತ್ತವೆ. ಎಲ್ಲಾ ಶುಭ ಸಮಾರಂಭಗಳಿಗೆ ಛಾಯಾಗ್ರಾಹಣ ಅತ್ಯಗತ್ಯವಾಗಿಬಿಟ್ಟಿದೆ. ನೀವಿಲ್ಲದೆ ಶುಭಕಾರ್ಯಗಳೇ ನಡೆಯುವುದಿಲ್ಲ. ಇತ್ತೀಚೆಗಂತೂ ಮದುವೆ ಕಾರ್ಯಕ್ರಮಗಳನ್ನು ಅದ್ಭುತವಾಗಿ ನಡೆಸಿಕೊಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಯಚಂದ್ರ, ತಾಲೂಕು ಅಧ್ಯಕ್ಷ ಸುನಿಲ್‌ಕುಮಾರ್, ಕಾರ್ಯದರ್ಶಿ ವಿನಯ್, ಖಜಾಂಚಿ ರುದ್ರೇಶ್, ಎ.ಎನ್.ಮೂರ್ತಿ, ಜೀವನ್ ಕೆ.ಶೆಟ್ಟಿ, ರೇಣುಕಪ್ಪ ಮತ್ತಿತರರಿದ್ದರು. ಹಿರಿಯ ಛಾಯಾಗ್ರಾಹಕರಾದ ಸೋಮಶೇಖರ್, ನಾಗೇಂದ್ರ, ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಿಶೋರ್ ಕುಮಾರ್ ಸ್ವಾಗತಿಸಿ, ವಿನಯ್ ನಿರೂಪಿಸಿದರು. ರುದ್ರೇಶ್ ವಂದಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ