October 5, 2024

ಪ್ಯಾರಿಸ್​ ಒಲಿಂಪಿಕ್ಸ್​ನ ಭಾರತದ ಸ್ಟಾರ್​ ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾಗೆ  ತಮ್ಮ ಬಂಗಾರದ ಪದಕವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅವರ ಪ್ರತಿಸ್ಪರ್ಧಿ ಹಾಗೂ ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್   ಒಲಿಂಪಿಕ್ಸ್ ದಾಖಲೆಯ 92.97 ಮೀಟರ್ ಎಸೆಯುವ ಮೂಲಕ ಬಂಗಾರ ಗೆದ್ದರು. ಹೀಗಾಗಿ ನೀರಜ್ ಚೋಪ್ರಾ ಅವರಿಗೆ ಬೆಳ್ಳಿಯ ಪದಕ ಲಭಿಸಿತು.   ಇದು ಭಾರತದ ಪಾಲಿಗೆ ಹಾಲಿ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಐದನೇ ಪದಕ.

ನೀರಜ್ ಚಿನ್ನ ಗೆಲ್ಲುತ್ತಾರೆಂಬ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು. ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಮತ್ತೆ ಫೌಲ್ ಆಗಿದ್ದರು.

ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಈ ನಂತರದ ಸ್ಥಾನದಲ್ಲಿ ನೀರಜ್ ಚೋಪ್ರಾ ಇದ್ದರು. 3,4,5 ನೇ ಪ್ರಯತ್ನದಲ್ಲಿಯೂ ನೀರಜ್ ಚೋಪ್ರಾ ಫೌಲ್ ಆದರು. ಜರ್ಮನಿಯ ಜೂಲಿಯನ್ ವೆಬರ್ 87.33 ಮೀಟರ್ ಭರ್ಜಿ ಎಸೆಯುವ ಮೂಲಕ 3 ನೇ ಸ್ಥಾನದಲ್ಲಿದ್ದರು.

ಅರ್ಷದ್ ನದೀಮ್ ತಮ್ಮ 2ನೇ ಪ್ರಯತ್ನದ ಕೊನೆಯ ಎಸೆತದಲ್ಲಿ 84.47 ಮೀಟರ್ ಗಳಿಗೆ ಭರ್ಜಿ ಎಸೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್ ನಲ್ಲಿ 12 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಪಾಕಿಸ್ತಾನದ ಅರ್ಷದ್ ತಮ್ಮೆಲ್ಲ ಶಕ್ತಿಯನ್ನು ಬಳಸಿ ದಾಖಲೆಯ ಎಸೆತವನ್ನು ಎಸೆದು ಚಿನ್ನ ಗೆದ್ದರು. ಇದು ಪಾಕಿಸ್ತಾನಕ್ಕೆ ಇದುವರೆಗಿನ ಒಲಂಪಿಕ್ ಕ್ರೀಡಾಕೂಟಗಳಲ್ಲಿ ದೊರೆತ ಮೊತ್ತ ಮೊದಲ ವೈಯುಕ್ತಿಕ ಪದಕವಾಗಿದೆ.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಗೆದ್ದ ಚಿನ್ನದ ಪದಕ ಉಳಿಸಿಕೊಳ್ಳುವುಕ್ಕೆ 26 ವರ್ಷದ ನೀರಜ್​ಗೆ ಸಾಧ್ಯವಾಗಲಿಲ್ಲ. ಒಲಿಂಪಿಕ್ಸ್​ನಲ್ಲಿ ಮತ್ತೊಂದು ಚಿನ್ನ ಗೆಲ್ಲುವ ಅವಕಾಶ ಅವರಿಗೆ ತಪ್ಪಿತು. ಮಂಗಳವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ನೀರಜ್ 89.34 ಮೀಟರ್ ಎಸೆಯುವ ಮೂಲಕ ನೇರವಾಗಿ ಅರ್ಹತೆ ಪಡೆದಿದ್ದರು. ಆಗಸ್ಟ್ 7, 2021ರಂದು, ನೀರಜ್ ಚೋಪ್ರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ