October 5, 2024

ಚಿಕ್ಕಮಗಳೂರು ನಗರ ವ್ಯಾಪ್ತಿಯ ಹಾದಿ-ಬೀದಿಗಳಲ್ಲಿರುವ ಬಿಡಾಡಿ ದನ-ಕರುಗಳಿಂದ ಸಾರ್ವಜನಿಕರು ತೊಂದರೆಗೀಡಾಗುವ ದೃಷ್ಟಿಯಿಂದ ಸೆರೆಹಿಡಿದು ಸುರಕ್ಷಿತವಾಗಿ ಗೋ ಶಾಲೆಗೆ ಕಳುಹಿ ಸಲಾಗಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಹೇಳಿದರು.

ನಗರದ ಉಪ್ಪಳ್ಳಿ ಸಮೀಪದಲ್ಲಿ ನಗರಸಭಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಮುಂಜಾನೆಯಿಂದ ಅಲ್ಲಲ್ಲಿ ಓಡಾಡುತ್ತಿರುವ ದನ-ಕರುಗಳನ್ನು ಶನಿವಾರ ಸುರಕ್ಷಿತ ಸೆರೆಹಿಡಿದು ಕಡೂರು ಸಮೀಪದ ಗೋಶಾಲೆಗೆ ಬಿಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿನಿತ್ಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಬಿಡಾಡಿ ದನಗಳಿಂದ ತೊಂದರೆಗೆ ಒಳಗಾ ಗುತ್ತಿದ್ದಾರೆ. ಸಾರ್ವಜನಿಕರು ದನಗಳನ್ನು ಸ್ವಂತ ಜಾಗದಲ್ಲಿ ಇರಿಸಲು ಅನೇಕ ಬಾರಿ ಪ್ರಕಟಣೆ ಹೊರಡಿ ಸಿದರೂ ಯಾವುದೇ ಕಾಳಜಿ ತೋರದ ಹಿನ್ನೆಲೆ ಸೆರೆಹಿಡಿಯುವ ಕಾರ್ಯಕ್ಕೆ ಮುಂದಾಗಿದೆ ಎಂದರು.

ಬಿಡಾಡಿ ದನಗಳನ್ನು ಕಡಿವಾಣಕ್ಕೆ ಗೋ ಪಾಲಕರಿಗೆ ಅನೇಕ ಬಾರಿ ವಿನಂತಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಗೋ ಪಾಲಕರು ದನಗಳನ್ನು ಕಟ್ಟಿಹಾಕದಿರುವ ಪರಿಣಾಮ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗಿ ಪ್ರಾಣಹಾನಿ ಸಂಭವಿಸುತ್ತಿದೆ. ಹೀಗಾಗಿ ದನಗಳನ್ನು ಶೀಘ್ರದಲ್ಲೇ ಕರೆದೊಯ್ಯದಿದ್ದರೆ ಗೋ ಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಥಳೀಯ ನಿವಾಸಿಗಳು ಮನೆಯ ಮುಂಭಾಗದಲ್ಲಿ ದನಗಳಿಗೆ ಆಹಾರ ಒದಗಿಸುವ ಕಾರಣ ಹಸು ಗಳ ಗುಂಪು ತಾಣವಾಗಿ ಮಾಡಿಕೊಂಡಿದೆ. ಹೀಗಾಗಿ ನಿವಾಸಿಗಳು ಆಹಾರವಿಡಲು ಮುಂದಾಗದಂತೆ ಎಚ್ಚರಿಕೆ ವಹಿಸಬೇಕು. ಹದಿನೈದು ದಿನಗಳ ಹಿಂದೆ ನಗರಸಭೆಯಿಂದ ಅನೇಕ ಬಿಡಾಡಿ ದನಗಳನ್ನು ಹಿಡಿ ದು ಗೋಶಾಲೆಗೆ ಕಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಈಶ್ವರಪ್ಪ, ರಂಗಪ್ಪ, ನಾಗಪ್ಪ, ಶಶಿರಾಜ್, ವೆಂಕಟೇಶ್, ಪ್ರಾಣಿದಯ ಸಂಘದ ಅಧ್ಯಕ್ಷೆ ನಳೀನಾ ಡೀಸಾ, ಸ್ಥಳೀಯರಾದ ಕಬೀರ್‌ಖಾನ್ ಮತ್ತಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ