October 5, 2024

ವಿಜಯಪುರದ ವಕೀಲ ರವಿ ಎಂಬುವವರ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಿ ನೊಂದ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಮುಖಾಂತರ ರಾಜ್ಯಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮೂಲತಃ ರವಿ ಎಂಬುವವರು ವಕೀಲ ವೃತ್ತಿಯಲ್ಲಿದ್ದು ದುಷ್ಕರ್ಮಿಗಳ ಗುಂಪೊಂದು ವಕೀಲರ ದ್ವಿಚಕ್ರ ವಾಹನಕ್ಕೆ ದುರುದ್ದೇಶ ಪೂರಿತವಾಗಿ ಡಿಕ್ಕಿ ಹೊಡೆದು ಸುಮಾರು 2 ಕಿ.ಮೀ. ದೂರವರೆಗೆ ಎಳೆದುಕೊಂಡು ಭೀಕರವಾಗಿ ಕೊಲೆಗೈದ ಐವರು ಆರೋ ಪಿತರನ್ನು ಬಂಧಿಸಿದ್ದು ಕಠಿಣ ಶಿಕ್ಷೆ ನೀಡಬೇಕು ಎಂದರು.

ಮುಂದಿನ ದಿನಗಳಲ್ಲಿ ವಕೀಲರ ಮೇಲೆ ಈ ರೀತಿ ಹಲ್ಲೆ, ದೌರ್ಜನ್ಯ ಕೃತ್ಯ ಪ್ರಕರಣಗಳು ಜರುಗದಂತೆ ಹಾಗೂ ಪ್ರಾಣಹಾನಿ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ನ್ಯಾಯೋಚಿತವಾಗಿ ಸೂಕ್ತ ತನಿಖೆ ಮಾಡಿ ಆರೋಪಿತರಿಗೆ ಶಿಕ್ಷೆ ಆಗುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಈ ರೀತಿಯ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ತ್ವರಿತ ನ್ಯಾಯಾಲಯವನ್ನು ಗೊತ್ತುಪಡಿಸಿ ಶೀಘ್ರ ನ್ಯಾಯ ದೊರಕುವಂತೆ ಮಾಡಬೇಕು. ನೊಂದ ಕುಟುಂಬಕ್ಕೆ ಭದ್ರತೆಯನ್ನು ಸರ್ಕಾರದ ವತಿಯಿಂದ ನೀಡಬೇಕು ಎಂದು ವಕೀಲರ ಸಂಘವು ಒತ್ತಾಯಿಸುತ್ತದೆ ಎಂದರು.

ಇದೇ ವೇಳೆ ವಕೀಲರು ಹಾಗೂ ನ್ಯಾಯಾಧೀಶರುಗಳ ಕುಟುಂಬದ ಸದಸ್ಯರುಗಳಿಗೆ ಆಟೋಟ, ಒಳಾಂಗಣ, ಹೊರಾಂಗಣ ಚಟುವಟಿಕೆ ನಡೆಸಲು ಸ್ಥಳಾವಕಾಶದ ಅಗತ್ಯವಿದೆ. ಅಲ್ಲದೇ ಹೊರಭಾಗದಿಂದ ಜಿಲ್ಲೆಗೆ ಬರುವ ಅತಿಥಿ ವಕೀಲರು ಹಾಗೂ ಕುಟುಂಬದ ಸದಸ್ಯರಿಗೆ ಊಟ, ವಸತಿ, ಅಧ್ಯಯನ ಕೇಂದ್ರ, ಗ್ರಂ ಥಾಲಯ, ಸಾಂಸ್ಕೃತಿಕ ಚಟುವಟಿಕೆ, ವಸತಿಗೃಹ, ಸಭಾಂಗಣ ನಿರ್ಮಿಸಲು ಹಾಗೂ ಸಮಾಜಮುಖಿ ಕಾರ್ಯಕ್ರಮಕ್ಕೆ ನೂತನ ನ್ಯಾಯಾಲಯದ ಸಮೀಪ 4.30 ಎಕರೆ ಸರ್ಕಾರಿ ಜಮೀನನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾ ರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ಎ.ಪ್ರಿಯದರ್ಶಿನಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪರಮೇಶ್, ವಕೀಲರಾದ ವನಿತಾ, ಅರುಣಂತಿ ಮತ್ತಿತರರಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ