October 5, 2024

ಕಡೂರು ತಾಲ್ಲೂಕಿನ ಯಗಟಿ ಹೋಬಳಿಯ ಎಳ್ಳಂಬಳಸೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ವೈದ್ಯರು ಆಗಲಿ ನರ್ಸ್ ಆಗಲಿ ಇಲ್ಲದಿದ್ದು, ಸಾರ್ವಜಿನಿಕರಿಗೆ ಯಾವುದೇ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಎಂಬ ಸಾರ್ವಜನಿಕರ ದೂರನ್ನು ಆದರಿಸಿ ದಲಿತ ಸೇನೆ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಅಲ್ಲಿನ ಗ್ರಾಮಸ್ಥರಾದಂತ ದಲಿತ ಸೇನೆಯ ಕಡೂರು ತಾಲ್ಲೂಕು ಸಂಚಾಲಕರದ ಮಂಜುನಾಥ್ ವಿ ಬಿ ರವರು ವಿಷಯವನ್ನು  ತಿಳಿಸಿದ ಮೇರೆಗೆ ಜಿಲ್ಲಾಧ್ಯಕ್ಷ  ಇಮ್ರಾನ್ ಖಾನ್ ರವರ ಅನುಮತಿಯ ಮೇರೆಗೆ ದಲಿತ ಸೇನೆ ಕಡೂರು ತಾಲ್ಲೂಕು ಅಧ್ಯಕ್ಷರಾದ ಮನೋಜ್ ಕುಮಾರ್ ಎಸ್, ತಾಲ್ಲೂಕು ಉಪಾಧ್ಯಕ್ಷರಾದ ಅಣ್ಣಪ್ಪ ನಾಯ್ಕ, ಕಡೂರು ನಗರ ಅಧ್ಯಕ್ಷರಾದ ಲೋಹಿತ್ ಕುಮಾರ, ತಾಲ್ಲೂಕು ಸಂಘಟನಾ ಕಾರ್ಯದರ್ಶಿಗಳಾದ ಮಂಜು, ತಾಲ್ಲೂಕು ಸಂಚಾಲಕರಾದ ಮಂಜುನಾಥ್ ವಿ ಬಿ ಹಾಗೂ ಯುವಘಟಕದ ಉಪಾಧ್ಯಕ್ಷರಾದ ಪ್ರಶಾಂತ್ ರವರು ಸ್ಥಳಕ್ಕೆ ಭೇಟಿನೀಡಿ ಅಲ್ಲಿನ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಿದರು.

ಜಿಲ್ಲಾ ವೈದ್ಯಾಧಿಕಾರಿಗಳ ಹತ್ತಿರ ಮಾತನಾಡಿ ಅಲ್ಲಿನ ಗ್ರಾಮಪಂಚಾಯಿತಿ ಅಧ್ಯಕ್ಷ  ಶ್ರೀನಿವಾಸ್ ಹಾಗೂ ಕಡೂರು ತರಬೇತಿ ವೈದ್ಯಕೀಯ ಅಧಿಕಾರಿಗಳಾದ ರವಿಕುಮಾರ್ ರವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ಅವರಿಗೆ  ಮನವಿ ಪತ್ರವನ್ನು ಸಲ್ಲಿಸಲಾಯಿತು ಹಾಗೆ ಇನ್ನು ಮುಂದೆ ಎಂದು ಈ ತರಹದ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು ಹಾಗೆ ಮತ್ತೆ ಈ ತರವಾದ ಸಮಸ್ಯೆ ಕಂಡುಬಂದರೆ ಸಂಘಟನೆಯ ಪರವಾಗಿ ಉಗ್ರವಾದ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ