October 5, 2024

ಕಳೆದ ಹತ್ತು ವರ್ಷದಿಂದ ಹೋಲಿಕೆ ಮಾಡಿದ್ದಲ್ಲಿ ಈ ವರ್ಷ ಜುಲೈ ತಿಂಗಳಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಬಂದು ಎಲ್ಲಾ ಬೆಳೆ ನಾಶವಾಗಿದೆ, ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು  ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಹೇಳಿದರು.

ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಈ ಬಾರಿ ತಾಲೂಕಿನದ್ಯಂತ ಎಡೆ ಬಿಡದೆ ಸುರಿದ ಮಳೆಗೆ ಕಾಫಿ ಕಾಳು ಮೆಣಸು ಅಡಿಕೆ ಎಲ್ಲಾ ಉದುರಿ ಹೋಗಿದೆ ಬೆಳೆಗಾರರು ಇದೆ ಬೆಳೆಯನ್ನು ಅವಲಂಬಿಸಿ ಬದುಕುತ್ತಿದಾರೆ ಬೆಳೆ ಹಾನಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ, ತಾಲ್ಲೂಕಿನಲ್ಲಿ ಹೆಚ್ಚು ಕಾಫಿ ಬೆಳೆ ಬೆಳೆಯುತಿದ್ದು, ಮಳೆಗೆ ಶೇಕಡಾ 60 ರಷ್ಟು ಕಾಫಿ ಬೆಳೆ ಭೂಮಿ ಪಾಲಾಗಿದೆ. ಆದ್ದರಿಂದ ಸರಕಾರ ಬೇರೆ ಬೆಳೆಗಳಿಗೆ ನೀಡುವ ಬೆಳೆ ವಿಮೆಯನ್ನು ಕಾಫಿ ಬೆಳೆಗೂ ನೀಡಬೇಕು ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ವಸೂಲಾತಿಗಾಗಿ ಸರ್ಪೆಸಿ ಕಾಯ್ದೆಯಡಿ ರೈತರ ಜಮೀನು ಹರಾಜು ಮಾಡಿ ಭೂಮಿಯನ್ನು ಕಿತ್ತುಕೊಳುತ್ತಿದ್ದಾರೆ ಇದರಿಂದ ರೈತರು ಬೀದಿಗೆ ಬೀಳುವ ಸ್ಥಿತಿಯಲ್ಲಿ ಇದ್ದಾರೆ ತಕ್ಷಣ ಸರ್ಕಾರ ಸರ್ಪೆಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯದರ್ಶಿ ಪಿ. ಕೆ. ನಾಗೇಶ್ ಮಾತನಾಡಿ ಮಳೆಯಿಂದ ಬೆಳೆ ನಷ್ಟ ಆದರೆ ಮತ್ತೊಂದೆಡೆ ಕಾಡು ಪ್ರಾಣಿ ಮತ್ತು ಕಾಡಾನೆಗಳ ಹಾವಳಿಯಿಂದ ರೈತ ಬೆಳೆದ ಬೆಳೆ ನಷ್ಟ ಆಗುತ್ತಿದೆ ಪ್ರತಿ ಬಾರಿ ಬೆಳೆಗಾರರು ಸರಿಯಾದ ಬೆಳೆ ಬೆಳೆಯಲು ಸಾಧ್ಯಗುತ್ತಿಲ್ಲ ಆದ್ದರಿಂದ ಈ ಪ್ರದೇಶವನ್ನು ಅತಿವೃಷ್ಟಿ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕು ಜೊತೆಗೆ ಬೆಳೆ ವಿಮೆಗೆ ಪಹಣಿಯಲ್ಲಿ ಬೆಳೆ ಕಾಲಂ ಸಮಸ್ಯೆಯಿಂದ ಬೆಳೆ ವಿಮೆ ಯೋಜನೆಯಿಂದ ರೈತರು ವಂಚಿತರಾಗುತ್ತಿದ್ದಾರೆ ಇದನ್ನು ಸರಿಪಡಿಸಬೇಕು.  ಕೃಷಿ ಇಲಾಖೆಯಿಂದ ಯಂತ್ರೋಪಕರಣವನ್ನು ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ನಿಯೋಜಿಸಲಾಗಿತ್ತು ಆದರೆ ಮೂಡಿಗೆರೆ ಕಸಬಾ ರೈತ ಸಂಪರ್ಕ ಕೇಂದ್ರ ಹೊರತುಪಡಿಸಿ ಉಳಿದ ಯಾವುದೇ ಕೇಂದ್ರದಲ್ಲಿ ಯಂತ್ರ ಲಭ್ಯ ಇಲ್ಲ ಇದರಿಂದ ರೈತರಿಗೆ ಅನಾನುಕೂಲ ಆಗುತ್ತಿದ್ದು ಇದನ್ನು ಕೂಡಲೇ ಸರಿ ಪಡಿಸಬೇಕು ಎಂದು ಒತ್ತಾಯಿಸಿದರು .

ಈ ವೇಳೆ ಕೃಷಿಕ ಸಮಾಜದ ಸದಸ್ಯ ಹೆಚ್ ಬಿ ಜಗನಾಥ್ ಗೌಡ ಮಾತನಾಡಿ ಅತಿವೃಷ್ಟಿಯಿಂದ ಮೂಡಿಗೆರೆ ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಬೆಳೆ ನಷ್ಟದ ಜೊತೆಗೆ ಭೂಕುಸಿತದಿಂದ ಅನೇಕ ತೋಟಗಳು ನಾಶವಾಗಿವೆ. ನದಿ ನೀರು ಉಕ್ಕಿ ಬೆಳೆಗಳು ಸರ್ವನಾಶವಾಗಿವೆ. ಸರ್ಕಾರ ಇದರ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ