October 5, 2024

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು  ಶುಕ್ರವಾರ ಶೃದ್ದಾಭಕ್ತಿಯಿಂದ ಆಚರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮೂಡಿಗೆರೆ ಪಟ್ಟಣದಲ್ಲಿ ವಿವಿಧ ದೇವಾಲಯಗಳಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಬಣಕಲ್, ಫಲ್ಗುಣಿ, ಕೊಟ್ಟಿಗೆಹಾರ, ಅತ್ತಿಗೆರೆ, ಬಿನ್ನಡಿ,ಅಜಾದ್ ನಗರ, ಬಾಳೂರು, ನಿಡುವಾಳೆ ಮತ್ತಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.ಹರಕೆ ಹೊತ್ತ ಭಕ್ತರು ನಾಗರ ಪಂಚಮಿ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಸಂಪ್ರದಾಯದಂತೆ ನಾಗರಹುತ್ತ,ನಾಗರಕಟ್ಟೆಗೆ ಹಾಲು ಎರೆಯುವುದು,ಎಳೆನೀರು ಸೇವೆ,ಕ್ಷೀರಾಭಿಷೇಕ ಸೇರಿದಂತೆ ಮತ್ತಿತರ ವಿಶೇಷ ಪೂಜಾ ಕೈಕಂರ್ಯಗಳು ನಡೆದವು.

ಅರ್ಚಕರಾದ ರಾಮಕೃಷ್ಣ ಕಾರಂತ ಕೊಟ್ಟಿಗೆಹಾರ ಸೀತಾರಾಮ ದೇವಸ್ಥಾನದ ಬಳಿ ಇರುವ ನಾಗರಕಟ್ಟೆಗೆ ವಿಶೇಷ ಪೂಜೆ ಸಲ್ಲಸಿ ಮಾತನಾಡಿ’ ನಾಗನ ಆರಾಧನೆಯಿಂದ ಚರ್ಮ ವ್ಯಾಧಿ, ತುರಿಕೆ,ಹುಣ್ಣುಗಳಾಗುವುದನ್ನು ಪರಿಹರಿಹಾರವಾಗುತ್ತವೆ ಎಂಬ ನಂಬಿಕೆಯಿರುವುದರಿಂದ ಜನರು ವಿಶೇಷ ಪೂಜೆ ಮಾಡುತ್ತಾರೆ. ನಾಗರ ಹಾವನ್ನು ಕೊಂದ ಪರಿಹಾರಕ್ಕಾಗಿ ಸರ್ಪ ಸಂಸ್ಕಾರ,ಆಶ್ಲೇಷ ಬಲಿ,ಬೆಳ್ಳಿಯ ನಾಗನ ಹೆಡೆ,ಮತ್ತಿತರ ವಸ್ತುಗಳನ್ನು ಸಮರ್ಪಿಸುವುದು ಸಾಮಾನ್ಯವಾಗಿದೆ’ಎಂದರು.

ತರುವೆಯಲ್ಲಿ ಅರ್ಚಕ ದಿವಾಕರ ಕಾರಂತ್, ಅತ್ತಿಗೆರೆಯಲ್ಲಿ ಸುಬ್ರಹ್ಮಣ್ಯ ಭಟ್ ಪೂಜೆ ಸಲ್ಲಿಸಿದರು. ಸಂದರ್ಭದಲ್ಲಿ ಭಕ್ತರಾದ ಟಿ.ಎಂ.ನರೇಂದ್ರ, ಸಂಜಯ್ ಗೌಡ,ಅಶೋಕ್ ಮಲ್ಲಂದೂರು,ಬಿ.ಎಸ್.ಲಕ್ಷ್ಮಣ್ ಗೌಡ,ವೀರಪ್ಪಗೌಡ, ಬಿ.ಸಿ.ಪ್ರವೀಣ್,ನಾರಾಯಣ್, ಪರೀಕ್ಷಿತ್ ಜಾವಳಿ, ಮತ್ತಿತರ ಭಕ್ತರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ