October 5, 2024

ಆಕಸ್ಮಿಕ ಆಘಾತದ ಸಂದರ್ಭ ಜೀವದ ಹಂಗು ತೋರೆದು ಶೌರ್ಯ ಮೆರೆದು ರಕ್ಷಿಸುವುದು ಒಂದು ಮಾಹಾನ್ ಯಜ್ಞಕ್ಕೆ ಸಮ, ಈ ನಿಟ್ಟಿನಲ್ಲಿ ಧರ್ಮಸ್ಥಳ  ಶೌರ್ಯ ವಿಪತ್ತು ತಂಡ ಸ್ವಯಂ ಸೇವಕರ ಕಾರ್ಯ ಶ್ರೇಷ್ಟವಾದುದು ಎಂದು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನದಸ್ಯ ಪ್ರಶಾಂತ್ ಚಿಪ್ರಗುತ್ತಿ ತಿಳಿಸಿದರು.

ಅವರು ಮೂಡಿಗೆರೆ ಸಮೀಪದ ಬಿಳಗುಳದಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕಿನ ಶೌರ್ಯ ವಿಪತ್ತು ತಂಡ ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಾತಿಮತ ಬೇಧವೆನ್ನದೆ ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಎಲ್ಲರು ಒಂದೆ ಕಡೆ ಸೇರುವುದೆ ಯಜ್ಞ. ನಮ್ಮ ತಳಹದಿಯಲ್ಲಿ ಅಧ್ಯಾತ್ಮಿಕತೆ ಇದ್ದರೆ ಅದರಲ್ಲಿ ಪೂರ್ಣ ಯಶಸ್ಸು ಸಾಧ್ಯ. ತ್ಯಾಗದಲ್ಲಿ ಎಂದಿಗೂ ಸುಖವಿದೆ. ಸಮಾಜದ ಒಳಿತಿಗೆ ಕಾರ್ಯ ಮಾಡುವವರು ನಿಸ್ವಾರ್ಥಿಗಳು ಅಗಿದ್ದು. ಇವರು ಯಾವುದೆ ಪಲಾಪೇಕ್ಷತೆ ಬೇಡುವುದಿಲ್ಲ. ಅ ನಿಟ್ಟಿನಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಯುವಕ ಯುವತಿಯರು ತಮ್ಮ ಸಮಯವನ್ನು ಸಮಾಜಕ್ಕೆ ನೀಡಿ ತನುವನ್ನ ದಂಡಿಸಿ ದೇಹವನ್ನ ಶ್ರಮಿಸಿ ತ್ಯಾಗ ಮಾಡುತ್ತಿದೆ ಎಂದರು.

ಉಳ್ಳವರು ತನು ಮನ ದನ ಸಹಾಯದ ಮೂಲಕ ಸಮಾಜ ಸೇವೆ ಮಾಡಬಹುದಾಗಿದ್ದು. ಯಾವುದೆ ಸೇವೆ ಮಾಡದವನಿಗೆ ಜನರ ನಡುವೆ ಬದುಕಲು ಯೋಗ್ಯತೆ ಇಲ್ಲ. ನಮ್ಮ ಹಿರಿಯರ ಶ್ರಮ ಹಾಗು ತ್ಯಾಗವನ್ನು ಮುಂದಿನ ಪೀಳಿಗೆಗೆ ಮುಂದುವರಿಸೋಣ.. ಅಂತಹ ಕಾರ್ಯ ಮಾಡಲು ಪೂಜ್ಯ ಹೆಗ್ಗಡೆ ದಂಪತಿಗಳು ನಮ್ಮನ್ನು ಅಣಿಗೋಳಿಸಿದ್ದು. ಅದು ನಮ್ಮಗಳ ಪುಣ್ಯ. ವಿಪತ್ತಿನಲ್ಲಿ ಇರುವವರನ್ನ ರಕ್ಷಿಸಿ ಈ ಮೂಲಕ ಸೇವೆಯನ್ನ ಸಾತ್ವಿಕವಾಗಿ ಸ್ವೀಕರಿಸೋಣ ಮತ್ತು ಸಮಾಜ ಕಟ್ಟೊಣ ಎಂದರು.

ಜನಜಾಗೃತಿ ವೇದಿಕೆ ಸದಸ್ಯ ನಯನ ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ ; ಅನಿರೀಕ್ಷಿತ ಪ್ರಕೃತಿ ವಿಕೋಪ ಅತಿ ಭೀಕರವಾಗಿದ್ದು. 2019ರಲ್ಲಿ ನಮ್ಮ ತಾಲೂಕಿನಲ್ಲು ದುರಂತವಾಗಿದ್ದು. ಮಲೆಮನೆ ಮತ್ತು ಮದುಗುಂಡಿಯ ನಿಜವಾದ ಸತ್ರಸ್ತರಿಗೆ ಪರಿಹಾರ ನೀಡದೆ ಇರುವುದು ಸಮಾಜದ ದುರಂತವಾಗಿದ್ದು. ಅಂದು ಸಂತ್ರಸ್ತರ ಹೆಸರಲ್ಲಿ  ದುರುಪಯೋಗವಾಗಿದ್ದು. ಇದನ್ನು ನಾಗರಿಕ ಸಮಾಜ ಮಾಡಬಾರದಾಗಿದ್ದು ಸತ್ರಸ್ತರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ತರಬೇತಿದಾರ ಸಂತೋಷ್ ಪೀಟರ್ ಡಿಸೋಜ, ಅಗ್ನಿಶಾಮಕ ದಳದ ಪ್ರವೀಣ್, ಶೌರ್ಯ ತಂಡದ ಕಿಶೋರ್ ಕುಮಾರ್, ಜೈವಂತ ಪಟಗಾರ್, ಪ್ರವೀಣ್ ಪೂಜಾರಿ, ರವಿ, ಮಹೇಶ, ನಾಗರಾಜ್, ಸುರೇಶ್ ಮತ್ತಿತರರು ಇದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ