ಪ್ಯಾರಿಸ್ ಒಲಿಂಪಿಕ್ಸ್ ನ ಪುರುಷರ ಕುಸ್ತಿ 57 ಕೆ. ಜಿ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ.
ಅವರು ಪೊರ್ಟೊರಿಕೊ ದೇಶದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂಕಗಳ ಅಂತರದ ಜಯ ಸಾಧಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದರು. 21 ವರ್ಷದ ಅಮನ್ ಚೊಚ್ಚಲ ಒಲಿಂಪಿಕ್ಸ್ನಲ್ಲಿಯೇ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದರು. ಇದರೊಂದಿಗೆ ಭಾರತಕ್ಕೆ ಕುಸ್ತಿಯಲ್ಲಿ ಒಂದು ಕಂಚಿನ ಪದಕ ಒಲಿಯಿತು.
ಅಮನ್ ಅವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ.
ಕಂಚಿನ ಪದಕ ಹಣಾಹಣಿಯಲ್ಲಿ ಅಮನ್ ಆರಂಭದಲ್ಲಿಯೇ ಕೆಚ್ಚೆದೆ ತೋರಿದರು. ಎದುರಾಳಿ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದರು. ಅವರ ಬಿಗಿ ಹಿಡಿತಕ್ಕೆ ಎದುರಾಳಿಯ ಲಯ ತಪ್ಪಿತು. ಹೀಗಾಗಿ ಅಮನ್ ನಿರಂತರವಾಗಿ ಅಂಕಗಳನ್ನು ಗೆದ್ದರು.