October 5, 2024

ಅರಣ್ಯ ಇಲಾಖೆ ರಾಜ್ಯದಲ್ಲಿ ರೈತರ ಮೇಲೆ ದಬ್ಬಾಳಿಕೆ ಹಿಂದಿನಿಂದಲು ನಡೆಸುತ್ತಲೇ ಬರುತ್ತಿದೆ, ಇದಕ್ಕೆ ಮುಖ್ಯವಾದ ಕಾರಣ ಯಾವುದೆ ಪಕ್ಷದ ಸರ್ಕಾರ ಆಡಳಿತದಲ್ಲಿ ಇರಲಿ ಅರಣ್ಯ ಇಲಾಖೆಯಿಂದ ಆಡಳಿತ ಪಕ್ಷದ ಶಾಸಕರು ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ನಿರಂತರವಾಗಿ ಹಣ ಒದಗಿಸಿ ಕೊಡುವ ಅರಣ್ಯ ಇಲಾಖೆ. ಆದ್ದರಿಂದ ಯಾವುದೆ ಸರ್ಕಾರ ಇದ್ದರು ಅರಣ್ಯ ಇಲಾಖೆ ಕೃಪಾ ಕಟಾಕ್ಷ ಸರ್ಕಾರದಿಂದ ದೊರಕುತ್ತಾ ಇರುವುದರಿಂದ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಅರಣ್ಯ ಇಲಾಖೆಗೆ ಸರ್ಕಾರದಲ್ಲಿ ಹೆದರಿಕೆ ಇಲ್ಲದಂತೆ ವರ್ತಿಸುತ್ತಿದೆ ಎಂದು ರೈತ ಮುಖಂಡ ಹಸಿರು ಸೇವೆ ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ದಾರದಹಳ್ಳಿ ಆರೋಪಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ;  2 ತಿಂಗಳ ಹಿಂದೆ ತರೀಕೆರೆ ತಾಲ್ಲೂಕಿನ ತಣಿಗೆಬೈಲು ಅರಣ್ಯ ವಲಯದಲ್ಲಿ ನೂರಾರು ಬೆಲೆಬಾಳುವ ಮರಗಳನ್ನು ಅರಣ್ಯ ಇಲಾಖೆಯವರು ಅಕ್ರಮವಾಗಿ ಕಡಿದು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಹಾಕಿಕೊಂಡಿದ್ದಾರೆ ಅರಣ್ಯ ಇಲಾಖೆ ಹಿಂದಿನಿಂದಲು ಪರಿಸರ ವಿರೋಧಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದೆ ಉದಾ: ನೀಲಗಿರಿ ಅಕೇಷಿಯ ಗಿಡಗಳನ್ನು ಬೆಳೆದು ಈ ಮರಗಳನ್ನು ಖಾಸಗಿ ಕಂಪನಿಗಳ ಮಾಲೀಕರಿಗೆ ಮಾರಾಟ ಮಾಡುತ್ತಾರೆ ಆದರೆ ಈ ಗಿಡಗಳನ್ನು ಬೆಳೆದು ಸರ್ಕಾರಕ್ಕೆ ಖರ್ಚಿನ ಲೆಕ್ಕ ತೋರಿಸಿ ಮಾರಾಟ ಮಾಡುವಾಗ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಾರೆ.

ಈಗ ಕೆಲ ದಿನಗಳ ಹಿಂದಷ್ಟೆ ಅರಣ್ಯ ಇಲಾಖೆ  ಚಿಕ್ಕಮಗಳೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ರೈತರು ಬೆಳೆದ ಪಸಲಿಗೆ ಬಂದ ಕಾಫಿ ತೋಟವನ್ನು ಕಡಿದು ನಾಶ ಮಾಡಿದ್ದಾರೆ ಇದನ್ನು ನೋಡಿದರೆ ಅರಣ್ಯ ಇಲಾಖೆ ರಸ್ತೆ ಬದಿ ಹಿಂದಿನ ಕಾಲದ ರಾಜರುಗಳ ಕಾಲದಿಂದಲು ಸಾಲು ಮರಗಳನ್ನು ಬೆಳೆಸುತ್ತಾರೆ ಆದರೆ ರಸ್ತೆ ಬದಿಯ ಮರಗಳಿಗೆ ಅರಣ್ಯ ಇಲಾಖೆ ತಾವು ವಾರಸುದ್ದಾರಂತೆ ವರ್ತಿಸುತ್ತಿದ್ದಾರೆ.

ವಿದ್ಯುತ್ ಮಂಡಳಿಯವರು ಊರುಗಳಿಗೆ ಲೈನ್ ಹಾಕುವ ಕಂಬದ ವಿದ್ಯುತ್ ವೈರ್ ಗಳನ್ನು ಎಳೆಯುವಾಗ ಕಂಟ್ರಾಕ್ಟರ್ಗಳು ಮರದ ಅಡಿಯಲ್ಲಿ ವಿದ್ಯುತ್ ಲೈನ್ ಗಳನ್ನು ಹಾಕಿರುತ್ತಾರೆ ಇದಕ್ಕೆ ಮುಖ್ಯ ಕಾರಣ ಅರಣ್ಯ ಇಲಾಖೆಯವರು ಮರದ ರೆಂಬೆಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಕಾರಣ ಹೇಳುತ್ತಾರೆ ಆದರೆ ವಿದ್ಯುತ್ ಲೈನ್ ಸರ್ಕಾರದ ಜಾಗದಲ್ಲಿ ಆಗಲಿ ಖಾಸಗಿ ಜಾಗದಲ್ಲಿ ಆಗಲಿ ಹಾಕುವಾಗ ನಿಯಮ ಪ್ರಕಾರ ವಿದ್ಯುತ್ ಕಂಬಗಳಿಗೆ ವೈರ್ ಗಳಿಗೆ ಮರ ಗಿಡಗಳನ್ನು ತೆರವುಗೊಳಿಸಿ ಮಾಡಬೇಕಾಗಿರುತ್ತದೆ ಆದರೆ ಅರಣ್ಯ ಇಲಾಖೆಗೆ ಹೇಳುವವರು ಕೇಳುವವರು ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ ಹೀಗಾಗಿ ಅರಣ್ಯ ಇಲಾಖೆ ಪ್ರಜಾಪ್ರಭುತ್ವದ ಕಾನೂನು ಇವರಿಗೆ ಅನ್ವಯ ಇಲ್ಲ ಎನ್ನುವ ರೀತಿ ದೋರಣೆ ಭಾವಿಸದಂತೆ ವರ್ತಿಸುತ್ತಿದ್ದಾರೆ. ಇದನ್ನು ರೈತಸಂಘ ಮತ್ತು ಹಸಿರು ಸೇವೆ ತೀರ್ವವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ